Saturday, July 20, 2024

ಫೆಡರರ್ ಗೆ ಆಘಾತ ನೀಡಿದ ಜೊಕೊವಿಚ್

ಪ್ಯಾರಿಸ್:

ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್ ಸೆಮಿಫೈನಲ್‍ನಲ್ಲಿ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಅವರು ಸ್ವಿಜರ್‍ಲೆಂಡ್ ಸ್ಟಾರ್ ಆಟಗಾರ ರೋಜರ್ ಫೆಡರರ್ ಅವರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶ ಮಾಡಿದ್ದಾರೆ.

ಮತ್ತೊಂದು ಸೆಮಿಫೈನಲ್‍ನಲ್ಲಿ ರಷ್ಯಾ ಯುವ ಆಟಗಾರ ಕರೆನ್ ಖಾಚ್ನೊವ್ ಅವರು ದೊಮಿನಿಕ್  ಥೀಮ್ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ತೀವ್ರ ಕತೂಹಲ ಕೆರಳಿಸಿದ್ದ ವಿಶ್ವ ಶ್ರೇಷ್ಠ  ಆಟಗಾರರಾದ ರೋಜರ್ ಫೆಡರರ್ ಹಾಗೂ ನೊವಾಕ್ ಜೊಕೊವಿಚ್ ನಡುವಿನ ವೃತ್ತಿ ಜೀವನದ 47ನೇ ಮುಖಾಮುಖಿಯಲ್ಲಿ ಸರ್ಬಿಯಾ ತಾರೆ 7-6(8-6), 5-7, 7-6(7-3) ಅಂತರದಲ್ಲಿ ಜಯ ಸಾಧಿಸಿದರು. ಇದರೊಂದಿಗೆ ಪ್ರಸಕ್ತ ಆವೃತ್ತಿಯ ಮತ್ತೊಂದು ಮೈಲಿಗಲ್ಲಿನತ್ತಾ ಸರ್ಬಿಯಾ ಆಟಗಾರ ಹೆಜ್ಜೆ ಹಾಕಿದರು. ಇಂದು ನೊವಾಕ್ ಜೊಕೊವಿಚ್  ದೀರ್ಘ ಅವಧಿಯ ಬಳಿಕ  ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿ ವಿಶ್ವ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಅಲಂಕರಿಸಿಲಿದ್ದಾರೆ.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ 22 ವರ್ಷದ ಕರೆನ್ ಖಾಚ್ನೊವ್ ಅವರು ಡೊಮೊನಿಕ್  ಥೀಮ್ ಅವರನ್ನು 6-4, 6-1 ನೇರ ಸೆಟ್‍ಗಳ ಮೂಲಕ ಮಣಿಸಿ ವೃತ್ತಿ ಜೀವನದ ಶ್ರೇಷ್ಠ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಕರೆನ್ ಪ್ರಸಕ್ತ ವರ್ಷದಲ್ಲಿ ಈಗಾಗಲೇ ಎರಡು ಒಳಾಂಗಣ ಹಾರ್ಡ್ ಕೋರ್ಟ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಆ ಮೂಲಕ ಪ್ಯಾರಿಸ್ ಮಾಸ್ಟರ್ಸ್ ಫೈನಲ್ ಹಣಾಹಣಿಯಲ್ಲಿ ಕರೆನ್ ಕಚನಾವ್  ಹಾಗೂ ನೊವಾಕ್ ಜೊಕೊವಿಚ್  ಸೆಣಸಲಿದ್ದಾರೆ.

Related Articles