Friday, December 13, 2024

ಕುಂದಾಪುರ: ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ಗೆ ಚಾಲನೆ

ಕುಂದಾಪುರ: ಕುಂದಾಪುರದ ಹಂಗಳೂರು ಸಮೀಪದ ಅರಾಲ್‌ಗುಡ್ಡೆ ಕ್ರಾಸ್‌ ಬಳಿ ನೂತನವಾಗಿ ಆರಂಭಗೊಂಡಿರುವ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ಗೆ ಹಂಗಳೂರಿನ ಸೇಂಟ್‌ ಪಿಯೂಸ್‌ ಚರ್ಚ್‌ನ ಧರ್ಮಗುರು ರೆ. ಫಾದರ್‌ ಅಲ್ಬರ್ಟ್‌ ಕ್ರಾಸ್ತಾ ಅವರು ಭಾನುವಾರ ಚಾಲನೆ ನೀಡಿ, ಆಶೀರ್ವದಿಸಿದರು. Rev. Fr. Albert Crasta inaugurates Costa Badminton Center in Kundapura.

ಹಂಗಳೂರಿನ ಸೇಂಟ್‌ ಪಿಯೂಸ್‌ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶಾಂತಾ ಕಾಂಬ್ಳೆ, ಕುಂದಾಪುರದ ಸೇಂಟ್‌ ಮೇರಿಸ್‌ ಪಿಯು ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡೀಸ್‌ ಹಾಗೂ ಬಡಾಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಾಂತಾರಾಮ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಉದ್ಘಾಟನಾ ಟೂರ್ನಿ: ಕೋಸ್ಟಾ ಬ್ಯಾಡ್ಮಿಂಟನ್‌ ಕೇಂದ್ರ ಉದ್ಘಾನಟೆಯಾದ ನಂತರ ಕ್ರೈಸ್ತ ಸಮುದಾಯದವರಿಗೆ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ನಡೆಯಿತು.

13 ವರ್ಷ ವಯೋಮಿತಿಯ ವಿಭಾಗದಲ್ಲಿ ಅಮನ್‌ ಡಿʼಕೋಸ್ಟಾ ಹಾಗೂ ಎಲ್ಡನ್‌ ಪಿಂಟೋ ಅನುಕ್ರಮವಾಗಿ ಮೊದಲ ಹಾಗೂ ದ್ವಿತೀಯ ಸ್ಥಾನ ಗಳಿಸಿದರು.

15 ವರ್ಷ ವಯೋಮಿತಿಯ ವಿಭಾಗದಲ್ಲಿ ಎಲ್ಡನ್‌ ಪಿಂಟೋ ಅಗ್ರ ಸ್ಥಾನ ಪಡೆದರೆ, ಅಮನ್‌ ಡಿʼಕೋಸ್ಟಾ ಎರಡನೇ ಸ್ಥಾನ ಗಳಿಸಿದರು.

17 ವರ್ಷ ವಯೋಮಿತಿಯ ವಿಭಾಗದಲ್ಲಿ ಶೆಲ್ಡನ್‌ ಪಿಂಟೋ ಚಾಂಪಿಯನ್‌ ಪಟ್ಟ ಗೆದ್ದುಕೊಂಡರೆ, ರಿನಾಲ್‌ ಡಿಯಾಸ್‌ ರನ್ನರ್‌ ಅಪ್‌ಗೆ ತೃಪ್ತಿಪಟ್ಟರು. ವನಿತೆಯರ ಡಬಲ್ಸ್‌ ವಿಭಾಗದಲ್ಲಿ ಮಾರಿಯಾ ಪಿಂಟೋ ಹಾಗೂ ಲೀನಾ ಜೋಡಿ ಪ್ರಶಸ್ತಿ ಗೆದ್ದುಕೊಂಡಿತು. ಡಾ. ಪ್ರಮಿಳಾ ಹಾಗೂ ರೇಶ್ಮಾ ಡಿʼಕೋಸ್ಟಾ ಜೋಡಿ ಎರಡನೇ ಸ್ಥಾನ ಗಳಿಸಿತು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಮೋಹಿತ್‌ ಮತ್ತು ಲೀನಾ ಚಾಂಪಿಯನ್‌ ಪಟ್ಟ ಗೆದ್ದುಕೊಂಡರು. ರಾಯ್ಡನ್‌ ಮತ್ತು ಮರಿಯಾ ಜೋಡಿ ರನ್ನರ್‌ಅಪ್‌ಗೆ ತೃಪ್ತಿಪಟ್ಟರು.

