Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಚಿನ್ನಸ್ವಾಮಿ ಬಿಟ್ಟರೆ ರಾಜ್ಯದಲ್ಲಿ ಮತ್ತೊಂದು ಕ್ರೀಡಾಂಗಣ ಯಾಕಿಲ್ಲ?

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಇರುವುದು ಬೆಂಗಳೂರಿನಲ್ಲಿ ಮಾತ್ರ. ಚಿನ್ನಸ್ವಾಮಿ ಕ್ರೀಡಾಂಗಣಕಕ್ಕೆ ಈಗ 57 ವರ್ಷ ಪೂರ್ಣಗೊಂಡಿದೆ. ರಾಜ್ಯದ ನೂರಾರು ಕ್ರಿಕೆಟಿಗರು ಜಾಗತಿಕ ಮಟ್ಟದಲ್ಲಿ ಮಿಂಚಿದ್ದಾರೆ. ಕ್ರಿಕೆಟಿಗರೇ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯನ್ನು ಇಷ್ಟು ವರ್ಷಗಳ ಕಾಲ ಆಳಿದ್ದಾರೆ. ಆದರೆ ಚಿನ್ನಸ್ವಾಮಿ ಹೊರತಾಗಿ ರಾಜ್ಯದಲ್ಲಿ ಮತ್ತೊಂದು ಕ್ರೀಡಾಂಗಣ ಕಟ್ಟಲಾಗದೆ ಕಾಲ ಕಳೆಯುತ್ತಿದ್ದಾರೆ. Apart from the Chinnaswamy Stadium, the Karnataka State Cricket Association could not build an international stadium in any other district of the state.

ಕಳೆದ ಐಪಿಎಲ್‌ ವಿಜಯೋತ್ಸವನದಲ್ಲಿ 11 ಕ್ರಿಕೆಟ್‌ ಅಭಿಮಾನಿಗಳು ಕಾಲ್ತುಳಿತಕ್ಕೆ ಬಲಿಯಾದಾಗಿರುವುದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೊಂದು ಕಪ್ಪುಚುಕ್ಕೆ. ಎಲ್ಲವೂ ಸರಿಯಾಗಿ ಮತ್ತೆ ಐಪಿಎಲ್‌ ಪಂದ್ಯಗಳನ್ನು ನೀಡಲಾಯಿತು, ಫೈನಲ್‌ ಇಲ್ಲೇ ನಡೆಯುವುದೆಂದು ಘೋಷಿಸಲಾಯಿತು. ಈಗ ಫೈನಲ್‌ ಗುಜರಾತಿಗೆ ಸ್ಥಳಾಂತರಗೊಂಡಿದೆ. ಕರ್ನಾಟಕದಲ್ಲಿ ಇನ್ನೊಂದು ಕ್ರೀಡಾಂಗಣ ಇರುತ್ತಿದ್ದರೆ ಪಂದ್ಯಗಳನ್ನು ಅಲ್ಲಿ ನಡೆಸಬಹುದಾಗಿತ್ತು. ಆದರೆ?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಫೈನಲ್‌ಗೆ ಬಿಸಿಸಿಐ ನಿರಾಕರಿಸಲು ಕಾರಣ ಬರೇ ಶಾಸಕರು ಟಿಕೆಟ್‌

ಕೆಎಸ್‌ಸಿಎ ಕ್ಯಾಂಟೀನ್‌ನಲ್ಲಿ ಕಾಳಸಂತೆಯಲ್ಲಿ ಟಿಕೆಟ್‌ ಮಾರಾಟವಾಯಿತು. ಒಬ್ಬರು ಸದಸ್ಯರೂ ಇದ್ದಾರೆ ಎಂದು ಮಾಧ್ಯಮಗಳು ಪ್ರಕಟಿಸಿದ್ದವು. ಕೆಎಸ್‌ಸಿ ನಮಗೂ ಟಿಕೆಟ್‌ ಮಾರಾಟಕ್ಕೂ ಸಂಬಂಧವೇ ಇಲ್ಲ ಎಂದು ಕೈ ತೊಳೆದುಕೊಂಡಿತು. ನಂತರ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿನ ಸಿಸಿಟಿವಿ ಕಾರ್ಯ ನಿಂತಿತ್ತು. ಇದಕ್ಕೂ ಕೆಎಸ್‌ಸಿಎಗೂ ಸಂಬಂಧವೇ ಇಲ್ಲ ಎಂದು ಕೆಎಸ್‌ಸಿಎ ಪ್ರಕಟಿಸಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆಗೂ ನಮಗೂ ಸಂವಂಧವೇ ಇಲ್ಲವೆನ್ನುವ ಕೆಎಸ್‌ಸಿಎ ಬಗ್ಗೆ ಬಿಸಿಸಿಐ ಹೊಸ ಆಡಳಿತ ಮಂಡಳಿಯ ಬಗ್ಗೆ ನಂಬಿಕೆ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹ ಸಚಿವರನ್ನು ಕರೆಸಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಾಕಿದರೆ ಖುಷಿ ಆಗುತ್ತದೆ ನಿಜ. ಆದರೆ ಜವಾಬ್ದಾರಿಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು,

