Friday, June 14, 2024

ಐಸಿಸಿ ಹಾಲ್ ಆಫ್ ಫೇಮ್ ಸ್ವೀಕರಿಸಿದ ದಿ ವಾಲ್

ತಿರುವನಂತಪುರಂ:

 ಇಲ್ಲಿನ ಗ್ರೀನ್‍ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದನೇ ಏಕದಿನ ಪಂದ್ಯದ ಆರಂಭದ ಕೆಲವು ನಿಮಿಷಗಳ ಮುನ್ನ ದಿ ವಾಲ್ ಖ್ಯಾತಿಯ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಅಧೀಕೃತವಾಗಿ ಐಸಿಸಿ ಹಾಲ್ ಆಫ್ ಫೇಮ್ ಗೌರವವನ್ನು ಸ್ವೀಕರಿಸಿದರು.

ಸಾವಿರಾರು ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ರಾಹುಲ್ ದ್ರಾವಿಡ್ ಅವರು ಮತ್ತೊಬ್ಬ ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಅವರಿಂದ ಹಾಲ್ ಆಫ್ ಫೇಮ್ ಪ್ರಶಸ್ತಿ ಸ್ವೀಕರಿಸಿದರು. ಐಸಿಸಿ ಹಾಲ್ ಫೇಮ್ ಗೌರವ ಸ್ವೀಕರಿಸುತ್ತಿರುವ ಐದನೇ ಭಾರತೀಯ ಎಂಬ ಕೀರ್ತಿಗೆ ದಿ ವಾಲ್ ಭಾಜನರಾದರು.
ಕ್ರಿಕೆಟ್ ಕ್ಷೇತ್ರದಲ್ಲಿನ ಗಣನೀಯ ಸಾಧನೆ ಗುರ್ತಿಸಿ ಕಳೆದ ಜುಲೈ ತಿಂಗಳಲ್ಲಿ ನಡೆದಿದ್ದ ಐಸಿಸಿ ಸಮಾರಂಭವೊಂದರಲ್ಲಿ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಹಾಗೂ ಇಂಗ್ಲೆಂಡ್ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್‍ವುಮೆನ್ ಕ್ಲೈರೆ ಟೇಲರ್ ಅವರನ್ನು ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಆಯ್ಕೆ ಮಾಡಲಾಗಿತ್ತು.
 2009ರಲ್ಲಿ  ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾರತದ ಮಾಜಿ ಆಟಗಾರರಾದ ಬಿಷನ್ ಸಿಂಗ್ ಬೇಡಿ, ಸುನೀಲ್ ಗವಾಸ್ಕರ್ ಹಾಗೂ ಕಪೀಲ್ ದೇವ್ ಭಾಜನರಾಗಿದ್ದರು. ಬಳಿಕ, 2015 ರಲ್ಲಿ ಭಾರತದ ಮಾಜಿ ಸ್ಪಿನ್ನರ್ ಕನ್ನಡಿಗ ಅನಿಲ್ ಕುಂಬ್ಳೆ ಹಾಲ್ ಆಫ್ ಫೇಮ್ ಪಡೆದಿದ್ದರು.

Related Articles