Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಪ್ರತೀಕ್‌ ಶತಕ: ಕೇಂಬ್ರಿಡ್ಜ್‌ ಕ್ಲಬ್‌ ತಂಡಕ್ಕೆ ಜಯ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಇಂಟರ್‌ ಕ್ಲಬ್‌ 19 ವರ್ಷ ವಯೋಮಿತಿಯ ಕ್ರಿಕೆಟ್‌ ಟೂರ್ನಿಯಲ್ಲಿ ಭರವಸೆಯ ಆಟಗಾರ ಪ್ರತೀಕ್‌ ಸಿಡಿಸದ ಶತಕದ ನೆರವಿನಿಂದ ಕೇಂಬ್ರಿಡ್ಜ್‌ ಕ್ರಿಕೆಟ್‌ ಕ್ಲಬ್‌ ಎನ್‌ಗ್ರೇಡ್ಸ್‌ ಕ್ರಿಕೆಟ್‌ ಕ್ಲಬ್‌ ವಿರುದ್ಧ 18 ರನ್‌ಗಳ ಜಯ ಗಳಿಸಿದೆ. Pratheek hit the century Cambridge won the match.

ಮೊದಲು ಬ್ಯಾಟಿಂಗ್‌ ಮಾಡಿದ ಕೇಂಬ್ರಿಡ್ಜ್‌ ಪರ ಪ್ರತೀಕ್‌ 117 ರನ್‌ ಸಿಡಿಸುವ ಮೂಲಕ ತಂಡ 38.2 ಓವರ್‌ಗಳಲ್ಲಿ 225 ರನ್‌ ಗಳಿಸಿತು. 113 ಎಸೆತಗಳನ್ನೆದುರಿಸಿದ 16 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ಅಮೂಲ್ಯ 117 ರನ್‌ ಗಳಿಸಿ ತಂಡದ ಸವಾಲಿನ ಮೊತ್ತಕ್ಕೆ ನೆರವಾದರು.

ಇದಕ್ಕೆ ಉತ್ತರವಾಗಿ ಎನ್‌ಗ್ರೇಡ್ಸ್‌ ಕ್ರಿಕೆಟ್‌ ಕ್ಲಬ್‌ 36.5 ಒವರ್‌ಗಳಲ್ಲಿ 207 ರನ್‌ಗೆ ಆಲೌಟ್‌ ಆಯಿತು. ಮೊನಿಶ್‌ ಕಾರ್ತಿಕ್‌ 89 ರನ್‌ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಆದಿತ್ಯ ಎಸ್‌ 35 ರನ್‌ಗೆ 3 ವಿಕೆಟ್‌ ಗಳಿಸಿ ಜಯದಲ್ಲಿ ಪ್ರಮುಖಪಾತ್ರವಹಿಸಿದರು. ಶ್ರೇಯಸ್‌ ಕುಮಾರ್‌ ಹಾಗೂ ಪ್ರಣವ್‌ ಅಶ್ವಥ್‌ ತಲಾ 2 ವಿಕೆಟ್‌ ಗಳಿಸಿದರು.

ಸೌತ್‌ ಎಂಡ್‌ ಸ್ಪೋರ್ಟ್ಸ್‌ ಕ್ಲಬ್‌ ವಿರುದ್ಧ ನಡೆದ ಎರಡನೇ ಪಂದ್ಯದಲ್ಲೂ ಪ್ರತೀಕ್‌ 77 ರನ್‌ ಗಳಿಸಿ ತಂಡದ ಬೃಹತ್‌ ಮೊತ್ತಕ್ಕೆ ಉತ್ತಮ ಅಡಿಪಾಯ ಹಾಕಿದರು. 56 ಎಸೆತಗಳನ್ನೆದುರಿಸಿದ ಪ್ರತೀಕ್‌ 11 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 77 ರನ್‌ ಸಿಡಿಸಿದರು.

ಪ್ರತಿಯೊಂದು ವಯೋಮಿತಿಯ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವ ಪ್ರತೀಕ್‌ ರಾಜ್ಯದ ಭರವಸೆಯ ಆಟಗಾರ ಎನಿಸಿದ್ದಾರೆ.


administrator