Wednesday, December 4, 2024

ಜಟ್ಟಿಗೇಶ್ವರ ಕಬಡ್ಡಿ ಸಂಭ್ರಮಕೆ ಮಣೂರು ಪಡುಕರೆ ಸಜ್ಜು

ಸ್ಪೋರ್ಟ್ಸ್ ಮೇಲ್ ವರದಿ 

ಫ್ರೆಂಡ್ಸ್ ಮಣೂರು ಪಡುಕರೆ ಇವರ ಆಶ್ರಯದಲ್ಲಿ ಇದೇ ತಿಂಗಳ 23 ಶನಿವಾರ  ನಡೆಯಲಿರುವ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಚಾಂಪಿಯನ್‌ಷಿಪ್, ಜಟ್ಟಿಗೇಶ್ವರ ಟ್ರೋಫಿಗೆ ಮಣೂರು ಪಡುಕರೆ ಸಜ್ಜಾಗಿ ನಿಂತಿದೆ. ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವ ‘ಭಾರತದ ಸಾಂಪ್ರದಾಯಿಕ ಕ್ರೀಡೆ ಕಬಡ್ಡಿ ಈಗ ವೃತ್ತಿಪರವಾಗಿ ರೂಪುಗೊಂಡಿದ್ದು, ಗ್ರಾಮೀಣ ಮಟ್ಟದಲ್ಲೂ ಉತ್ತಮ ಗುಣಮಟ್ಟದ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಮಣೂರು ಪಡುಕರೆ ಫ್ರೆಂಡ್ಸ್ ಅತ್ಯಂತ ವೃತ್ತಿಪರತೆಯಲ್ಲಿ ಈ ಕಬಡ್ಡಿ ಟೂರ್ನಿಯನ್ನು ಆಯೋಜಿಸಿದ್ದಾರೆ.

ಮಣೂರು ಪಡಕರೆಯ ಇತಿಹಾಸ ಪ್ರಸಿದ್ಧ ಜಟ್ಟಿಗೇಶ್ವರ ಅಂಗಣದಲ್ಲಿ ನಡೆಯಲಿರುವ ಈ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಬಹ್ಮಾವರದಿಂದ ಬೈಂದೂರು ವ್ಯಾಪ್ತಿಯಲ್ಲಿ ಬರುವ ಆಟಗಾರರಿಗೆ ಮಾತ್ರ ಅವಕಾಶ. ಪ್ರತಿಯೊಂದು ತಂಡದ ಆಟಗಾರರು ಅಂಗಣಕ್ಕೆ ಇಳಿಯುವ ಮುನ್ನ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸತಕ್ಕದ್ದು.  ಎಲ್ಲ ತಂಡಗಳು ಸಂಜೆ 7 ಗಂಟೆಯ ಒಳಗಾಗಿ ಹಾಜರಿರತಕ್ಕದ್ದು.
ಚಾಂಪಿಯನ್ ತಂಡ 15,000 ರೂ. ನಗದು ಬಹುಮಾನದೊಂದಿಗೆ ಶಾಶ್ವತ ಫಲಕ ಗಳಿಸಲಿದೆ, ರನ್ನರ್ ಅಪ್ ತಂಡ 10,000 ರೂ. ನಗದು ಬಹುಮಾನದೊಂದಿಗೆ ಶಾಶ್ವತ ಫಲಕ ಗೆಲ್ಲಲಿದೆ. ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡ ಅನುಕ್ರಮವಾಗಿ 6,000 ರೂ,  3,000 ರೂ. ಮತ್ತು ಶಾಶ್ವತ ಫಲಕ ಗಳಿಸಲಿದೆ.  ಪ್ರವೇಶ ಶುಲ್ಕ ರೂ. 1,500
ಹೆಚ್ಚಿನ ಮಾಹಿತಿಗಾಗಿ ನಿತೀನ್ ಕಾಂಚನ್ 8296875118, ವಿಘ್ನೇಶ್ ಕಾಂಚನ್-9880279869, ಸುನಿಲ್ ಶೆಟ್ಟಿ -9686125250 ಅವರನ್ನು ಸಂಪರ್ಕಿಸಬಹುದು. 

Related Articles