Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದಕ್ಷಿಣ ವಲಯ ಪಿಕಲ್ ಬಾಲ್ : ಕರ್ನಾಟಕ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ 

ಮೊದಲನೇ ದಕ್ಷಿಣ ವಲಯದ ಪಿಕಲ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ
ಚಾಂಪಿಯನ್‍ಯಾಗಿ ಹೊರಹೊಮ್ಮಿದೆ.

 ನಗರದ ಅರೆಕರೆ ಬಳ್ಳಿ ಸರಸ್ವಿತಿಪುರಂನಲ್ಲಿ ನಡೆದ
ದಕ್ಷಿಣ ವಲಯ ಚಾಂಪಿಯನ್‍ಷಿಪ್ ಪಂದ್ಯಗಳನ್ನು ವಿಶ್ವ ಕಿರಿಯ ಕಿಕ್ ಬಾಕ್ಸಿಂಗ್
ಚಾಂಪಿಯನ್ ಪ್ರಕೃತಿ ಚಾಲನೆ ನೀಡಿದರು,  ಡಬಲ್ಸ್‍ನಲ್ಲಿ ನಡೆದ ಫನಲ್‍ನಲ್ಲಿ ನಗರದ
ನಿಕೋಲಸ್-ರಂಜಿತ್ ಜೋಡಿ ಚಾಂಪಿಯನ್ ಗೌರವವನ್ನು ಪಡೆದರು. ಫೈನಲ್‍ನಲ್ಲಿ
ಪಂದ್ಯಾದಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ಪಂದ್ಯವನ್ನು ಗೆದ್ದರು,

ಪ್ರಶಾಂತ್-ಗೌತಮ್ ಜೋಡಿ ಎರಡನೇ ಸ್ಧಾನವನ್ನು ಪಡೆದರು, ವಿಕ್ಸೆಡ್ ಡಬಲ್ಸ್‍ನಲ್ಲಿ
ದೀಪಕ್ ಅಪೂರ್ವ ಮೊದಲನೇ ಸ್ಧಾನವನ್ನು ಪಡೆದರೆ, ಎರಡನೇ ಸ್ಧಾನವನ್ನು ಶ್ರೀದರ್-ಕಾವ್ಯ
ಜೋಡಿ ಪಡದುಕೊಂಡರು, ಮಹಿಳಾ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ದಿವ್ಯಾ-ಯಮುನಾ ಜೋಡಿ
ಮೊದಲನೇ ಸ್ಧಾನ ಮತ್ತು ಅಪುರ್ವ-ಜಯಂತಿ ಜೋಡಿ ಎರಡನೇ ಸ್ಧಾನವನ್ನು ಪಡೆದರು, ಮಹಿಳಾ
ವಿಭಾಗದಲ್ಲಿ ನಡೆದ ಪಂದ್ಯವು ಸಮಬಲದ ಹೋರಾಟವನ್ನು ಕಂಡಿತ್ತು ದಿವ್ಯ-ಯಮುನ ಜೋಡಿಯ
ಉತ್ತಮ ಪ್ರದರ್ಶನದಿಂದ ಫೈನಲ್ ಪಂದ್ಯವನ್ನು ಗೆದ್ದರು,  ಇದಕ್ಕೂ ಮುನ್ನ ಕರ್ನಾಟಕ
ಪಿಕಲ್ ಬಾಲ್ ಅಸೋಸಿಯೇಷನ್ ರಾಜ್ಯ ಮಟ್ಟದ ಲೀಗ್ ಪಂದ್ಯಾವಳಿಯನ್ನು ಹಮ್ಮಿಕೊಂಡಿತ್ತು

ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ  ಪುರಷರ ವಿಭಾಗದಲ್ಲಿ ಡಬಲ್ಸ್ ಪ್ರಶಾಂತ್-ಗೌತಮ್,
ಮಹಿಳಾ ವಿಭಾಗದಲ್ಲಿ ದಿವ್ಯಾ-ಅಪುರ್ವ ಜೋಡಿ, ವಿಕ್ಸ್‍ಡ್ ಡಬಲ್ಸ್‍ನಲ್ಲಿ
ದೀಪಕ್-ಅಪುರ್ವ ಜೋಡಿ ಚಿನ್ನದ ಪದಕ ಗೆದ್ದರು,  ಈ ಸಂದರ್ಭದಲ್ಲಿ ದಕ್ಷಿಣ ವಲಯದ
ಡಬಲ್ಸ್ ಪಂದ್ಯಾವಳಿಯಲ್ಲಿ ಮೊದಲನೇ ಚಾಂಪಿಯನ್‍ಯಾಗಿರುವ ನಿಕೋಲಸ್-ರಂಜಿತ್ ಜೋಡಿ
ಮಾತನಾಡುತ್ತ  ಇದ್ದು ನಮ್ಮ ಮೊದಲನೇ ಸಾಧನೆ ಇದನ್ನು ನಾವು ಕರ್ನಾಟಕ ಪಿಕಲ್ ಬಾಲ್
ಆಸೋಸಿಯೇಷನ್ ಅರ್ಪಣೆ ಮಾಡುತ್ತೇವೆ ಎಕೆಂದರೆ ಅವರು ನಮಗೆ ನೀಡಿರುವ ಪ್ರೋತ್ಸಾಹ ಈ
ಪ್ರಶಸ್ತಿ ಸಾಧಿಸಲು ಕಾರಣ, ಮುಂಬರುವ ಕಾಮನ್‍ವೆಲ್ತ್ ಪಂದ್ಯಾಗಳಲ್ಲಿ ಪಿಕಲ್ ಬಾಲ್
ಪಂದ್ಯಾವು ಸೇರುವ ಸಾಧ್ಯತೆಗಳು ಇರುವುದು, ಕಾಮನ್‍ವೆಲ್ತ್‍ನಲ್ಲಿ ಕ್ರೀಡಾಕೂಟದಲಿ ಈ
ಪಂದ್ಯವು ಸೇರಿಸಿದ್ದರೆ ಭಾರತ ದೇಶಕ್ಕೆ ಪಿಕಲ್ ಬಾಲ್‍ನಲ್ಲಿ ಚಿನ್ನದ ಪದಕ ತರುವ ಆಸೆ
ನಮಗೆ ಇದ್ದೇ ಎಂದು ತಿಳಿಸಿದರು, ಈ ಕ್ರೀಡಾಕೂಟದಲ್ಲಿ ಪಾಲ್ಗೋಂಡ ಪಿಕಲ್ ಬಾಲ್
ಸಂಸ್ಧೆಯ ಕಾರ್ಯದರ್ಶಿ ರಂಜತ್ ಮಾತನಾಡುತ್ತ ನಮ್ಮ ರಾಜ್ಯ ಕ್ರೀಡಾಪಟುಗಳ ಈ ಸಾಧನೆ
ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ರಾಜ್ಯ ಪಿಕಲ್ ಬಾಲ್ ಸಂಸ್ಧೆಯ ಅಧ್ಯಕ್ಷ ಎ.ಜಿ
ಶಿವಕುಮಾರ್ ಮಾತನಾಡುತ್ತ ನಮ್ಮ ರಾಜ್ಯದ ಕ್ರೀಡಾಪಟುಗಳು ಮುಂಬೈ  ಓಪನ್
ಪಂದ್ಯಾವಳಿಯಲ್ಲಿ ರಾಜ್ಯದ ಕೀರ್ತಿಯನ್ನು ಬೆಳಗಿಸಲಿದ್ದಾರೆ ಎಂಬ ಬರವಸೆ ಸಂಸ್ಧೆಗೆ
ಇದೆ  ಎಂದರು.

administrator