ಬೆಂಗಳೂರಿನಲ್ಲಿ ಕೋರ್ಟ್ ವಾರ್ಸ್ ಬಾಸ್ಕೆಟ್‌ಬಾಲ್

0
251
ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ  ಭಾರತ್  ಸ್ಪೋರ್ಟ್ಸ್ ಯೂನಿಯನ್‌ನಲ್ಲಿ  ಸೆಪ್ಟಂಬರ್ 8 ರಿಂದ 16ರವರೆಗೆ ಹೊನಲು ಬೆಳಕಿನಲ್ಲಿ ಕೋರ್ಟ್ಸ್ ವಾರ್ ಮಹಿಳಾ ಹಾಗೂ ಪುರುಷರ ಆಹ್ವಾನಿತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ.

ಮಲ್ಲೇಶ್ವರ ಸ್ಪೋರ್ಟ್ಸ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಂತರ್ ಕಾಲೇಜು ಆಹ್ವಾನಿತ ಚಾಂಪಿಯನ್‌ಷಿಪ್‌ಗೆ ಭಾರತ್ ಸ್ಪೋರ್ಟ್ಸ್ ಯೂನಿಯನ್ ಹಾಗೂ ಕ್ರೆಡೆನ್ಷಿಯಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪೆನಿ ನೆರವು ನೀಡಲಿದೆ.
 ಭಾರತ್ ಸ್ಪೋರ್ಟ್ಸ್ ಯೂನಿಯನ್‌ನ ಅವಳಿ ಕ್ರೀಡಾಂಗಣದಲ್ಲಿ ಸೆ.8ರಿಂದ  16ವರೆಗೆ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ.  ಕರ್ನಾಟಕದಲ್ಲಿರುವ ಪದವಿ ಹಾಗೂ ಎಂಜಿನಿಯರಿಂಗ್ ಕಾಲೇಜಿನ ಪ್ರಮುಖ ತಂಡಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿವೆ. ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಪ್ರಮುಖ ಚಾಂಪಿಯನ್‌ಷಿಪ್ ಇದಾಗಿದೆ.
ಹೆಚ್ಚಿನ ಮಾಹಿತಿಗೆ ನಿಶಾಂತ್  9980002221 ಹಾಗೂ ಡಾ. ಅಜಯ್ 9035486438 ಅವರನ್ನು  ದೂರವಾಣಿ ಮೂಲಕ ಸಂಪರ್ಕಿಸಬಹುದು.