Saturday, July 27, 2024

ಪಾಕಿಸ್ತಾನಕ್ಕೆ ಮುಂಬೈಯಲ್ಲಿ ಸೆಮಿಫೈನಲ್‌ ಅವಕಾಶ ಇನ್ನೂ ಇದೆ!

ಬೆಂಗಳೂರು: ನ್ಯೂಜಿಲೆಂಡ್‌ ತಂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ ಅಂತರದಲ್ಲಿ ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದೆ. ಇದರಿಂದಾಗಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ದಾರಿ ಮುಚ್ಚಿದಂತೆ. ಆದರೆ ಮುಂಬೈಯಲ್ಲಿ ಸೆಮಿಫೈನಲ್‌ ಪಂದ್ಯ ವೀಕ್ಷಿಸುವ ಅವಕಾಶ ಇದೆ ಅಷ್ಟೆ. Pakistan team still a chance to watch Semi Final match in Mumbai.

ಗುರುವಾರ ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ಕಿವೀಸ್‌ ಪಡೆ ಮೊದಲು ಲಂಕಾ ತಂಡವನ್ನು 171 ರನ್‌ಗೆ ಕಟ್ಟಿ ಹಾಕಿತು. ನಂತರ 23.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಇನ್ನೂ 160 ಎಸೆತ ಬಾಕಿ ಇರುವಾಗಲೇ ಜಯದ ಗುರಿ ತಲುಪಿತು.

ಪಾಕಿಸ್ತಾನ ಸೆಮಿಫೈನಲ್‌ ತಲುಪಬೇಕಾದರೆ:

ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಹಾದಿ ಕಠಿಣವಾಗಿದೆ. ನ್ಯೂಜಿಲೆಂಡ್‌ನ ರನ್‌ ರೇಟ್‌ 0.743, ಪಾಕಿಸ್ತಾನದ ರನ್‌ ರೇಟ್‌ 0.036. ನವೆಂಬರ್‌ 11 ರಂದು ಪಾಕಿಸ್ತಾನ ತಂಡ ಇಂಗ್ಲೆಂಡ್‌ ವಿರುದ್ಧ ಕೊನೆಯ ಲೀಗ್‌ ಪಂದ್ಯವನ್ನಾಡಲಿದೆ. ನ್ಯೂಜಿಲೆಂಡ್‌ನ ರನ್‌ ಸರಾಸರಿಯನ್ನು ಹಿಂದಿಕ್ಕ ಬೇಕಾದರೆ ಪಾಕಿಸ್ತಾನ ಮೊದಲು ಬ್ಯಾಟಿಂಗ್‌ ಮಾಡಿ 288 ರನ್‌ ಅಂತರದಲ್ಲಿ ಗೆಲ್ಲಬೇಕು. ಪಾಕಿಸ್ತಾನ ಮೊದಲು ಬೌಲಿಂಗ್‌ ಮಾಡಿದರೆ ಇನ್ನೂ 284 ಎಸೆತ ಬಾಕಿ ಇರುವಾಗಲೇ ಗುರಿ ತಲುಪಬೇಕು. ಪಾಕಿಸ್ತಾನಕ್ಕೆ ಚೇಸಿಂಗ್‌ ಸಿಕ್ಕರೆ ಇದು ಅಸಾಧ್ಯವಾದುದು.

ಪಾಕಿಸ್ತಾನಕ್ಕೆ ಇರುವ ಒಂದೇ ಒಂದು ಅವಕಾಶವೆಂದರೆ ಮೊದಲು ಬ್ಯಾಟಿಂಗ್‌ ಮಾಡಿ 400 ರನ್‌ ಗಳಿಸಿ ನಂತರ ಇಂಗ್ಲೆಂಡ್‌ ತಂಡವನ್ನು 112 ರನ್‌ಗೆ ಆಲೌಟ್‌ ಮಾಡಿದರೆ ರನ್‌ ಸರಾಸರಿಯಲ್ಲಿ ನ್ಯೂಜಿಲೆಂಡನ್ನು ಮೀರಿಸಬಲ್ಲದು! ಅಫಘಾನಿಸ್ತಾನವಂತೂ 438 ರನ್‌ ಅಂತರದಲ್ಲಿ ಗೆಲ್ಲಬೇಕು. ಆದ್ದರಿಂದ ನ್ಯೂಜಿಲೆಂಡ್‌ ಮತ್ತು ಭಾರತ ನಡುವೆ ಸೆಮಿಫೈನಲ್‌ ಬಹುತೇಕ ಪಕ್ಕಾ! ಇದು ಖ್ಯಾತ ಕ್ರಿಕೆಟ್‌ ಅಂಕಿ ಅಂಶ ತಜ್ಞ ಅಯಾಜ್‌ ಮೆನನ್‌ ಅವರ ಲೆಕ್ಕಾಚಾರ.

Related Articles