Sunday, May 26, 2024

ಗೋಪಾಲ ಅಡಿಗ ಸ್ಮಾರಕ ಈಜು ಸ್ಪರ್ಧೆ

ಸ್ಪೋರ್ಟ್ಸ್ ಮೇಲ್ ವರದಿ:

ಉಡುಪಿ ಜಿಲ್ಲೆಯ ಹಲವಾರು ಈಜುಪಟುಗಳಿಗೆ ತರಬೇತಿ ನೀಡಿದ್ದ ಗೋಪಾಲ ಅಡಿ ಸ್ಮಾರಕ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಆಗಸ್ಟ್ ೧೨,ರ ಭಾನುವಾರ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆಯಲಿದೆ.

ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್ ಆಯೋಜಿಸಿರುವ ಈ ಚಾಂಪಿಯನ್‌ಷಿಪ್‌ನ ಯಶಸ್ಸಿಗೆ ರೋಟರಿ ಕ್ಲಬ್ ಹಂಗಾರಕಟ್ಟೆ -ಸಾಸ್ತಾನ, ಗೀತಾನಂದ ಫೌಂಡೇಷನ್ ಮಣೂರು, ಮಹಾಲಸಾ ಎಂಟರ್‌ಪ್ರೈಸಸ್ ಸಾಲಿಗ್ರಾಮ, ಏಕದಂತ ಎಂಟರ್‌ಪ್ರೈಸಸ್ ಸಾಲಿಗ್ರಾಮ ಪ್ರೋತ್ಸಾಹ ನೀಡಲಿವೆ.
ಬೆಳಿಗ್ಗೆ ೭.೩೦ರಿಂದ ಮಧ್ಯಾಹ್ನ ೧೨.೩೦ವರೆಗೆ ಸ್ಪರ್ಧೆಗಳು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಬಳಿ ಇರುವ ಪುಷ್ಕರಣಿಯಲ್ಲಿ ನಡೆಯಲಿದೆ.
ಸಭಾಕಾರ್ಯಕ್ರಮದಲ್ಲಿ ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್‌ನ ಗೌರವ ಅಧ್ಯಕ್ಷ, ಉದ್ಯಮಿ ಆನಂದ ಕುಂದರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧ  ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಉಪ ನಿರ್ದೇಶಕ  ರೋಷನ್ ಕುಮಾರ್ ಶೆಟ್ಟಿ,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಅನಂತ ಪದ್ಮನಾಭ ಐತಾಳ, ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಅಧ್ಯಕ್ಷೆ ರತ್ನಾ ನಾಗರಾಜ ಗಾಣಿಗ, ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನದ ಅಧ್ಯಕ್ಷೆ ಸುಲತಾ ಹೆಗ್ಡೆ ಭಾಗವಹಿಸುವರು.
ಸಾಲಿಗ್ರಾಮ ಸ್ಮಿಮ್ಮಿಂಗ್ ಕ್ಲಬ್‌ನ ಅಧ್ಯಕ್ಷ ಅನಂತಪದ್ಮನಾಭ  ಚೇಂಪಿ, ಮಹಾಲಸಾ ಎಂಟರ್‌ಪ್ರೈಸಸ್‌ನ ನಿತ್ಯಾನಂದ ಶ್ಯಾನುಭಾಗ್, ಸಾಲಿಗ್ರಾಮ ಏಕದಂತ ಎಂಟರ್‌ಪ್ರೈಸಸ್‌ನ ಚಂದ್ರಶೇಖರ ಕಾರಂತ, ನ್ಯೂ ಕಾರ್ಡಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್ ಅವರು ಕಾರ್ಯಕ್ರಮದಲ್ಲಿ ಹಾಜರಿರುವರು.
ರಾಷ್ಟ್ರಮಟ್ಟದ ಈಜುಪಟು ಉಡುಪಿಯ ಕುಮಾರಿ ಅಭಿಜ್ಞಾ ಅವರನ್ನು ಇದೇ ಸಂದ‘ರ್ದಲ್ಲಿ ಗೌರವಿಸಲಾಗುವುದು. ಗಿನ್ನಿಸ್‌ದಾಖಲೆಯ ಈಜುಗಾರ ಗೋಪಾಲ ಕಾರ್ವಿ ಅವರು ತೀರ್ಪುಗಾರರಾಗಿ ಪಾಲ್ಗೊಳ್ಳವರು.

Related Articles