Saturday, July 27, 2024

ಸಿದ್ಧಪ್ಪ ಗೇಮ್‌ಚೆಂಜರ್ ೧೦ಕೆ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ

ಸುಮಾರು ೧೫೦೦ ಸ್ಪರ್ಧಿಗಳು ಪಾಲ್ಗೊಂಡಿದ್ದ ಗೇಮ್ ಚೇಂಜರ್ ಮೊದಲ ೧೦ಕೆ ಮ್ಯಾರಥಾನ್ ಓಟದಲ್ಲಿ  ಸಿದ್ಧಪ್ಪ ಜಿ. ೩೧.೪೭ ಸೆಕೆಂಡುಗಳಲ್ಲಿ ಗುರಿ ತಲುಪಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ವನಿತೆಯರ  ವಿಭಾಗದಲ್ಲಿ  ರಿಚಾ ಬದಾವ್ರಿಯಾ ಅಗ್ರ ಸ್ಥಾನಿಯಾದರು.

ಗೇಮ್‌ಚೇಂಜರ್‌ನ ನಿರ್ದೇಶಕ  ರಕ್ಷಾ ರಾಮಯ್ಯ ವಿಜೇತರಿಗೆ ಬಹುಮಾನ ವಿತರಿಸಿದರು. ಚಾಂಪಿಯನ್ ಸ್ಥಾನ ಗೆದ್ದವರಿಗೆ ೧೫,೦೦೦ ರೂ., ರನ್ನರ್ ಅಪ್‌ಗೆ ೧೦,೦೦೦ ರೂ. ೬,೦೦೦ ಮೂರನೇ ಸ್ಥಾನಕ್ಕೆ, ೪,೦೦೦ ನಾಲ್ಕನೇ ಸ್ಥಾನಕ್ಕೆ  ೫ ರಿಂದ ೧೦ನೇ ಸ್ಥಾನದವರೆಗೆ ವಿಜೇತರಾದವರಿಗೆ ತಲಾ ೨ ಸಾವಿರ ರೂ. ಬಹುಮಾನ ನೀಡಲಾಯಿತು.

ಭಾಭಾರತದ ಸೇನಾ ಪಡೆಯ ಸುಮಾರು ೩೧೦ ಯೋ‘ರು ಈ ಓಟದಲ್ಲಿ ಆಹ್ವಾನದ ಮೇರೆಗೆ ಪಾಲ್ಗೊಂಡರು. ಇದೇ ವೇಳೆ ಸಂಘಟಕರು ಅವರನ್ನು ಗೌರವಿಸಿದರು. ರತೀಯ ಸೇನೆ, ರೈಲ್ವೇಸ್, ಭಾರತೀಯ ಕ್ರೀಡಾ ಪ್ರಾಧಿಕಾರ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ದೇಶದ ಇತರ ರಾಜ್ಯಗಳಿಂದ ಸಾವಿರಾರು ಓಟಗಾರರು ಪಾಲ್ಗೊಂಡಿದ್ದರು.

೫ಕೆ ಕಾರ್ಪೋರೇಟ್ ವಿಭಾಗದ ಓಟದಲ್ಲಿ ಆಕೃತಿ ಸಂಜೀವ ಮಹಿಳಾ ವಿಭಾಗದಲ್ಲಿ ಜಯ ಗಳಿಸಿದರು. ಆಕೃತಿ ೨೪ ನಿಮಿಷ ಹಾಗೂ ೧೬ ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನಿಯಾದರು. ಪುರುಷರ ವಿಭಾಗದಲ್ಲಿ ಸಂಪತ್ ಕುಮಾರ್ ೧೮ ನಿಮಿಷ ೯ ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನ ಗಳಿಸಿದರು.

ಬೆಂಗಳೂರಿನ ಸಹಕಾರ ನಗದರಲ್ಲಿ ನಡೆದ ಈ ಓಟದಲ್ಲಿ ೧೧೫೦ ಸ್ಪರ್ಧಿಗಳು ಪಾಲ್ಗೊಂಡರು.

ಈ ಸಂದ‘ರ್ದಲ್ಲಿ ಮಾತನಾಡಿದ ಗೇಮ್‌ಚೇಂಜರ್‌ನ ನಿರ್ದೇಶಕ ಹಾಗೂ ಯೂತ್ ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾದ ಪ್ರಮುಖ ರಕ್ಷಾ ರಾಮಯ್ಯ, ಕಳೆದ ಒಂದು ತಿಂಗಳಿಂದ ನಾವು ಈ ಓಟದ ಯಶಸ್ಸಿಗಾಗಿ ಶ್ರಮಿಸುತ್ತಿದ್ದೇವೆ, ಇದು ನಮ್ಮ ಉತ್ತಮ ಆರಂ‘, ಇದು ಪ್ರತಿ ವರ್ಷದ ವೇಳಾಪಟ್ಟಿಯಾಗಿ ಯುವ ಓಟಗಾರರಿಗೆ ವೇದಿಕೆಯಾಗಲಿ ಎಂಬುದು ನಮ್ಮೆಲ್ಲರ ಗುರಿ,  ಎಂದು ಹೇಳಿದರು.  ನಿರಾಶ್ರಿತ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಗೇಮ್‌ಚೇಂಜರ್  ಎನ್‌ಜಿಒ ರೀಚಿಂಗ್ ಹ್ಯಾಂಡ್ ಜತೆ ಕೈ ಜೋಡಿಸಿದೆ.

Related Articles