Monday, December 4, 2023

ಕಿಕ್ ಬಾಕ್ಸಿಂಗ್ : ಶುಭಂ ಸಿಂಗ್‌ಗೆ ಕಂಚಿನ ಪದಕ

ಸ್ಪೋರ್ಟ್ಸ್ ಮೇಲ್ ವರದಿ

ಕಿಕ್ ಬಾಕ್ಸಿಂಗ್ ಸಂಸ್ಥೆಯ ವಿಶ್ವ ಸಂಘಟನೆ (ವಾಕೋ) ಪುಣೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಸಿಎಂಆರ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಂತಿಮ ವರ್ಷದ ಸಿಇಸಿ ವಿದ್ಯಾರ್ಥಿ ಶುಭಂ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.

 45 ಕೆಜಿ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಶುಭಂ  ಮೂರನೇ ಸ್ಥಾನ ಗಳಿಸಿದರು. ಈ ಚಾಂಪಿಯನ್‌ಷಿಪ್‌ನಲ್ಲಿ 25 ರಾಜ್ಯಗಳು ಪಾಲ್ಗೊಂಡಿದ್ದವು. ಶುಭಂ  ಸಿಂಗ್ ಅವರಿಗೆ ಸಂಸ್ಥೆಯ ಪ್ರಾಂಶುಪಾಲ ಡಾ. ಸಂಜಯ್ ಜೈನ್ ಅಭಿನಂದನೆ ಸಲ್ಲಿಸಿದ್ದಾರೆ.

Related Articles