ಅಶ್ವಿನ್ ಸನಿಲ್ ಗೆ ಜಾಗತಿಕ ಮಟ್ಟದ ಕಂಚು

0
1343
ಸ್ಪೋರ್ಟ್ಸ್ ಮೇಲ್ ವರದಿ 

ಕೊರಿಯಾದ ಚಾಂಗ್ಜು ನಲ್ಲಿ ನಡೆದ 13ನೇ ವಿಶ್ವ ಅಗ್ನಿಶಾಮಕ ದಳದ ಕ್ರೀಡಾ ಕೂಟದಲ್ಲಿ ಉಡುಪಿಯ ಅಶ್ವಿನ್ ಸನಿಲ್ ಕಂಚಿನ ಪದಕ ಗೆದ್ದಿದ್ದಾರೆ.

400ಮೀ ರಿಲೇಯಲ್ಲಿ ಭಾರತ ತಂಡವನ್ನು ಅಶ್ವಿನ್ ಪ್ರತಿನಿಧಿಸಿದ್ದರು. ೪೮.೭೮ ಸೆಕೆಂಡುಗಳಲ್ಲಿ ಗುರಿ ತಲುಪಿದ ಭಾರತ ತಂಡ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದಿತು.
ಭಾರತ ತಂಡದಲ್ಲಿ ಯೋಗೇಶ್ ಹನುಮಂತ್, ಅಶ್ವಿನ್ ಸನಿಲ್, ರೋಹಿತ್ ಚವಾಣ್, ಜೀವನ್ ಪಾಟೀಲ್ ಸೇರಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ತಮ್ಮಲ್ಲಿರುವ ಕ್ರೀಡಾ ಸಾಮರ್ಥ್ಯ ತೋರಿಸಲೆಂದು ಪ್ರತೀ ಎರಡು ವರ್ಷಕ್ಕೊಮ್ಮೆ ಜಾಗತಿಕ ಮಟ್ಟದಲ್ಲಿ ಕ್ರೀಡಾಕೂಟ ನಡೆಯುತ್ತದೆ.