ದಕ್ಷಿಣದಲ್ಲಿ ಮಿಂಚಿದ ಉತ್ತರದ ಗಿಲ್

0
255
ಸ್ಪೋರ್ಟ್ಸ್ ಮೇಲ್ ವರದಿ 

ಐದು ದಿನಗಳ ಕಾಲ ನಡೆದ ಮಾರುತಿ ಸುಜುಕಿ ದಕ್ಷಿಣ್ ಡೇರ್ ರಾಲಿ ಚಾಂಪಿಯನ್‌ಷಿಪ್‌ನಲ್ಲಿ  ದೇಶದ ನಂ. ೧ ರಾಲಿ ಪಟು ಗೌರವ್ ಗಿಲ್ ಆರು ವರ್ಷಗಳ ನಂತರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.

ನಂಬಿಕೆಯ ನೇವಿಗೇಟರ್ ಮೂಸಾ ಷರೀಫ್ ಅವರೊಂದಿಗೆ ಆರು ಬಾರಿ ಎಪಿಆರ್‌ಸಿ ಚಾಂಪಿಯನ್ ಗಿಲ್ ಐದು ಲೆಗ್‌ಗಳ, ೧೫ ವಿಶೇಷ ಸ್ಟೇಜ್‌ಗಳನ್ನು  ಗೆದ್ದು ಅಗ್ರ ಸ್ಥಾನ ಕಾಯ್ದುಕೊಂಡರು.
ಬೈಕ್ ವಿಭಾಗದಲ್ಲಿ  ವಿಶ್ವಾಸ್ ಎಸ್.ಡಿ. ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ನಿರಂತರವಾಗಿ ಮುನ್ನಡೆ ಕಂಡು, ಈ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆಲ್ಲುವ ಫೇವರಿಟ್ ಎನಿಸಿದ್ದ  ಯುವ ಕುಮಾರ್ ವಿಶೇಷ ಸ್ಟೇಜ್‌ನಲ್ಲಿ ಕೊನೆಯ ಸ್ಥಾನ ಪಡೆದು ಪ್ರಶಸ್ತಿಯಿಂದ ವಂಚಿತರಾದರು.
ಗಿಲ್ ಅವರ ಸಹಸ್ಪರ್ಧಿ ಫಿಲಿಪ್ಪೋಸ್ ಮಥಾಯ್ ಹಾಗೂ ಪಿವಿಎಸ್ ಮೂರ್ತಿ  ಸಮಗ್ರ ಎರಡನೇ ಸ್ಥಾನ ಗಳಿಸಿದರು. ಮಾರುತಿ ಸುಜುಕಿಯ ಸಮರ್ಥ ಯಾದವ್ ಹಾಗೂ ಕರಣ್ ಅಕುತಾ ಮೂರನೇ ಸ್ಥಾನ ಗಳಿಸಿದರು. ಮಾರುತಿ ಸುಜುಕಿಯ ಸಂದೀಪ್ ಶರ್ಮಾ ಹಾಗೂ ಸುರೇಶ್ ರಾಣಾ ನಾಲ್ಕು ಹಾಗೂ ಐದನೇ ಸ್ಥಾನ ಗಳಿಸಿದರು.
ಸೆ. ೨ರಂದು ಬೆಂಗಳೂರಿನಲ್ಲಿ ಆರಂ‘ಗೊಂಡ 2000 ಕಿ.ಮೀ. ವ್ಯಾಪ್ತಿಯ ರಾಲಿ, ಮಹಾರಾಷ್ಟ್ರದ ಗೋವಾದಲ್ಲಿ ಕೊನೆಗೊಂಡಿತು.

ಕಾರುಗಳ ವಿಭಾಗ

೧.ಗೌರವ್ ಗಿಲ್ -ಮೂಸಾರ ಷರೀಫ್ .
೨.ಫಿಲಿಪ್ಪೋಸ್ ಮಥಾಯ್ -ಪಿವಿಎಸ್ ಮೂರ್ತಿ
೩.ಸಮರ್ಥ್ ಯಾದವ್ -ಕರಣ್ ಅಕುತಾ

ಬೈಕ್ ವಿಭಾಗ

೧.ವಿಶ್ವಾಸ್ ಎಸ್.ಡಿ
೨.ವಿನಯ್ ಪ್ರಸಾದ್
೩.ಯುವ ಕುಮಾರ್.
ಮುಕ್ತ ಕಾರ್ ವಿಭಾಗ
೧.ಪ್ರಮೋದ್ ವಿಗ್-ಪ್ರಕಾಶ್ ಎಂ.
೨.ರಘುನಂದನ್-ಸಾಕ್ತೇವೆಲ್
೩. ಸಂತೋಷ್-ನಾಗಾ
ಎಸ್‌ಯುವಿ ಓಪನ್
ವಿನಯ್ ಕುಮಾರ್-ರವಿ ಕುಮಾರ್