ಜೈನ್ ಕಾಲೇಜಿನಲ್ಲಿ ಕ್ರೀಡಾ ಪ್ರಶಸ್ತಿ ಪ್ರದಾನ

0
237
ಸ್ಪೋರ್ಟ್ಸ್ ಮೇಲ್ ವರದಿ:

ಜಾಗತಿಕ ಕ್ರೀಡೆಗೆ ಹಲವಾರು ಪ್ರತಿಭೆಗಳನ್ನು ನೀಡಿದ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಗುರುವಾರ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿತು.

ಈಜು, ಬ್ಯಾಡ್ಮಿಂಟನ್, ಗಾಲ್ಫ್, ಕ್ರಿಕೆಟ್, ಟೆನಿಸ್, ಟೇಬಲ್ ಟೆನಿಸ್ ಸೇರಿದಂತೆ ಅನೇಕ ಕ್ರೀಡೆಗಳಲ್ಲಿ ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಟೆನಿಸ್ ತಾರೆ ರೋಹನ್ ಬೋಪಣ್ಣ ಪ್ರಶಸ್ತಿ ಪ್ರದಾನ ಮಾಡಿದರು.
ಜೈನ್ ವಿಶ್ವವಿದ್ಯಾಲಯ ಟ್ರಸ್ಟ್‌ನ ಅಧ್ಯಕ್ಷ ಡಾ. ಚೆನ್‌ರಾಜ್ ಜೈನ್,  ಜೈನ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎನ್. ಸುಂದರ್ ರಾಜನ್, ಜೈನ್ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಎನ್.ವಿ.ಎಚ್. ಕೃಷ್ಣನ್, ಜೈನ್ ವಿಶ್ವವಿದ್ಯಾನಿಲಯದ ಡೀನ್ ಡಾ. ದಿನೇಶ್ ನೀಲಕಾಂತ್, ಸ್ಕೂಲ್ ಆಫ್  ಗ್ರಾಜ್ಯುಯೇಷನ್ ಸ್ಟಡೀಸ್‌ನ ನಿರ್ದೇಶಕರಾದ ಡಾ. ಆಶಾ ರಾಜೀವ್ ಹಾಗೂ ಜೈನ್ ವಿವಿ ಕ್ರೀಡಾ ನಿರ್ದೇಶಕ ಡಾ. ಯು.ವಿ. ಶಂಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.