Saturday, July 27, 2024

ಪಾಕಿಸ್ತಾನದಲ್ಲಿ ಐಪಿಎಲ್ ನೋಡುವುದಕ್ಕೂ ನಿಷೇಧ !

ಏಜೆನ್ಸೀಸ್ ಕರಾಚಿ

ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವುದರಂದ ಭಾರತದ ಕಂಪೆನಿ ಹಿಂದೆ ಸರಿದ ಕಾರಣ, ಪಾಕಿಸ್ತಾನವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ದೇಶದಲ್ಲಿ ನೇರ ಪ್ರಸಾರ ಮಾಡದಿರಲು ತೀರ್ಮಾನಿಸಿದೆ. ಇದರೊಂದಿಗೆ ಈ ಬಾರಿಯ ಐಪಿಎಲ್‌ಗೆ ಟಿವಿ ವೀಕ್ಷಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.

ಮಾರ್ಚ್ 23 ರಿಂದ ಆರಂಭಗೊಳ್ಳಲಿರುವ ಐಪಿಎಲ್ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಪ್ರಸಾರ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಅಲ್ಲಿಯ ಮಾಹಿತಿ ಹಾಗೂ ಪ್ರಸಾರದ ಸಚಿವ ಫವಾದ್ ಅಹಮ್ಮದ್ ಚೌಧರಿ ಹೇಳಿದ್ದಾರೆ.  ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಭಾರತದ  ಪ್ರಸಾರದ ಕಂಪೆನಿ ಡಿ ಸ್ಪೋರ್ಟ್ಸ್ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಪಿಎಸ್‌ಎಲ್ ಪಂದ್ಯಗಳ ಪ್ರಸಾರದಿಂದ ಹಿಂದೆ ಸರಿದಿತ್ತು. ಪಾಕಿಸ್ತಾನ ಸೂಪರ್ ಲೀಗ್ ನಡೆಯುವಾಗ ‘ಭಾರತದ ಪ್ರಸಾರದ ಕಂಪೆನಿ ಹಾಗೂ ಅಲ್ಲಿಯ ಸರಕಾರ ನಡೆದುಕೊಂಡಿರುವ ರೀತಿ ಕ್ರೀಡಾ ಸ್ಫೂರ್ತಿಯಿಂದ ಕೂಡಿಲ್ಲ.  ಈ ಕಾರಣಕ್ಕಾಗಿ ಪಾಕಿಸ್ತಾನದಲ್ಲೂ ಐಪಿಎಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವುದರಲ್ಲಿ ಅರ್ಥವಿಲ್ಲ, ಆದ್ದರಿಂದ  ನಿಷೇಧ  ಹೇರಲಾಗುತ್ತಿದೆ ಎಂದು ಫವಾದ್ ಅಹಮ್ಮದ್ ಹೇಳಿದ್ದಾರೆ.
ರಾಜಕೀಯದಿಂದ ಕ್ರೀಡೆಯನ್ನು ಪ್ರತ್ಯೇಕಿಸಬೇಕು. ಆದರೆ ‘ಭಾರತ ಕೈಗೊಂಡ  ತೀರ್ಮಾನದಿಂದ ನಾವು ಈ ರೀತಿಯ ನಿರ್ಧಾರಕ್ಕೆ ಅನಿವಾರ್ಯವಾಗಿ ಬರಬೇಕಾಯಿತು ಎಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದ ವೇಳೆ ‘ಭಾರತ ಕ್ರಿಕೆಟ್ ತಂಡದ ಆಟಗಾರರು ಸೇನೆಯ ಕ್ಯಾಪ್ ಧರಿಸಿದ್ದು ಕ್ರೀಡಾ ಸ್ಫೂರ್ತಿಗೆ ತಕ್ಕುದಾದುದಲ್ಲ. ಪುಲ್ವಾಮಾ ದಾಳಿಯನ್ನು ವಿರೋಧಿಸಿ ಭಾರತ ಕ್ರಿಕೆಟ್ ತಂಡದ ಆಟಗಾರರು ಸೇನೆಯ ಕ್ಯಾಪ್ ಧರಿಸಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿಸಿಬಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯನ್ನು ಆಗ್ರಹಿಸಿತ್ತು.

Related Articles