ಭಾರತ ಮಿಶ್ರ ತಂಡಕ್ಕೆ ಚಿನ್ನ

0
191
ಕುವೈತ್ ಸಿಟಿ: 

ಭಾರತದ ಅನುಭವಿ ಶೂಟರ್‌ಗಳಾದ ಮನು ಭಾಕರ್ ಮತ್ತು ಸೌರಭ್ ಚೌಧರಿ ಅವರು ಕಿರಿಯರ 11ನೇ ಆವೃತ್ತಿಯ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು.

10 ಮೀ. ಏರ್ ರೈಫಲ್ ಮಿಶ್ರ ತಂಡದಲ್ಲಿ ಎಲ್ವೆನಿಲ್ ವಿಲೇರಿವನ್ ಮತ್ತು ಹೃದಯ ಹಜಾರಿಕಾ ಅವರು ಉತ್ತಮ ಪ್ರದರ್ಶನ ತೋರುವ ಮೂಲಕ ಸ್ವರ್ಣ ಗೆದ್ದುಕೊಂಡರೆ, ಅದೇ ವಿಭಾಗದಲ್ಲಿ ಅರ್ಜುನ್ ಬಬುತಾ ಮತ್ತು ಮೆಹುಲಿ ಘೋಷ್ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಭಾರತದ ಅಭಿಧಾನ್ಯ ಪಾಟೀಲ್ ಮತ್ತು ಅನ್ಮೋಲ್ ಜೈನ್  ಅವರು ನಾಲ್ಕನೇ ಸ್ಥಾನದೊಂದಿಗೆ ಪದಕ ವಂಚಿತರಾದರು. ಈ ಮೂಲಕ ಭಾರತದ ಪದಕ ಖಾತೆಗೆ 11 ಪದಕಗಳು ಸೇರಿದವು.