Friday, June 14, 2024

ಬಿಎಂಎಸ್ ತಾಂತ್ರಿಕ ವಿವಿಯಲ್ಲಿ ಕ್ರೀಡಾ ಹಬ್ಬ

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನ ಬಿ. ಎಂ. ಎಸ್. ತಾಂತ್ರಿಕ ಮಹಾವಿದ್ಯಾಲಯ ಸಿಬ್ಬಂದಿಗಾಗಿ ಆಯೋಜಿಸಿದ್ದ ಬಿ.ಎಸ್. ನಾರಾಯಣ್ ಸ್ಮಾರಕ ಅಂತರಕಾಲೇಜು ಕ್ರೀಡಾಕೂಟವನ್ನು ಕಾಲೇಜಿನ ಮಾಜಿ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ  ಡಾ. ಎ. ಶ್ರೀನಿವಾಸನ್ ಅವರು 19 ಫೆಬ್ರವರಿ 2021 ರಂದು ಉದ್ಘಾಟಿಸಿದರು ಹಾಗೂ   ಡಾ. ಬಿ.ವಿ.ರವಿಶಂಕರ್, ಪ್ರಾಂಶುಪಾಲರು, ಡಾ. ಎಸ್. ಮುರಳೀಧರ, ಉಪಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಎಂ.ಶಿವರಾಮ ರೆಡ್ಡಿ ಅವರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

ಕ್ರೀಡೆಗಳು: ಥ್ರೋಬಾಲ್ (ಮಹಿಳೆಯರು), ವಾಲಿಬಾಲ್ (ಪುರುಷರು), ಬ್ಯಾಡ್ಮಿಂಟನ್ (ಮಹಿಳೆಯರು), ಬ್ಯಾಡ್ಮಿಂಟನ್ ಪುರುಷರು (40 ವರ್ಷಕ್ಕಿಂತ ಕಡಿಮೆ) ಮತ್ತು ಬ್ಯಾಡ್ಮಿಂಟನ್ ಪುರುಷರು (40 ವರ್ಷಕ್ಕಿಂತ ಮೇಲ್ಪಟ್ಟವರು)

ಈ ಪಂದ್ಯಾವಳಿಯಲ್ಲಿ ಸುಮಾರು 42 ತಂಡಗಳು ಭಾಗವಹಿಸಿದ್ದವು.

.20 ಫೆಬ್ರವರಿ  2021  ರಂದು ಬಿ ಎಂ ಎಸ್ ತಾಂತ್ರಿಕ ಮಹಾವಿದ್ಯಾಲಯದ  ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಜಿ.ಆರ್. ಶ್ರೀನಿವಾಸ, ಮಾಜಿ ವಿಭಾಗ ಮುಖ್ಯಸ್ಥರು, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಹಾಗೂ ಡಾ. ಬಿ.ವಿ.ರವಿಶಂಕರ್, ಪ್ರಾಂಶುಪಾಲರು ಮತ್ತು ಡಾ.ಎಂ.ಶಿವರಾಮ ರೆಡ್ಡಿ ಅವರು, ನಿರ್ದೇಶಕರು, ದೈಹಿಕ ಶಿಕ್ಷಣ  ವಿಭಾಗ ಉಪಸ್ಥಿತರಿದ್ದರು.

ಕೀಡಾಕೂಟದ ಪಲಿತಾಂಶ

ಕ್ರೀಡೆಗಳು

  1. ಥ್ರೋಬಾಲ್(ಮಹಿಳೆಯರು),

ಪ್ರಥಮ : ಬಿಎಂಎಸ್ ಮಹಿಳಾ ಕಾಲೇಜು

ದ್ವಿತೀಯ: ಸೇಂಟ್ ಜೋಸೆಫ್ ಕಾಲೇಜು

  1. ವಾಲಿಬಾಲ್(ಪುರುಷರು)

ಪ್ರಥಮ :ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್

ದ್ವಿತೀಯ: ಏಟ್ರಿಯ ತಾಂತ್ರಿಕ ಮಹಾವಿದ್ಯಾಲಯ

  1. ಬ್ಯಾಡ್ಮಿಂಟನ್(ಮಹಿಳೆಯರು

ಪ್ರಥಮ : ಬಿಎಂಎಸ್ ಮಹಿಳಾ ಕಾಲೇಜು

ದ್ವಿತೀಯ: ಸಿಂಧಿ ಕಾಲೇಜು, ಹೆಬ್ಬಾಳ

  1. ಬ್ಯಾಡ್ಮಿಂಟನ್ಪುರುಷರು(40 ವರ್ಷಕ್ಕಿಂತ ಕಡಿಮೆ)

ಪ್ರಥಮ : ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯ

ದ್ವಿತೀಯ: ಪಿ ಇ ಎಸ್ ವಿಶ್ವವಿದ್ಯಾಲಯ

  1. ಬ್ಯಾಡ್ಮಿಂಟನ್ಪುರುಷರು(40 ವರ್ಷಕ್ಕಿಂತ ಮೇಲ್ಪಟ್ಟವರು)

ಪ್ರಥಮ  : ಬಿ. ಎಂ. ಎಸ್. ತಾಂತ್ರಿಕ ಮಹಾವಿದ್ಯಾಲಯ ಎ ತಂಡ

ದ್ವಿತೀಯ: ಬಿ. ಎಂ. ಎಸ್. ತಾಂತ್ರಿಕ ಮಹಾವಿದ್ಯಾಲಯ ಬಿ ತಂಡ.

Related Articles