ಮಂಗಳೂರು ವಿವಿ ಕ್ರಿಕೆಟ್; SMS ಕಾಲೇಜು ಚಾಂಪಿಯನ್
ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಹಾಗೂ ಸಂತ ಫಿಲೋಮಿನಾ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮಹಿಳಾ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಬ್ರಹ್ಮಾವರದ ಪ್ರತಿಷ್ಠಿತ ಎಸ್‌ಎಂಎಸ್ ಕಾಲೇಜು ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ, ಮೂಡಬಿದಿರೆಯ ಆಳ್ವಾಸ್ ತಂಡ ರನ್ನರ್ ಅಪ್ ಸ್ಥಾನ ಗಳಿಸಿದೆ. Mangalore University Inter College women’s cricket Bramhavara SMS College Champions.
ಚಾಂಪಿಯನ್‌ಷಿಪ್‌ನ ಉತ್ತಮ ಬೌಲರ್ ಗೌರವಕ್ಕೆ ಎಸ್‌ಎಂಎಸ್ ಕಾಲೇಜು ತಂಡದ ಸ್ವರ್ಣ ಗೌರಿ ಆಯ್ಕೆಯಾದರು. ಉತ್ತಮ ಆಲ್ರೌಂಡರ್ ಎಸ್‌ಎಂಎಸ್ ಕಾಲೇಜಿನ ಲಕ್ಷ್ಮೀ. ಉತ್ತಮ ಬ್ಯಾಟರ್ ಆಗಿಆಳ್ವಾಸ್ ಕಾಲೇಜಿನ ಧನುಶ್ರೀ ಅವರು ಆಯ್ಕೆಯಾದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ್ ಡಿʼಸೋಜ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕ್ರಿಕೆಟ್ ಇದು ಮೈಂಡ್ ಗೇಮ್. ಇಲ್ಲಿ ತಾಂತ್ರಿಕ ನೈಪುಣ್ಯತೆ, ಟೈಮಿಂಗ್ದ್, ದೈಹಿಕ ಕ್ಷಮತೆ ನಿರಂತರ ಅಭ್ಯಾಸ ಬಹಳ ಮುಖ್ಯ. ಜೊತೆಗೆ ಪಂದ್ಯಾಟ ಗೆಲ್ಲುವುದು ಹೇಗೆ ಎಂಬ ಜ್ಞಾನ ಶಕ್ತಿ ಮುಖ್ಯವಾದುದು,” ಎಂದರು.
ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಮಾತನಾಡಿ, ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕಾದರೆ ಬದ್ಧತೆ ಬಹಳ ಮುಖ್ಯ. ಕಠಿಣ ಪರಿಶ್ರಮ ಇದ್ದರೆ ಸಾಧನೆಗೆ ಸಹಾಯವಾಗುತ್ತದೆ,ʼ ಎಂದರು.
ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಡಾ. ಪ್ರಸನ್ನ ಉಪಸ್ಥಿತರಿದ್ದರು. ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾನ್ ಪಿಂಟೋ ಸ್ವಾಗತಿಸಿದರು. ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಸಹಕರಿಸಿದರು.