Wednesday, July 24, 2024

ಏಷ್ಯಾ ಚಾಂಪಿಯನ್‌ಶಿಪ್: ಸೈನಾ ಶುಭಾರಂಭ

ವೂಹಾನ್:  ಭಾರತದ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಅವರು 2019ರ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಹ್ಯಾನ್ ಯು ಅವರ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಅವರು 12-21, 21-11, 21-17 ಅಂತರದಲ್ಲಿ ಚೀನಾ ಆಟಗಾರ್ತಿಯನ್ನು ಸೋಲಿಸಿದರು. ಆ ಮೂಲಕ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.
ಪಂದ್ಯದ ಆರಂಭಿಕ ಸೆಟ್‌ನಲ್ಲಿ ಉತ್ತಮ ಪೈಪೋಟಿ ನೀಡಿದ 19 ವರ್ಷದ ಹ್ಯಾನ್ ಯು, ವಿಶ್ವ ಒಂಬತ್ತನೇ ಶ್ರೇಯಾಂಕದ ಸೈನಾ ನೆಹ್ವಾಲ್‌ ಅವರನ್ನು 21-12 ಅಂತರದಲ್ಲಿ ಸೋಲಿಸಿದರು. ಬಳಿಕ ಎರಡನೇ ಸೆಟ್‌ನಲ್ಲಿ ಎಚ್ಚೆತ್ತುಕೊಂಡ ಸೈನಾ, ತಮ್ಮ ಅನುಭವ ಆಟದ ಮೂಲಕ ಚೈನೀಸ್‌ ಆಟಗಾರ್ತಿಯನ್ನು 21-17 ಅಂತರದಲ್ಲಿ ಮಣ್ಣು ಮುಕ್ಕಿಸಿದರು.
ಅದೇ ಲಯ ಮುಂದುವರಿಸಿದ ಭಾರತದ ಆಟಗಾರ್ತಿ ಮೂರನೇ ಹಾಗೂ ಅಂತಿಮ ಸೆಟ್‌ನಲ್ಲಿ 21-17 ಅಂತರದಲ್ಲಿ ಗೆದ್ದು ಪಾರಮ್ಯ ಮೆರೆದರು.

Related Articles