Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಂಕಿತಾ ರೈನಾ ಜೋಡಿಗೆ ಡಬಲ್ಸ್ ಗರಿ

ಪುಣೆ: 

ಭಾರತದ ಅಗ್ರ ಶ್ರೇಯಾಂಕಿತೆ ಅಂಕಿತಾ ರೈನಾ ಮತ್ತು ಕರ್ಮನ್ ಕೌರ್ ಥಾಂಡಿಯಾ ಜೋಡಿ ಐಟಿಎಫ್ ಬಿವಿಜಿ ಪುಣೆ ಓಪನ್ ಮಹಿಳೆಯರ ಟೆನಿಸ್ ಚಾಂಪಿಯನ್‌ಶಿಪ್ ಡಬಲ್‌ಸ್‌ ಪ್ರಶಸ್ತಿಿ ಜಯಿಸಿತು.

ಇಲ್ಲಿ ನಡೆದ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತ ಜೋಡಿ ಥಮಾರ ಜಿಡಾನ್‌ಸೆಕ್ ಮತ್ತು  ಅಲೆಗ್ಸಾಂಡ್ರಿನಾ  ನಯಾಡೆನೋವಾ ಜೋಡಿಯನ್ನು 6-2, 6-7, 11-9 ಅಂತರಗಳಿಂದ ಮಣಿಸಿ ಜಯ ದಾಖಲಿಸಿತು. ಪಂದ್ಯ ಆರಂಭದಿಂದಲೂ ಉತ್ತಮ ಆಟವಾಡುವಲ್ಲಿ ಯಶಸ್ವಿಯಾದ ಕೌರ್ ಜೋಡಿ ಮೊದಲ ಸೆಟ್‌ನಲ್ಲಿ ನಾಲ್ಕು ಅಂಕಗಳ ಮುನ್ನಡೆಯಾದರೆ, ಎರಡನೇ ಸೆಟ್‌ನಲ್ಲಿ ನೀರಸ ಪ್ರದರ್ಶನದೊಂದಿಗೆ ಒಂದು ಅಂಕ ಹಿನ್ನಡೆಯಾಯಿತು.  ಕೊನೆಯ ಸೆಟ್‌ನಲ್ಲಿ ಎಚ್ಚೆೆತ್ತುಕೊಂಡ ರೈನಾ ಜೋಡಿ ಬಲಿಷ್ಠ ಹೊಡೆತಗಳಿಂದ ಎದುರಾಳಿ ಆಟಗಾರರ ಬೆವರಿಳಿಸಿ ನಾಲ್ಕು ಪಾಯಿಂಟ್‌ಗಳ ಮುನ್ನಡೆಯಾಗಿ ಗೆಲುವಿನ ನಗೆ ಬೀರಿತು.
ಟೂರ್ನಿಯ ಆರಂಭಿಕ ಸುತ್ತಿನಿಂದಲೂ ಭರ್ಜರಿ ಆಟವಾಡುವಲ್ಲಿ ಯಶಸ್ವಿಯಾಗಿದ್ದ ರೈನಾ ಜೋಡಿ ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ಆಟದೊಂದಿಗೆ ಗೆಲುವು ಸಾಧಿಸುವ ಮೂಲಕ ತವರಿನ ಅಭಿಮಾನಿಗಳ ಮನ ಗೆದ್ದರು.
ಫೈನಲ್‌ಗೆ ಥಾಂಡಿಯಾ:
ಮಹಿಳೆಯರ ಸಿಂಗಲ್‌ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಕರ್ಮನ್ ಕೌರ್ ಥಾಂಡಿಯಾ ಅವರು ಅಂಕಿತಾ ರೈನಾ ಅವರನ್ನು ಸೋಲಿಸಿ ಅಂತಿಮ ಸುತ್ತಿಗೆ ಅರ್ಹತೆ ಪಡೆದರು. ಥಾಂಡಿಯಾ 2-6, 6-2, 6-4 ಅಂತರಗಳಿಂದ ಜಯ ತಮ್ಮದಾಗಿಸಿಕೊಂಡರು.
ಪಂದ್ಯದ ಆರಂಭಿಕ ಸೆಟ್‌ನಲ್ಲಿ ನೀರಸ ಪ್ರದರ್ಶನದೊಂದಿಗೆ ನಾಲ್ಕು ಅಂಕಗಳ ಹಿನ್ನಡೆಯಾದರೆ, ಎರಡು ಹಾಗೂ ಮೂರನೇ ಸೆಟ್‌ಗಳಲ್ಲಿ ಉತ್ತಮ ಆಟವಾಡಿ ನಾಲ್ಕು ಹಾಗೂ ಎರಡು ಅಂಕಗಳ ಮುನ್ನಡೆ ಸಾಧಿಸಿ ಗೆಲುವಿನ ನಗೆ ಬೀರಿದರು. ರೈನಾ ಪಂದ್ಯದಒಂದು ಸೆಟ್ ಮುನ್ನಡೆಯಾದರೆ, ಎರಡು ಹಾಗೂ ಮೂರನೇ ಸೆಟ್‌ಗಳಲ್ಲಿ ನೀರಸ ಪ್ರದರ್ಶನದೊಂದಿಗೆ ಸೋಲಿಗೆ ಶರಣಾದರು.

administrator