Friday, December 13, 2024

ಜೆಮ್ಷೆಡ್ಪುರ ತಂಡಕ್ಕೆ ಮಾಡು ಇಲ್ಲವೆ ಮಡಿ ಪಂದ್ಯ

ಸ್ಪೋರ್ಟ್ಸ್ ಮೇಲ್ ವರದಿ ಗೋವಾ:i:  

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜೆಮ್ಷೆಡ್ಪುರ ಎಫ್ ಸಿ ತಂಡಕ್ಕೆ ಪ್ಲೇ ಆಫ್ ತಲುಪಲು ಇದು ಕೊನೆಯ ಅವಕಾಶ. ಜೆಮ್ಷೆಡ್ಪುರಕ್ಕೆ ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸುವುದು ಮಾತ್ರವಲ್ಲದೆ ಇತರ ತಂಡಗಳು ಅಂಕಗಳನ್ನು ಕಳೆದುಕೊಳ್ಳಬೇಕು. ಹಾಗೆ ನಡೆಯುವದು ಕಷ್ಟ ಸಾಧ್ಯ. ಜೆಎಫ್ ಸಿ ಕೋಚ್ ಓವೆನ್ ಕೊಯ್ಲ್ ಮುಂಬೈ ಸಿಟಿ ಎಫ್ ಸಿ   ವಿರುದ್ಧ ಜಯ ಗಳಿಸಿ ಅತ್ಯಂತ ಗೌರವದೊಂದಿಗೆ ಋತುವನ್ನು ಮುಗಿಸಬೇಕು ಎಂದು ತಂಡಕ್ಕೆ ಸೂಚಿಸಿದ್ದಾರೆ.

ಗೋಲು ಗಳಿಸಿದರೆ ಪಂದ್ಯ ಗೆದ್ದಂತೆ, ಆದರೆ ಜೆಎಫ್ ಸಿ ತಂಡ ಗೋಲು ಗಳಿಸುವಲ್ಲಿ ವಿಫಲವಾಗಿವೆ. ಅಟ್ಯಾಕ್ ವಿಭಾಗದಲ್ಲಿ ತಂಡ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಕಳೆದ ಆರು ಪಂದ್ಯಗಳಲ್ಲಿ ತಂಡ ಗಳಿಸಿದ್ದು ಕೇವಲ ಮೂರು ಗೋಲುಗಳು. 58 ಶಾಟ್ ಗಳಿ್ಇ 12 ಮಾತ್ರ ಗುರಿಯ ಕಡೆಗಿದ್ದವು.

ತಂಡ ಉತ್ತಮ ರೀತಿಯಲ್ಲಿ ಶ್ರಮವಹಿಸಿದರೆ ನಿರೀಕ್ಷಿತ ಫಲಿತಾಂಶ ಗಳಿಸಲು ಸಾಧ್ಯ. “ನಾವು ಇಂಥವರೇ ಗೋಲು ಗಳಿಸಬೇಕೆಂದು ಅವರ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ. ನಮಗೆ ವಿಭಿನ್ನ ಆಟಗಾರರು ಗೋಲು ಗಳಿಸಬೇಕು.,’ ಎಂದರು.

ಪ್ಲೇ ಆಫ್ ತಲಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ಜೆಮ್ಷೆಡ್ಪುರ, ತಂಡ ಅಂತಿಮ ಎರಡು ಪಂದ್ಯಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕು ಎಂದಿದ್ದಾರೆ. “ನಾವು ಉತ್ತಮ ರೀತಿಯಲ್ಲಿ ಜಯ ಗಳಿಸಿ ಬಲಿಷ್ಠತೆಯೊಂದಿಗೆ ಋತುವನ್ನು ಮುಗಿಸಬೇಕು. ನಾವು ಆರು ಅಂಕಗಳನ್ನು ಗಳಿಸಿ 27 ಅಂಕಗಳನ್ನು ತಲುಪಬೇಕು ಮೂರು ತಂಡಗಳು 27 ಅಂಕಗಳನ್ನು ಗಳಿಸಿ ಪ್ಲೇ ಆಫ್ ಗೆ ಸ್ಪರ್ಧಿಸುತ್ತಿರುವಾಗ ನಾವು ಕೂಡ ಅದೇ ರೀತಿ ಸ್ಪರ್ಧೆಯಲ್ಲಿರಬೇಕು. ನಮಗೆ ಇನ್ನೂ ಬಿಎಫ್ ಸಿ ವಿರುದ್ಧ ಆಡಬೇಕಾಗಿದೆ. ಆದ್ದರಿಂದ ಉತ್ತಮವಾಗಿ ಆಡಬೇಕಾಗಿದೆ. ನಾವು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಪೂರ್ಣ ಅಂಕಗಳನ್ನು ಗಳಿಸಬೇಕು,” ಎಂದರು.

ಮುಂಬೈ ಸಿಟಿ ಎಫ್ ಸಿ ತಂಡ ಜೆಮ್ಷೆಡ್ಪುರ ವಿರುದ್ಧ ಜಯ ಗಳಿಸಿ ಮತ್ತೆ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ. ಎಎಫ್ ಸಿ ಚಾಂಪಿಯನ್ಸ್ ಲಿಗ್ ಅರ್ಹತೆ ಪಡೆಯಲು ಮುಂಬೈ ಗುರಿ ಹೊಂದಿದೆ. ಒಂದು ಸೋಲನ್ನು ಅನುಭವಿಸುವುದಕ್ಕೆ ಮುನ್ನ ಸರ್ಗಿಯೋ ಲೊಬೆರಾ ಪಡೆ ಉತ್ತಮ ರೀತಿಯಲ್ಲಿ ಲೀಗ್ ನಲ್ಲಿ ಪ್ರದರ್ಶನ ತೋರಿತ್ತು. ಕಳೆದ ಐದು ಪಂದ್ಯಗಳಲ್ಲಿ ತಂಡ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಇದರಿಂದಾಗಿ ತಂಡ ಅಗ್ರ ಸ್ಥಾನವನ್ನು ಎಟಿಕೆ ಮೋಹನ್ ಬಾಗನ್ ಗೆ ಬಿಟ್ಟುಕೊಡಬೇಕಾಯಿತು. “ ಕೆಲವೊಂದು ವಿಷಯಗಳಲ್ಲಿ ನಾವು ನಿರತಂತರ  ಶ್ರಮ ಮುಂದುವರಿಸಬೇಕು. ನಾವು ಸುಧಾರಿಸುತ್ತೇವೆ ಎಂಬುದು ನಮ್ಮಲ್ಲಿರುವ ಆತ್ಮವಿಶ್ವಾಸ. ಮುಂದಿನ ಪಂದ್ಯಗಳ ಬಗ್ಗೆ ನಾವು ಗಮನ ಹರಿಸಬೇಕು. ನೀವು ಗೆಲ್ಲಬೇಕಾದರೆ ನೀವು ತಂಡವಾಗಿ ಆಡಬೇಕು,” ಎಂದು ಲೊಬೆರಾ ಹೇಳಿದ್ದಾರೆ.

Related Articles