Thursday, September 12, 2024

ಫಿಲಿಪ್‌ ಹ್ಯೂಸ್‌ ನೆನಪಿಸುವ ಸೇನ್‌ ಎಬಾಟ್‌ “ಡೆತ್‌” ಬಾಲ್‌!

ನವೆಂಬರ್‌ 25, 2014. ಕ್ರಿಕೆಟ್‌ ಜಗತ್ತು ಈ ಕರಾಳ ದಿನವನ್ನು ಎಂದೂ ಮರೆಯದು. ಈಗ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡದ ಬೌಲರ್‌ ಸೇನ್‌ ಅಬಾಟ್‌ ಬೌನ್ಸರ್‌ಗೆ ಉತ್ತಮ ಆಟಗಾರ ಫಿಲಿಪ್‌ ಹ್ಯೂಸ್‌ ಬಲಿಯಾಗಿ ನವೆಂಬರ್‌ 25ಕ್ಕೆ 9 ವರ್ಷ. ಎಬಾಟ್‌ ಎಸೆದಿದ್ದು ಬೌನ್ಸರ್‌ ಆಗಿದ್ದರೂ ಅದು ಒಬ್ಬ ಕ್ರಿಕೆಟಿಗನನ್ನು ಬಲಿತೆಗೆದುಕೊಳ್ಳುವ “ಡೆತ್‌” ಬಾಲ್‌ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಎಬಾಟ್‌ ಬೌಲಿಂಗ್‌ ಮಾಡಲು ಕ್ರೀಸಿಗೆ ಬಂದಾಗಲೆಲ್ಲ ಫಿಲಿಪ್‌ ಹ್ಯೂಸ್‌‌ ನೆನಪಾಗುತ್ತಾರೆ. When Sean Abbott coming to bowling crease always remembers Phillip Hughes.

2014 ನವೆಂಬರ್‌ 25 ರಂದು ಸಿಡ್ನಿ ಕ್ರಿಕೆಟ್‌ ಅಂಗಣದಲ್ಲಿ ಸೌತ್‌ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್‌ ವೇಲ್ಸ್‌ ತಂಡಗಳ ನಡುವೆ ಶಫೀಲ್ಡ್‌ ಶೀಲ್ಡ್‌ ಪಂದ್ಯ ನಡೆಯುತ್ತಿತ್ತು. ಸೌತ್‌ ಆಸ್ಟ್ರೇಲಿಯಾ ಪರ ಆಡುತ್ತಿದ್ದ ಹ್ಯೂಸ್‌ 63 ರನ್‌ ಗಳಿಸಿ ಆಡುತ್ತಿದ್ದರು. ಸೌತ್‌ ಆಸ್ಟ್ರೇಲಿಯಾ 48.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 136 ರನ್‌ ಗಳಿಸಿತ್ತು. ಸೇನ್‌ ಅಬಾಟ್‌ ಅವರ 10ನೇ ಓವರ್‌ನ ನಾಲ್ಕನೇ ಎಸೆತ ಬೌನ್ಸರ್‌. ಹ್ಯೂಸ್‌ ಆ ಎಸೆತವನ್ನು ಹುಕ್‌ ಮಾಡಲು ಯತ್ನಿಸಿದಾಗ ಚೆಂಡು ನೇರವಾಗಿ ಕುತ್ತಿಗೆಗೆ ಬಡಿಯಿತು. ಅಲ್ಲೇ ಕುಸಿದು ಬಿದ್ದ ಫಿಲಿಪ್‌ ಹ್ಯೂಸ್‌ ಎರಡು ದಿನಗಳ ನಂತರ ನಿಧನ ಹೊಂದಿದರು. ಆ ಚೆಂಡು ಎಲ್ಲಿದೆಯೋ ಗೊತ್ತಿಲ್ಲ. ಆದರೆ ಸೇನ್‌ ಎಬಾಟ್‌ ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದಲ್ಲಿದ್ದರು. ಆಸ್ಟ್ರೇಲಿಯಾದ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಭಾರತ ವಿರುದ್ಧದ ಫೈನಲ್‌ ಪಂದ್ಯದಲ್ಲಿ PH ಎಂದು ಬರೆದಿದ್ದ ಕಪ್ಪು ಪಟ್ಟಿಯನ್ನು ಧರಿಸಿ ಆಡಿದ್ದರು. ಅದು ಫಿಲಿಪ್‌ ಹ್ಯೂಸ್‌ ಅವರಿಗೆ ನೀಡಿದ ಗೌರವ.

ಕ್ರಿಕೆಟ್‌ನಲ್ಲಿ ಇಂಥ ದರುಂತಗಳು ನಡೆಯುವುದು ಅತಿ ವಿರಳ. ಸೇನ್‌ ಎಬಾಟ್‌ ಆ ನಂತರ ಕೆಲ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಮತ್ತೆ ಕ್ರಿಕೆಟ್‌ ಆಸ್ಟ್ರೇಲಿಯಾದ ಸಲಹೆ ಮೇರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ಫಿಲಿಪ್‌ ಹ್ಯೂಸ್‌ ಅವರನ್ನು ಬಲಿತೆಗೆದುಕೊಂಡ ಚೆಂಡಿನ ಮೇಲೆ ಸೇನ್‌ ಎಬಾಟ್‌, “I AM SORRY PHIL” ಎಂದು ಬರೆದಿದ್ದರು. ಆ ಚೆಂಡು ಈಗ ಕ್ರಿಕೆಟ್‌ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದೆ.

Related Articles