ತಲೈವಾಸ್ ಎದುರು ಗೆದ್ದ ಪೈರೇಟ್ಸ್

0
223
ಅಹಮದಬಾದ್:

ಪ್ರದೀಪ್  ನರ್ವಾಲ್ (13), ದೀಪಕ್ ನರ್ವಾಲ್(10) ಮತ್ತು ಮನ್‌ಜೀತ್(8) ಅವರ ಅಮೋಘ ಪ್ರದರ್ಶನದಿಂದ ಪಾಟ್ನಾ ಪೈರೇಟ್ಸ್  ಪ್ರಸಕ್ತ ಸಾಲಿನ ಪ್ರೊ ಕಬಡ್ಡಿಯ 74ನೇ ಪಂದ್ಯದಲ್ಲಿ ತಮಿಳು ತಲೈವಾಸ್ ಎದುರು 45-27 ಅಂತರದಿಂದ ಭರ್ಜರಿ ಜಯ ದಾಖಲಿಸಿತು.

ಇಲ್ಲಿನ ದಿ ಆರೆನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪೈರೇಟ್ಸ್ ಯಶಸ್ವಿ ಆಟವಾಡುವಲ್ಲಿ ಸಫಲವಾಯಿತು. ಪಂದ್ಯ ಆರಂಭದಿಂದಲೂ ಪಾಟ್ನಾ ಆಟಗಾರರು ಉತ್ತಮ ರೈಡಿಂಗ್ ಮತ್ತು ಟ್ಯಾಕಲ್‌ಗಳನ್ನು ನಡೆಸಿ ಎದುರಾಳಿ ಆಟಗಾರರ ಬೆವರಿಳಿಸಿ ಹೆಚ್ಚಿನ ಅಂಕಗಳನ್ನು ಪಡೆಯಿತು. ತಲೈವಾಸ್‌ನ ಅಜಯ್ ಠಾಕೂರ್(8), ಮನ್‌ಜೀತ್ ಚೆಲ್ಲರ್(5) ಅವರನ್ನು ಬಿಟ್ಟರೆ ಉಳಿದವರು ಕಳಪೆ ಆಟವಾಡುವ ಮೂಲಕ ತಂಡ ಸೋಲಿಗೆ ಶರಣಾಯಿತು. ಕಳೆದ ಪಂದ್ಯದಲ್ಲಿ ತಲೈವಾಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿತ್ತು.