Monday, December 11, 2023

ಶ್ರೀಲಂಕಾದ ಮಾಜಿ ಕ್ರಿಕೆಟಿಗರು ಬಸ್‌ ಚಾಲಕರಾದ ಕತೆ!

ಶ್ರೀಲಂಕಾದ ಮಾಜಿ ಕ್ರಿಕೆಟಿಗರು ಬಸ್‌ ಚಾಲಕರಾದ ಕತೆ!

ಮೆಲ್ಬೋರ್ನ್:‌ ಕ್ರಿಕೆಟ್‌ನಲ್ಲಿ ಮಿಂಚಿದರೆ ಬದುಕು ಸಿರಿತನದಿಂದ ಕೂಡಿರುತ್ತದೆ, ಆದರೆ ಒಮ್ಮೆ ಅದೃಷ್ಟವಿಲ್ಲದೆ ಅಂಗಣದಿಂದ ಕ್ರಿಕೆಟಿಗರು ಹೊರ ನಡೆದರೆಂದರೆ ಜನ ಏಕೆ, ಅವರ ಜೊತೆಗೆ ಆಡಿದವರೇ ಮಾತನಾಡಿಸುವುದು ಕಡಿಮೆ. ಶ್ರೀಲಂಕಾದ ಇಬ್ಬರು ಅಂತಾರಾಷ್ಟ್ರೀಯ ಮಾಜಿ ಆಟಗಾರರು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಬಸ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. Sri Lanka’s former cricketers working as a bus driver in Australia.

ಇದು ಎರಡು ವರ್ಷಗಳ ಹಿಂದಿನ ವಿಷಯ. ಆದರೆ ಕ್ರಿಕೆಟ್‌ನಲ್ಲಿ ಬದುಕು ರೂಪಿಸಿಕೊಳ್ಳಲಾಗದಿದ್ದರೆ ನಾವೆಲ್ಲಿ ತಲುಪುತ್ತೇವೆ ಎಂಬುದಕ್ಕೆ ಇದು ಉತ್ತಮ ನಿದರ್ಶಶನ. ಹೀಗೆ ಅನೇಕ ಕ್ರಿಕೆಟಿಗರು ವೃತ್ತಿಪರ ಆಟದಲ್ಲಿ ಯಶಸ್ಸು ಕಾಣದೆ ಬದುಕಲು ಬೇರೆ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ನ್ಯೂಜಿಲೆಂಡ್‌ನ ಕ್ರಿಸ್‌ ಕೇರ್ನ್ಸ್‌ ಕೂಡ ಚಾಲಕರಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ಕೇಳಿದ್ದೇವೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅರ್ಷಾದ್‌ ಖಾನ್‌ ಭಾರತ ತಂಡದ ಉತ್ತಮ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಕಿತ್ತ ಬೌಲರ್‌. ಆದರೆ ಇಂಡಿಯನ್‌ ಸೂಪರ್‌ ಲೀಗ್‌ ಸೇರಿದ ಕಾರಣ ಮತ್ತೆ ಪಾಕ್‌ ತಂಡವನ್ನು ಸೇರಿಕೊಳ್ಳಲಾಗಲಿಲ್ಲ. ಇದ್ದ ಆಸ್ತಿಯನ್ನೆಲ್ಲ ಮಾರಿ ಆಸ್ಟ್ರೇಲಿಯಾಕ್ಕೆ ಹೋಗಿ ಅಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡಿದ. ಯಾರೋ ಕ್ರಿಕೆಟ್‌ ಪ್ರೇಮಿ ಇದನ್ನು ಪತ್ತೆ ಹಚ್ಚಿ ಮಾಧ್ಯಮಗಳಲ್ಲಿ ಸುದ್ದಿಯಾಯಿತ. ಬಳಿಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅರ್ಷಾದ್‌ನನ್ನು ಕರೆಸಿ ಮಹಿಳಾ ಕ್ರಿಕೆಟ್‌ ತಂಡದ ಬೌಲಿಂಗ್‌ ಕೋಚ್‌ ಹುದ್ದೆ ನೀಡಿತ್ತು. ನ್ಯೂಜಿಲೆಂಡ್‌ನ ಕ್ರಿಸ್‌ ಹ್ಯಾರಿಸ್‌ ಆಸ್ಟ್ರೇಲಿಯಾದಲ್ಲಿ ಮೆಡಿಕಲ್‌ ರೆಪ್‌ ಆಗಿ ಕೆಲಸ ಮಾಡುತ್ತ ಬಳಿಕ 19ವಯೋಮಿತಿಯ ಆಟಗಾರರಿಗೆ ತರಬೇತಿ ನೀಡುತ್ತಿದ್ದರು. ನ್ಯೂಜಿಲೆಂಡ್‌ನ ಇವಾನ್‌ ಚಾಟ್‌ಫೀಲ್ಡ್‌ 43 ಟೆಸ್ಟ್‌ ಪಂದ್ಯಗಳನ್ನಾಡಿ 123 ವಿಕೆಟ್‌ ಹಾಗೂ 114 ಏಕದಿನ ಪಂದ್ಯಗಳನ್ನಾಡಿ 140 ವಿಕೆಟ್‌ ಗಳಿಸಿದ ಬೌಲರ್‌ ಆದರೆ ಕೊನೆಗೆ ಸಿಕ್ಕಿದ್ದು ಟ್ಯಾಕ್ಸಿ ಚಲಾಯಿಸುವ ಕೆಲಸ.

ಶ್ರೀಲಂಕಾ ಕ್ರಿಕೆಟ್‌ ತಂಡದ ಸ್ಪಿನ್‌ ಬೌಲರ್‌ ಸೂರಜ್‌ ರಣ್ದೀವ್‌ ಹಾಗೂ ಚಿಂತಕ ಜಯಸಿಂಘೆ ಆಸ್ಟ್ರೇಲಿಯಾದ ಸಾರಿಗೆ ಸಂಸ್ಥೆಯೊಂದರಲ್ಲಿ ಬಸ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಲಂಕಾದಲ್ಲಿ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡು ಜನರು ಆಡಳಿತದ ವಿರುದ್ಧ ದಂಗೆ ಎದ್ದಾಗ ಈ ಇಬ್ಬರು ಬೌಲರ್‌ಗಳು ಬದುಕಿಗಾಗಿ ಆಸ್ಟ್ರೇಲಿಯಾ ಸೇರಿದರು. ಇಲ್ಲೀಗ ಬಸ್‌ ಚಲಾಯಿಸುತ್ತಿದ್ದು ಮುಂದಿನ ದಿನಗಳಲ್ಲಿ ಕ್ರಿಕೆಟ್‌ಗೆ ಅವಕಾಶ ಸಿಕ್ಕರೆ ಆಸ್ಟ್ರೇಲಿಯಾದಲ್ಲೇ ಆಡುವ ಆಶಯ ವ್ಯಕ್ತಪಡಿಸಿದ್ದಾರೆ.

Related Articles