Friday, December 13, 2024

ಸೈನಾಗೂ ಕಶ್ಯಪ್‌ಗೂ ಮದುವೆಯಂತೆ

ಸ್ಪೋರ್ಟ್ಸ್ ಮೇಲ್ ವರದಿ

ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ, ವಿಶ್ವದ ಮಾಜಿ ನಂ. ೧ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪರುಪಳ್ಳಿ ಕಶ್ಯಪ್ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬು ಕಾಣಿಸಿಕೊಳ್ಳುವ ರೀತಿಯಲ್ಲಿ ಗಮನಿಸಿದಾಗ ಈ ಸುದ್ದಿ ನಿಜ ಎನ್ನುವಂತಿದೆ. ಆದರೆ ಕಶ್ಯಪ್ ಅಥವಾ ಸೈನಾ ನೆಹ್ವಾಲ್ ಅಥವಾ ಇಬ್ಬರ ಕುಟುಂಬದ ಪ್ರಮುಖರು ಈ ಬಗ್ಗೆ ಸ್ಪಷ್ಟೀಕರಣ ನೀಡಲಿಲ್ಲ. ಸೈನಾ ಸದ್ಯ ಕೊರಿಯಾ ಓಪನ್‌ನಲ್ಲಿ ಆಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಸೈನಾ ಅವರ ತಂದೆ ಹರ್ವೀರ್ ಸಿಂಗ್ ನೆಹ್ವಾಲ್ ತಮ್ಮ ಮೊಬೈಲ್ ಸ್ವಿಚ್ ಆಫ್  ಮಾಡಿಕೊಂಡಿದ್ದಾರೆ. ಈ ವಿಷಯ ನಿಜವೇ ಎಂಬುದನ್ನು ಖಚಿಪಡಿಸುವುದಕ್ಕೆ ಸೈನಾ ಕೂಡ ಪ್ರತಿಕ್ರಿಯೆ ನೀಡಲಿಲ್ಲ.
ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ಸೇರಿದಂತೆ ಸೈನಾ ಇದುವರೆಗೂ ೨೦ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿರುತ್ತಾರೆ. ಅಲ್ಲದೆ ವಿಶ್ವ ರಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನೂ ತಲುಪಿರುತ್ತಾರೆ. ಕಶ್ಯಪ್ ವಿಶ್ವದಲ್ಲಿ ೬ನೇ ರಾಂಕ್ ತಲುಪಿರುವುದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವುದು ಪ್ರಮುಖ ಸಾಧನೆಯಾಗಿದೆ.
ಈ ಇಬ್ಬರು ಆಟಗಾರರು ಕಳೆದ ೧೦ ವರ್ಷಗಳಿಂದ ಆತ್ಮೀಯರಾಗಿದ್ದಾರೆ ಎಂದು ಈಗ ಹೇಳಲಾಗಿತ್ತಿದೆ. ಇತ್ತೀಚಿಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳಲು ಪರುಪಳ್ಳಿ ಕಶ್ಯಪ್ ವಿಲರಾಗಿದ್ದರು. ಈ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತ, ಸೈನಾ ನೆಹ್ವಾಲ್, ನಿಮ್ಮ ಅನುಪಸ್ಥಿತಿ  ಬಹಳ ಕಾಡುತ್ತಿದೆ, ನೀವೇ ನನ್ನ ಪಾಲಿನ ಸ್ಫೂರ್ತಿ ಎಂದೆಲ್ಲ ಬರೆದಿದ್ದರು. ಇಲ್ಲಿ ನನಗೂ ಹಾಗೆ ಅನಿಸುತ್ತಿದೆ ಎಂದು ಕಶ್ಯಪ್ ಕೂಡ ಪ್ರತಿಕ್ರಿಯೆ ನೀಡಿದ್ದು ಸುದ್ದಿಯಾಗಿತ್ತು.
ಡಿಸೆಂಬರ್ ೧೬ರಂದು ಸೈನಾ ಹಾಗೂ ಕಶ್ಯಪ್ ಮದುವೆಯಾಗಲಿದ್ದು, ಕೆಲವು ಗಣ್ಯರ ಸಮ್ಮುಖದಲ್ಲಿ ಮದುವೆ ನಡೆಯಲಿದೆ. ೨೧ರಂದು ಆತ್ಮೀಯರಿಗೆ ಔತಣಕೂಟವಿರುತ್ತದೆ.

Related Articles