ಶಾಸಕರುಗಳು ಟಿಕೆಟ್‌ ಕೇಳದ ಕಾರಣಕ್ಕೆ ಫೈನಲ್‌ ಪಂದ್ಯವನ್ನೇ ಬೇರೆಡೆಗೆ ಸ್ಥಳಾಂತರಿಸಿದ್ದಾರೆ ಎಂಬುದು ಕಾರಣಗಳಲ್ಲಿ ಒಂದು.

ಚಿನ್ನಸ್ವಾಮಿ ಕ್ರೀಡಾಂಗಣ ಸ್ಥಾಪನೆಯಾಗಿ 57 ವರ್ಷ ಕಳೆಯಿತು. ನೂರಾರು ಕ್ರಿಕೆಟಿಗರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿರು. ಆದರೆ ಇನ್ನೊಂದು ಕ್ರೀಡಾಂಗಣವನ್ನು ನಮಗೆ ಕಟ್ಟಲಾಗಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಗುಣಗಾನ ಮಾಡುತ್ತಲೇ 57 ವರ್ಷ ಕಳೆದೆವು. ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಚಿಕ್ಕ ಕ್ರೀಡಾಂಗಣವಿದೆ. ಆದರೆ ಅವುಗಳು ಅಂತಾರಾಷ್ಟ್ರೀಯ ಗುಣಮಟ್ಟದವುಗಳಲ್ಲ. ಈಗಿನ ಆಡಳಿತ ಮಂಡಳಿ ಚಿನ್ನಸ್ವಾಮಿ ಕ್ರೀಡಾಂಗಣವನ್ನು ನವೀಕರಣಗೊಳಿಸುವುದಾಗಿ ಹೇಳುತ್ತಿದೆ. ಇನ್ನೊಂದೆಡೆ ಕರ್ನಾಟಕ ಸರಕಾರ ಅಂತಾರಾಷ್ಟ್ರೀಯ ಕ್ರೀಡಾಂಗಣ ಕಟ್ಟಲು ಮುಂದಾಗಿದೆ. ತಮಕೂರಿನಲ್ಲೂ ಕ್ರೀಡಾಂಗಣಕ್ಕೆ ಶಿಲಾನ್ಯಾಸ ಮಾಡಿ ಎರಡು ವರ್ಷ ಕಳೆದಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ಚುನಾವಣೆ ನಡೆಯುವಾಗ ಅಭ್ಯರ್ಥಿಗಳು ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಾರೆ. ಪರಸ್ಪರ ದೂರುತ್ತಾರೆ. ಹಿಂದಿನ ಬಣದಲ್ಲಿದ್ದವರು ಈಗಿನ ಬಣ ಸೇರಿಕೊಂಡು, ಹಿಂದಿನದೆಲ್ಲವನ್ನೂ ಮರೆತು ಮತ್ತೆ ಅಧಿಕಾರ ನಡೆಸುತ್ತಾರೆ. ಆದರೆ ರಾಜ್ಯದ ಬೇರೆಡೆ ಕ್ರೀಡಾಂಗಣವನ್ನು ಕಟ್ಟುವ ಬಗ್ಗೆ ಮನಸ್ಸು ಮಾಡುವುದಿಲ್ಲ. ಮಹಾರಾಷ್ಟ್ರದಲ್ಲಿ ಎಷ್ಟು ಅಂತಾರಾಷ್ಟ್ರೀಯ ಕ್ರೀಡಾಂಗಣ ಇದೆ ಎಂಬುದನ್ನು ಒಮ್ಮೆ ಲೆಕ್ಕ ಹಾಕಿ…


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.