ಸ್ಪೋರ್ಟ್ಸ್ ಮೇಲ್ ವರದಿ
ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಕೇಶವ್ ಸಸಿಹಿತ್ಲು ಅವರ ಮಗ ರಕ್ಷಕ್ ಕೆ ಎಸ್ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫುಟ್ಬಾಲ್, ಕಬಡ್ಡಿ, ವಾಲಿಬಾಲ್ ಹಾಗೂ ಥ್ರೋ ಬಾಲ್ ತಂಡದ ಸ್ದದಸ್ಯರಾಗಿರುವ ರಕ್ಷಕ್ ಫುಟ್ಬಾಲ್ ತಂಡದ ಗೋಲ್ ಕೀಪರ್ ಕೂಡ ಆಗಿದ್ದು, ತಾಲೂಕು ಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದಿರುತ್ತಾರೆ. ಚಿತ್ರಕಲೆಯಲ್ಲೂ ರಕ್ಷಕ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯುವ ಕ್ರೀಡಾಪಟು ರಕ್ಷಕ್ ಮುಂದಿನ ಹಂತದಲ್ಲಿ ಯಶಸ್ಸು ಕಾಣಲೆಂದು ಸ್ಪೋರ್ಟ್ಸ್ ಮೇಲ್ ವತಿಯಿಂದ ಶುಭ ಹಾರೈಕೆ.