Sunday, September 8, 2024

ಚುನಾವಣಾ ಪ್ರಚಾರ: ನರಸಿಂಗ್‌ ಯಾದವ್‌ ವಿರುದ್ಧ ಎಫ್‌ಐಆರ್‌

ನವದೆಹಲಿ: ಲೋಕ ಸಭೆ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸಂಜಯ್‌ ನಿರುಪಮ್‌ ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಭಾರತದ ಸ್ಟಾರ್‌ ಕುಸ್ತಿಪಟು ಹಾಗೂ ಸಹಾಯಕ ಪೊಲೀಸ್‌ ಕಮಿಷನರ್‌ ನರಸಿಂಗ್‌ ಯಾದವ್‌ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಮುಂಬೈನ ನಾರ್ತ್ ವೆಸ್ಟ್‌ನಲ್ಲಿ ಶಿವಸೇನೆಯ ಎಂಪಿ ಗಜಾನನ್‌ ಕೀರ್ತಿಕಾರ್‌ ವಿರುದ್ಧ ಸ್ಪರ್ಧಿಸುತ್ತಿರುವ ನಿರುಪಮ್‌ ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾರಣಕ್ಕೆ ಅಂಬೋಲಿ ಪೊಲೀಸರು ನರಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಭಾನುವಾರ ರಾತ್ರಿ ಅಂಧೇರಿ ವೆಸ್ಟ್‌ ಭಾಗದಲ್ಲಿ ನರಸಿಂಗ್‌ ಯಾದವ್‌ ನಿರುಪಮ್‌ ಪರವಾಗಿ ಮತ ಪ್ರಚಾರ ಕಾರ್ಯ ನಡೆಸಿದ್ದಾರೆ. ಸೆಕ್ಷನ್‌ 129 (2) (ಅಧಿಕಾರಿಗಳು, ಚುನಾವಣೆಯಲ್ಲಿ ನಿಂತಿರುವ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತಿಲ್ಲ) ಅಡಿಯಲ್ಲಿ ನರಸಿಂಗ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Related Articles