Saturday, October 12, 2024

ಬೆಂಗಳೂರಿನಲ್ಲಿ ಮುಂದಿನ ವರ್ಷ ಮೂರು ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌

ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಮುಂದಿನ ವರ್ಷದ (2024) ರ ದೇಶೀಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಮೂರು ಅಥ್ಲೆಟಿಕ್ಸ್‌ ಚಾಂಪಿಯನ್‌ಷಿನ್‌ ನಡೆಯಲಿದೆ ಎಂದು ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆಯ ಪ್ರಕಟಣೆ ತಿಳಿಸಿದೆ. Shri Kanteerava Stadium Bengaluru will host three major athletics events in 2024.

ಮುಂದಿನ ವರ್ಷ ದೇಶದಲ್ಲಿ ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆಯ ವತಿಯಿಂದ ಒಟ್ಟು 20 ಅಥ್ಲೆಟಿಕ್ಸ್‌ ಕೂಟಗಳು ನಡೆಲಿದೆ. ಮಾರ್ಚ್‌ 20, 2024 ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 3ನೇ ಓಪನ್‌ ಜಂಪ್ಸ್‌ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಹೈಜಂಪ್‌, ಲಾಂಗ್‌ಜಂಪ್‌ ಹಾಗೂ ಟ್ರಿಪಲ್‌ ಜಂಪ್‌ ಸ್ಪರ್ಧೆಗಳು ಮಾತ್ರ ಸೇರಿರುತ್ತವೆ. ಜೂನ್‌ 12ರಂದು 3ನೇ ಇಂಡಿಯನ್‌ ಗ್ರ್ಯಾನ್‌ ಪ್ರಿಕ್ಸ್‌ ಕೂಡ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಆಗಸ್ಟ್‌ 30 ರಿಂದ ಸೆಪ್ಟೆಂಬರ್‌ 2 ರವರೆಗೆ 63ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆಯಲಿದೆ.

35ನೇ ದಕ್ಷಿಣ ವಯಲ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಅಕ್ಟೋಬರ್‌ 7 ರಿಂದ 9 ರವರೆಗೆ ಪಾಂಡಿಚೇರಿಯಲ್ಲಿ ನಡೆಯಲಿದೆ.

Related Articles