Friday, February 23, 2024

ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್: ಕರ್ನಾಟಕಕ್ಕೆ ಎರಡು ಪದಕ

ಉತ್ತರಕಾಶಿ:

26ನೇ ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌ನ ಸಬ್‌ ಜೂನಿಯರ್‌ ಬಾಲಕರ ಲೀಡ್‌ ವಿಭಾಗದಲ್ಲಿ ಕರ್ನಾಟಕದ ಧನುಷ್‌ ಜೆ. ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

03:09 ನಿಮಿಷಗಳಲ್ಲಿ ಗುರಿ ತಲುಪಿದ ಧನುಷ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಜಾರ್ಖಂಡ್‌ ಹಾಗೂ ಮಹಾರಾಷ್ಟ್ರದ ಸ್ಪರ್ಧಿಗಳು ಈ ವಿಭಾಗದಲ್ಲಿ ಚಿನ್ನ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಕರ್ನಾಟಕದ ಇನ್ನೋರ್ವ ಸ್ಪರ್ಧಿ ದಕ್ಷಿಲ್‌ ಮಾಥುರಿಯಾ ನಾಲ್ಕನೇ ಸ್ಥಾನ ಗಳಿಸಿದರು.

ಸಬ್‌ ಜೂನಿಯರ್‌ ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಚನಸ್ಯಾ ಡಿ. ಕಂಚಿನ ಪದಕ ಗೆದ್ದರು. 02.48 ನಿಮಿಷಗಳಲ್ಲಿ ಗುರಿ ತಲುಪಿದ ಚನಸ್ಯ ಮೂರನೇ ಸ್ಥಾನಿಯಾದರು. ಈ ವಿಭಾಗದಲ್ಲಿ ಜಾರ್ಖಂಡ್‌ನ ಸ್ಪರ್ಧಿಗಳು ಚಿನ್ನ ಹಾಗೂ ಬೆಳ್ಳಿ ಗೆದ್ದರು. ಕರ್ನಾಟಕದ ಇನ್ನೋರ್ವ ಸ್ಪರ್ಧಿ ಗಗನ್‌ ವೈಷ್ಣವಿ ನಾಗ್‌ ಏಳನೇ ಸ್ಥಾನ ಗಳಿಸಿದರು.

Related Articles