Saturday, July 20, 2024

ರಾಜ್ಯಮಟ್ಟದ ಸೈಕ್ಲಿಂಗ್: ಕಮಲ್‌ರಾಜ್ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ

ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌ನ ಎರಡನೇ ದಿನದಲ್ಲಿ ಮೈಸೂರು ಜಿಲ್ಲಾ ಸ್ಪರ್ಧಿಗಳು ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡರು.

ಇದುವರೆಗೂ ಉತ್ತರ ಕರ್ನಾಟಕದ ಸ್ಪರ್ಧಿಗಳು ಪ್ರಭುತ್ವ ಸಾಧಿಸುತ್ತಿದ್ದ ಚಾಂಪಿಯನ್‌ಷಿಪ್‌ನಲ್ಲಿ ಈ ಬಾರಿ ಮೈಸೂರು ಜಿಲ್ಲಾ ಸ್ಪರ್ಧಿಗಳು ಪ್ರಭುತ್ವ ಸಾಧಿಸಿರುವುದು ವಿಶೇಷ.
ಎರಡನೇ ದಿನದಲ್ಲಿ ಗ್ರೂಪ್ ರೇಸ್ ಸ್ಪರ್ಧೆ ನಡೆಯಿತು. ೧೮ ವರ್ಷ ವಯೋಮಿತಿಯ ಬಾಲಕರ ವಭಾಗದಲ್ಲಿ ಮೈಸೂರಿನ ಕಮಲ್‌ರಾಜ್ ಚಿನ್ನ ಗೆದ್ದರಲ್ಲದೆ, ಪುರುಷರ ವಿಭಾಗದಲ್ಲೂ ಚಾಂಪಿಯನ್ ಪಟ್ಟ  ತಮ್ಮದಾಗಿಸಿಕೊಂಡರು. ೧೬ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕರೇನ್ ಮಾರ್ಷಲ್ ಬೆಳ್ಳಿ ಗೆದ್ದರು. ೧೮ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಅದೋನಿ ಬೆಳ್ಳಿ ಗೆದ್ದರು. ಈ ಎಲ್ಲ ಸಾಧಕರು ಸೈಕ್ಲಿಂಗ್ ಮೈ ಸ್ಟೋರಿ ಟ್ರೈನಿಂಗ್ ಅಕಾಡೆಮಿಯಲ್ಲಿ ನಾಗರಾಜ್ ಅವರಲ್ಲಿ ತರಬೇತಿ ಪಡೆದು ಪಳಗಿರುತ್ತಾರೆ.

Related Articles