ಚೇತನ್, ಸಂಜನಾ ಸೇರಿ 13 ಸಾಧಕರಿಗೆ ಕೆಒಎ ಪ್ರಶಸ್ತಿ

0
199
ಸ್ಪೋರ್ಟ್ಸ್ ಮೇಲ್ ವರದಿ

ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಮಿಂಚಿ ದೇಶಕ್ಕೆ ಕೀರ್ತಿ ತಂದ ಚೇತನ್ ಬಿ. ಹಾಗೂ ಬಾಸ್ಕೆಟ್‌ಬಾಲ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಸಂಜನಾ ರಮೇಶ್ ಸೇರಿದಂತೆ 13 ಕ್ರೀಡಾ ಸಾಧಕರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಕರ್ನಾಟ ರಾಜ್ಯ ಒಲಿಂಪಿಕ್ಸ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಡಿಸೆಂಬರ್ 27ರಂದು ರಾಜಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯಒಲಿಂಪಿಕ್ಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಶಸ್ತಿ ವಿಜೇತರು- ಚೇತನ್ ಬಿ (ಅಥ್ಲೆಟಿಕ್ಸ್), ಸಂಜನಾ ರಮೇಶ್ (ಬಾಸ್ಕೆಟ್‌ಬಾಲ್), ಮಿಥುಲಾ ಯುಕೆ (ಬ್ಯಾಡ್ಮಿಂಟನ್), ಮೇಘಾ ಎಸ್. ಗುಗದ್ (ಸೈಕ್ಲಿಂಗ್), ಚೀಯಣ್ಣ ಎ.ಬಿ. (ಹಾಕಿ), ಗೀತಾ ಕೆ. ದನಪ್ಪಾಗೊಲ್ (ಜೂಡೋ), ಸುಖೇಶ್ ಹೆಗ್ಡೆ (ಕಬಡ್ಡಿ), ಸೂರಜ್ ಆರ್. ಪ್ರಬೋಧ್ (ಲಾನ್ ಟೆನಿಸ್), ಕೀರ್ತನಾ ಟಿ.ಕೆ. (ರೋಯಿಂಗ್), ತೇಜಸ್ ಕೆ. (ಶೂಟಿಂಗ್), ಶ್ರೀಹರಿ ನಟರಾಜ್ (ಈಜು), ನಳಿನಾ ಜಿ.ಟಿ. (ವಾಲಿಬಾಲ್), ಮಂಜುನಾಥ ಮರಾಠಿ (ವೇಟ್‌ಲಿಫ್ಟಿಂಗ್).
ಕ್ರೀಡಾ ಪಟುಗಳ ಜತೆಯಲ್ಲಿ ಕ್ರೀಡಾ ಯಶಸ್ಸಿಗೆ ಪೂರಕವಾದ ಸಾಧನೆ ಮಾಡಿದವರಿಗೂ ವಿಶೇಷ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ವಿನೋದ್ ಕುಮಾರ್ ಟಿ. (ಮಾಧ್ಯಮ ಛಾಯಾಗ್ರಾಹಕ), ಶ್ರೀಧರ್ ಜೆ. ಪಾಠಣ್ಕರ್ (ಮಾಜಿ ಬಾಸ್ಕೆಟ್‌ಬಾಲ್ ಆಟಗಾರ), ಶ್ಯಾಮಲಾ ಶೆಟ್ಟಿ (ವೇಟ್‌ಲಿಫ್ಟಿಂಗ್ ಕೋಚ್), ನೀಲಕಾಂತ್ ಆರ್. ಜಗದಾಳೆ (ಕ್ರೀಡಾ ಪೋಷಕರು), ರಾಜೇಶ್ ಎನ್. ಜಗದಾಳೆ (ಕ್ರೀಡಾ ಪೋಷಕರು), ಡಾ. ಮಂಜೇ ಗೌಡ (ಕ್ರೀಡಾ ಪೋಷಕರು).