ಪುರುಷರ ಡಬಲ್ಸ್‌ನಲ್ಲಿ ಮೋಹಿತ್‌ ಮತ್ತು ಅಲ್ವಿನ್‌ ಚಾಂಪಿಯನ್‌ ಪಟ್ಟ ಗೆದ್ದರು. ರಾಯ್ಡನ್‌ ಮತ್ತು ಶೆಲ್ಡಾನ್‌ ಎರಡನೇ ಸ್ಥಾನ ಗಳಿಸಿದರು. ಫಾದರ್‌ ರಾಬರ್ಟ್‌ ಡಿʼಕೋಸ್ಟಾ, ಫಾದರ್‌ ರಾಖಿ ಡಿʼಕೋಸ್ಟಾ, ಅರುಲ್‌ ಲೋಬೋ, ಆರನ್‌ ಲೋಬೋ, ಅರುಣ್‌ ಲೋಬೋ, ಪ್ರೆಸಿಲ್ಲಾ ಲೋಬೋ ಮತ್ತು ಪ್ರೇಮಾ ಲೋಬೋ ಬಹುಮಾನ ವಿತರಿಸಿದರು.

ಫಾದರ್‌ ರಾಖಿ ಡಿʼಕೋಸ್ಟಾ, ಫಾದರ್‌ ರಾಬರ್ಟ್‌ ಡಿʼಕೋಸ್ಟಾ, ಕಾಸೆಸ್‌ ಡಿʼಕೋಸ್ಟಾ ಮತ್ತು ಕುಟುಂಬಸ್ಥರು, ರಾಯಲ್‌ ಡಿʼಸಿಲ್ವಾ ಮತ್ತು ಕುಟುಂಬಸ್ಥರು ಹಾಗೂ ಜೆರೋಮ್‌ ಲೋಬೋ ಮತ್ತು ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.

ಅಕಾಡೆಮಿಯಲ್ಲಿರುವ ಸೌಲಭ್ಯಗಳು:

ಅತ್ಯತ್ತಮ ಗುಣಮಟ್ಟದ 3 ಬ್ಯಾಡ್ಮಿಂಟನ್‌ ಕೋರ್ಟ್‌ಗಳು, ಎಲ್‌ಇಡಿ ಲೈಟಿಂಗ್ಸ್‌, ವೀಕ್ಷಕರ ಗ್ಯಾಲರಿ, ಆಡಲು ಕೋರ್ಟನ್ನು ಕಾಯ್ದಿರಿಸುವ ವ್ಯವಸ್ಥೆ, ವಾರ್ಷಿಕ ಸದಸ್ಯತ್ವದ ವ್ಯವಸ್ಥೆ, ಟ್ರೈನಿಂಗ್‌ ಮತ್ತು ಕೋಚಿಂಗ್‌, ಸಲಕರಣಗೆಗಳ ಖರೀದಿಗೆ ಅವಕಾಶ, ರೆಸ್ಟ್‌ ರೂಮ್‌/ಚೇಂಜಿಂಗ್‌ ರೂಮ್‌, ಜಾಹೀರಾತಿಗೆ ಸ್ಥಳಾವಕಾಶ.

ADDRESS:

COSTA BADMINTON CENTER

VINAYAKA KODI ROAD, ARAL GUDDE CROSS

HALEALIVE VILLAGE, KOTESHWARA GRAMA

HANGALURU POST, KUNDAPURA TALUK

UDUPI DIST.

CALL: 7204288366

Related Articles