Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸಿಎಸ್ ಸಂತೋಷ್‌ಗೆ ಎರಡನೇ ಸ್ಥಾನ

ಸ್ಪೋರ್ಟ್ಸ್ ಮೇಲ್ ವರದಿ

ಇಂಡಿಯಾ ಬಾಜಾ ಮೋಟಾರ್ ರಾಲಿಯಲ್ಲಿ ಹಿರೋ ಮೋಟೋಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕನ್ನಡಿಗ ಸಿ.ಎಸ್. ಸಂತೋಷ ಎರಡನೇ ಸ್ಥಾನ ಗಳಿಸಿದ್ದಾರೆ.

 ಭಾರತದ ಡಾಕರ್ ರಾಲಿ ಎಂದೇ ಖ್ಯಾತಿ ಪಡೆದಿರುವ ಇಂಡಿಯಾ ಬಾಜಾ 2018ರಲ್ಲಿ ಸಂತೋಷ್ ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿರುವ ಸಂತೋಷ್ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕೊನೆಗೊಂಡ ರಾಲಿಯಲ್ಲಿ ಸಂತೋಷ್ ಪ್ರಭುತ್ವ ಸಾಧಿಸುವುದರೊಂದಿಗೆ ಹೀರೋ ಮೋಟೋ ಸ್ಪೋರ್ಟ್ಸ್ ತಂಡ ಇಂಡಿಯಾ ಬಾಜಾ ರಾಲಿಯಲ್ಲಿ  ಶೇ. 100 ರಷ್ಟು ಯಶಸ್ಸನ್ನು ಕಾಯ್ದುಕೊಂಡಿತು. ಜೈಸಲ್ಮೇರ್‌ನಲ್ಲಿ ತಂಡ 274 ಕಿ.ಮೀ. ಅಂತರವನ್ನು ಪೂರ್ಣಗೊಳಿಸಿತು. ಒಂದು ಹಂತದಲ್ಲಿ ಮರಳಿನ ಮಾರುತ ಕಂಡು ಬಂದರೆ, ಇನ್ನೊಂದೆಡೆ ಕಳೆದ ರಾತ್ರಿ ಮಳೆ ಬಂದ ಕಾರಣ ಮಾರ್ಗ ನಿರೀಕ್ಷಿತ ಮಟ್ಟದಲ್ಲಿ ರಾಲಿಗೆ ಅನುಕೂಲಕರವಾಗಿರಲಿಲ್ಲ.
2019ರ ಡಾಕರ್ ರಾಲಿಯಲ್ಲಿ ಪಾಲ್ಗೊಳ್ಳುತ್ತಿರುವ ಸಂತೋಷ್, ಮುಂದಿನ ಸವಾಲನ್ನು ಸ್ವೀಕರಿಸಲು ಪೆರುವಿನಲ್ಲಿ ನಡೆಯಲಿರುವ ಐಎನ್‌ಸಿಎ ರಾಲಿಯಲ್ಲಿ ಪಾಲ್ಗೊಳ್ಳುವರು.
ಈ ಬಾರಿಯ ರಾಲಿಯಲ್ಲಿ ಕಠಿಣ ಸ್ಪರ್ಧೆ ಇದ್ದಿತ್ತು. ಅವೆಲ್ಲವನ್ನೂ ಮೀರಿ ಪೋಡಿಯಂನಲ್ಲಿ ಎರಡನೇ ಸ್ಥಾನ ಸಿಕ್ಕಿಕರುವುದು ಸಂಭ್ರಮದ ಸಂಗತಿ ಕಳೆದ ಮೂರು ವರ್ಷಗಳಲ್ಲಿ ನಡೆದ ರಾಲಿಗಳಲ್ಲಿ ಇದೇ ಮೊದಲ ಬಾರಿಗೆ ಮನೆಯಂಗಣದಲ್ಲಿ ಯಶಸ್ಸಿನ ಹೆಜ್ಜೆ ಇಟ್ಟಿದ್ದೇನೆ. ಡಾಕರ್ ರಾಲಿಯವರೆಗೂ ಈ ಸ್ಫೂರ್ತಿಯನ್ನು ಮುಂದಕ್ಕೆ ಕೊಂಡೊಯ್ಯುವೆ ಎಂದು ಸಂತೋಷ್ ಹೇಳಿದರು.

administrator