Friday, October 4, 2024

ಇಂಗ್ಲೆಂಡ್‌ಗೆ ಜಯ, ಸೋಲಿನೊಂದಿಗೆ ಪಾಕ್‌ ಪ್ಯಾಕ್‌

ಕೋಲ್ಕೊತಾ: ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡ ವಿಶ್ವಕಪ್‌ ಕ್ರಿಕೆಟ್‌ನ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 93 ರನ್‌ಗಳ ಅಂತರದಲ್ಲಿ ಜಯ ಗಳಿಸಿ ಸಮಾದಾನದೊಂದಿಗೆ ನಿರ್ಗಮಿಸಿದೆ. ಪಾಕಿಸ್ತಾನ ಕೊನೆಯ ಪಂದ್ಯದಲ್ಲೂ ಗೆಲ್ಲಲಾಗದೆ ಟೀಕೆಗಳನ್ನು ಎದುರಿಸಲು ಸಜ್ಜಾಗಿ ಮನೆಯ ಹಾದಿ ಹಿಡಿಯಿತು. England winning end, Pakistan’s disappointing end.

ಇಂಗ್ಲೆಂಡ್‌ನ ಡೇವಿಡ್‌ ವಿಲ್ಲೆ ಏಕದಿನ ಕ್ರಿಕೆಟ್‌ನಲ್ಲಿ 100ನೇ ವಿಕೆಟ್‌ ಕಬಳಿಸಿ ಅಂತಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಪಂದ್ಯದ ವಿಶೇಷವಾಗಿತ್ತು.3 ವಿಕೆಟ್‌ ಹಾಗೂ 15 ರನ್‌ ಗಳಿಸಿದ ವಿಲ್ಲೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದುದು ಅವಿಸ್ಮರಣೀಯ. ಇಂಗ್ಲೆಂಡ್‌ ನೀಡಿದ 338 ರನ್‌ಗಳ ಜಯದ ಗುರಿ ಹೊತ್ತ ಪಾಕಿಸ್ತಾನದ ಪರ ಆಘಾ ಸಲ್ಮಾನ್‌ ಗಳಿಸಿದ 51 ರನ್‌ ಗರಿಷ್ಠ ಮೊತ್ತವಾಗಿತ್ತು. ಪಾಕಿಸ್ತಾನದ ಆರಂಭಕ್ಕಿಂತ ಅಂತ್ಯವೇ ಕ್ರಿಕೆಟ್‌ ಅಭಿಮಾನಿಗಳಲ್ಲಿ ಸ್ವಲ್ಪ ಕುತೂಹಲನ್ನುಂಟು ಮಾಡಿತ್ತು.  ಹ್ಯಾರಿಸ್‌ ರೌಫ್‌ 3 ಸಿಕ್ಸರ್‌ ಹಾಗೂ 3 ಬೌಂಡರಿ ಮೂಲಕ 35 ರನ್‌ ಗಳಿಸಿ ಕೆಲ ಹೊತ್ತು ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತ್ತು. ಬೆನ್‌ ಸ್ಟೋಕ್‌ 84 ರನ್‌ ಗಳಿಸಿ ತಂಡದ ಸವಾಲಿನ ಮೊತ್ತಕ್ಕೆ ನೆರವಾದರು. ಕಳೆದ ಬಾರಿ ಚಾಂಪಿಯನ್‌ ಇಂಗ್ಲೆಂಡ್‌ ಈ ಬಾರಿ ಹೀನಾಯ ಪ್ರದರ್ಶನ ನೀಡಿ, ಹಾಲಿ ಚಾಂಪಿಯನ್‌ ತಂಡದ ಗೌರವವನ್ನು ಉಳಿಸಿಕೊಂಡಿಲ್ಲ. 9 ಪಂದ್ಯಗಳಲ್ಲಿ 6 ಸೋಲನುಭವಿಸಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕಿಳಿಯಿತು. ಆದರೆ ಕೊನೆಯ ಹಂತದಲ್ಲಿ ಗಳಿಸಿದ ಎರಡು ಜಯ ತಂಡದ ಘನತೆಯನ್ನು ಕಾಪಾಡುವಂತೆ ಮಾಡಿತು.

ಪಾಕಿಸ್ತಾನ ಸೋಲುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಾಬರ್‌ ಅಜಾಮ್‌ ಪಡೆಗೆ ವ್ಯಂಗ್ಯದ ಟೀಕೆಗಳ ಸುರಿಮಳೆಯಾಗಿದೆ.

Related Articles