Sunday, September 8, 2024

ಕ್ಯಾನ್ಸರ್ ಪೀಡಿತ ದೈಹಿಕ ಶಿಕ್ಷಕರಿಗೆ ನೆರವಾದ ಸ್ಪೋರ್ಟ್ಸ್ ಡೆನ್

ಸ್ಪೋರ್ಟ್ಸ್ ಮೇಲ್ ವರದಿ

ಕ್ರೀಡಾ ಸಾಮಗ್ರಿಗಳ ಮಾರಾಟದ ಮೂಲಕ ಜನಪ್ರಿಯಗೊಂಡಿರುವ ಸ್ಪೋರ್ಟ್ಸ್ ಡೆನ್‌ನ ಮಾಲೀಕ ಗಣೇಶ್ ಕಾಮತ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದ  ಕೆನರಾ ಸಿಬಿಎಸ್‌ಸಿ ಶಾಲೆಯ ದೈಹಿಕ ಶಿಕ್ಷಕ ಪ್ರಶಾಂತ್ ಅವರ ಬದುಕಿಗೆ ಸ್ಪಂದಿಸಿದ್ದಾರೆ. 36 ವರ್ಷದ ಪ್ರಶಾಂತ್ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.

ಉತ್ತಮ ದೈಹಿಕ ಶಿಕ್ಷಕರಾಗಿರುವ ಪ್ರಶಾಂತ್ ಬದುಕೆಗೆ ನೆರವಾಗಲು  ಗಣೇಶ್ ಕಾಮತ್  ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಿದರು. ಅದರಿಂದ ಬಂದ ಹಣವನ್ನು ಪ್ರಶಾಂತ್ ಅವರ ಹೆತ್ತವರಿಗೆ ನೀಡಿದ್ದಾರೆ. ಸುಮಾರು 1 ಲಕ್ಷ ರೂ. ಸಂಗ್ರಹಿಸಿ ದೈಹಿಕ ಶಿಕ್ಷಕನ ಬದುಕಿಗೆ ನೆರವಾಗಿದ್ದಾರೆ. ಚಿಕಿತ್ಸೆಗೆ ಅಂದಾಜು 25 ಲಕ್ಷ ರೂ. ಬೇಕಾಗಬಹುದು ಎಂದು ಚಿಕಿತ್ಸೆ ನೀಡುತ್ತಿರುವ ಯೆನಪೋಯಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
‘ಪ್ರಶಾಂತ್ ಅವರು ಅನೇಕ ಕ್ರೀಡಾ ಪಟುಗಳ ಬದುಕಿಗೆ ನೆರವಾಗಿದ್ದಾರೆ, ಆದರೆ ಅವರ ಬದುಕು ಈಗ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ನಮ್ಮಿಂದಾದ ನೆರವನ್ನು ನೀಡಬೇಕೆಂಬ ಹಂಬಲ,  ಅದಕ್ಕಾಗಿ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಿದೆವು, ಬಂದ ಹಣವನ್ನು ಪ್ರಶಾಂತ್ ಅವರ ತಂದೆಗೆ ನೀಡಿದೆವು. ನಮಗೆ ಪ್ರಶಾಂತ್ ಗುಣಮುಖರಾಗಿ ಮತ್ತೆ ಕೆಲಸದಲ್ಲಿ ಮುಂದುವರಿಯಬೇಕೆಂಬುದೇ ಹಂಬಲ,‘ ಎಂದು ಸ್ಪೋರ್ಟ್ಸ್ ಡೆನ್ ಮಾಲೀಕ ಗಣೇಶ್ ಕಾಮತ್ ಹೇಳಿದ್ದಾರೆ.

Related Articles