Friday, June 14, 2024

PAKvENG ಪಾಕಿಸ್ತಾನಕ್ಕೆ ಸೆಮಿಫೈನಲ್‌ ತಲುಪಲು 6.4 ಓವರ್‌ಗಳಲ್ಲಿ 338 ರನ್‌ ಗುರಿ

ಕೋಲ್ಕೊತಾ: ಪಾಕಿಸ್ತಾನ ಸೆಮಿಫೈನಲ್‌ ತಲಪುವ ಬಗ್ಗೆ ಕಳೆದ ಎರಡು ಮೂರು ದಿನಗಳಿಂದ ಗಂಭಿರ ಹಾಗೂ ತಮಾಷೆಯ ಲೆಕ್ಕಾಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈಗ ಅಂತಿಮವಾಗಿ ಪಾಕಿಸ್ತಾನ ಸೆಮಿಫೈನಲ್‌‌ ತಲುಪಲೇ ಬೇಕಾದರೆ ಇಂಗ್ಲೆಂಡ್‌ ವಿರುದ್ಧ 6.4 ಓವರ್‌ಗಳಲ್ಲಿ 338 ರನ್‌ ಗಳಿಸಬೇಕಾಗಿದೆ. Pakistan need 338 runs in 6.4 overs to reach the Semi Final.

ಪ್ರತಿ ಓವರ್‌ ಒಂದಕ್ಕೆ ಕನಿಷ್ಠ 52 ರನ್‌ ಗಳಿಸಬೇಕು. ಇದು ಅಸಾಧ್ಯ, ಅದಿರಲಿ ಅಗ್ರ ಐದರಲ್ಲಿ ಸ್ಥಾನ ಪಡೆಯಬೇಕಾದರೆ 6.4 ಓವರ್‌ಗಳಲ್ಲಿ ಕನಿಷ್ಠ 188 ರನ್‌ಗಳನ್ನು ಗಳಿಸಬೇಕಾಗಿದೆ. ಅಂದರೆ ಓವರ್‌ ಒಂದಕ್ಕೆ ಹತ್ತಿರ 30ರನ್‌ ಗಳಿಸಬೇಕು. ಇವೆರಡೂ ಅಸಾಧ್ಯವಾದುದು.

ಇಂಗ್ಲೆಂಡ್‌ ತಂಡ ಕೊನೆಯ ಹಂತದಲ್ಲಿ ಅಬ್ಬರದ ಬ್ಯಾಟಿಂಗ್‌ಗೆ ಮನ ಮಾಡಿ ಲಗುಬಗನೆ ವಿಕೆಟ್‌ ಕಳೆದುಕೊಂಡರೂ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತು. ಜಾನಿ ಬೈರ್ಸ್ಟೋ 59, ಜಾಯ್‌ ರೂಟ್‌ 60 ಹಾಗೂ ಬೆನ್‌ ಸ್ಟೋಕ್‌ 84 ಆಕರ್ಷಕ ಅರ್ಧ ಶತಕ ಗಳಿಸಿದರು. ಆರಿಹೋಗುತ್ತಿರುವ ದೀಪದಂತೆ ಪಾಕಿಸ್ತಾನದ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಉತ್ತಮವಾಗಿತ್ತು. ಅಸಾದ್‌ ರೌಫ್‌ (64ಕ್ಕೆ 3), ಅಫ್ರಿದಿ (2) ಹಾಗೂ ವಾಸಿಮ್‌ (2) ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು.

Related Articles