Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸೆಮಿಫೈನಲ್‌ ಬಗ್ಗೆ ಸಂಶಯ ವ್ಯಕ್ತಪಡಿಸಿದ ನೊವಾಕ್‌ ಜೋಕೋವಿಕ್‌

ಮೆಲ್ಬೋರ್ನ್‌: ಕಾರ್ಲೋಸ್‌ ಅಲ್ಕರಾಝ್ ವಿರುದ್ಧದ ಕ್ವಾರ್ಟ್‌ಫೈನಲ್‌ ಪಂದ್ಯದ ಮೊದಲ ಸೆಟ್‌ನಲ್ಲಿ ಗಾಯಗೊಂಡು ವಿಶ್ರಾಂತಿ ಪಡೆದಿದ್ದ ಸರ್ಬಿಯಾದ ನೊವಾಕ್‌ ಜೋಕೋವಿಕ್‌ ಗಾಯದ ಚಿಂತೆಯ ಕಾರಣ ಸೆಮಿಫೈನಲ್‌ ಪಂದ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. After winning quarter final match against Carlos Alcaraz Serbia player Novak Djokovic casts doubt about Semifinal match.

ಸೆಮಿಫೈನಲ್‌ ಪಂದ್ಯದಲ್ಲಿ ಜೋಕೋವಿಕ್‌ ಅವರು ಅಲೆಕ್ಸಾಮಡರ್‌ ಜ್ವರೇವ್‌ ಅವರನ್ನು ಎದುರಿಸಲಿದ್ದಾರೆ. ಮಂಗಳವಾರ ಅಲ್ಕರಾಝ್‌‌ ವಿರುದ್ಧದ ಮೊದಲ ಎರಡು ಸೆಟ್‌ಗಳನ್ನಾಡುವಾಗ ಜೋಕೋವಿಕ್‌ ಗಾಯದ ಸಮಸ್ಯೆಯಿಂದ ಬಳಲಿ ವೈದ್ಯಕೀಯ ವಿಶ್ರಾಂತಿ ಪಡೆದಿದ್ದರು; ಆದರೂ ಚೇತರಿಸಿಕೊಂಡು ದಿಟ್ಟ ಹೋರಾಟ ನೀಡಿ 4-6, 6-4, 6-3, 6-4 ಅಂತರದಲ್ಲಿ ಜಯ ಗಳಿಸಿ 50ನೇ ಗ್ರ್ಯಾಂಡ್‌ ಸ್ಲಾಮ್‌ ಸೆಮಿಫೈನಲ್‌ ಪ್ರವೇಶಿಸಿದ್ದರು. ಮೂರು ಗಂಟೆ 37 ನಿಮಿಷಗಳ ಕಾಲ ಹೋರಾಟ ನೀಡಿದ ಜೋಕೋವಿಕ್‌, ಆನ್‌ ಕೋರ್ಟ್‌ ಸಂದರ್ಶನದಲ್ಲಿ ನೋವಿನ ಬಗ್ಗೆ ಮಾತನಾಡಲಿಲ್ಲ. ಆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರು, “ಶುಕ್ರವಾರ ಸೆಮಿಫೈನಲ್‌ ಪಂದ್ಯವಿದೆ. ಎರಡು ದಿನಗಳ ಕಾಲಾವಕಾಶವಿದೆ. ನಾಳೆ ಬೆಳಿಗ್ಗೆ ಪರಿಸ್ಥಿತಿ ಹೇಗಿರುತ್ತದೆ ನೋಡಬೇಕು,” ಎಂದಿದ್ದಾರೆ.


administrator