Saturday, July 27, 2024

ನೆನಪಿನಂಗಳದಲ್ಲಿ ಉಳಿಯುವ ನವೆಂಬರ್‌ 14, 15 ಮತ್ತು 16

ಮುಂಬಯಿ: ಕ್ರಿಕೆಟ್‌ ಜಗತ್ತಿನಲ್ಲಿ ಭಾರತೀಯರು ನವೆಂಬರ್‌ ತಿಂಗಳ 14, 15 ಮತ್ತು 16ನೇ ದಿನಾಂಕವನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುತ್ತಾರೆ.  ನವೆಂಬರ್‌ 14 ಮಕ್ಕಳ ದಿನಾಚರಣೆ ಆದರೆ ಅದರ ಜೊತೆಯಲ್ಲೇ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕ್‌ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಯ ಟೆಸ್ಟ್‌ ಪಂದ್ಯವನ್ನಾಡಲು ಅಂಗಣಕ್ಕಿಳಿದ ದಿನ. ನವೆಂಬರ್‌ 15 ಅಂದರೆ ನಾಳೆ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣಸಿದ ದಿನ. ನವೆಂಬರ್‌ 16 ಸಚಿನ್‌ ತೆಂಡೂಲ್ಕರ್‌ ಕೊನೆಯ ಟೆಸ್ಟ್‌ ಪಂದ್ಯವನ್ನಾಡಿ ವಿದಾಯ ಹೇಳಿದ ದಿನ. November 14, 15 and 16 Indians will remember this date for ever.

ಸಚಿನ್‌ ತೆಂಡೂಲ್ಕರ್‌ 2013ರ ನವೆಂಬರ್‌ 14 ರಂದು ಮುಂಬಯಿಯ ವಾಂಖೆಡೆ ಅಂಗಣದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಕೊನೆಯ ಟೆಸ್ಟ್‌ ಪಂದ್ಯವನ್ನಾಡಲು ಅಂಗಣಕ್ಕಿಳಿದರು. 118 ಎಸೆತಗಳನ್ನೆದುರಿಸಿದ ಸಚಿನ್‌ 12 ಬೌಂಡರಿ ನೆರವಿನಿಂದ 74 ರನ್‌ ಗಳಿಸಿ ಡಿಯೋನರೆನ್‌ ಬೌಲಿಂಗ್‌ನಲ್ಲಿ ಸ್ಯಾಮಿಗೆ ಕ್ಯಾಚಿತ್ತು ಪೆವಿಲಿಯನ್‌ ಕಡೆಗೆ ಹೆಜ್ಜೆ ಇಟ್ಟಾಗ ಕೇಳಿ ಬಂದದ್ದು ಸಚಿನ್‌….ಸಚಿನ್‌…ಸಚಿನ್‌….. ಮತ್ತು ನಿಲ್ಲದ ಚಪ್ಪಾಳೆ. ಕೆಲವರು ಕಣ್ಣೀರಿಟ್ಟರೆ ಇನ್ನು ಹಲವರು ಮೌನಕ್ಕೆ ಸರಿದರು. ಸಚಿನ್‌ ವೆಸ್ಟ್‌ ಇಂಡೀಸ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ಓವರ್‌ ಕೂಡ ಎಸೆದು 8 ರನ್‌ ನೀಡಿದ್ದರು. ಸಚಿನ್‌ ಅವರ 200ನೇ ಟೆಸ್ಟ್‌ ಪಂದ್ಯ ಕೂಟ ಅದಾಗಿತ್ತು.

ನವೆಂಬರ್‌ 16 ರಂದು ಸಚಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಿನ. ಅಂದು ಅವರು ಎಲ್ಲರಿಗೂ ಧನ್ಯವಾದ ಹೇಳು ಕೈಯಲ್ಲಿ ಪಟ್ಟಿಯನ್ನೇ ಬರೆದು ತಂದಿದ್ದರು. ಆದರೆ ಹೃದಯದಲ್ಲಿ ಇಡೀ ದೇಶದ ಪ್ರೀತಿಯೇ ತುಂಬಿತ್ತು. ಯಾರ ಹೆಸರನ್ನು ಹೇಳಲಿ ಯಾರ ಹೆಸರನ್ನು ಬಿಡಲಿ ಎಂಬ ಸಂದಿಗ್ಧತೆ. ಆದರೆ ಸಚಿನ್‌ ಅವರು ಅಂದು ಮಾಡಿದ ಪ್ರೀತಿಯ ವಿದಾಯದ ಭಾಷಣ ಇಡೀ ಭಾರತ ದೇಶವನ್ನು ಮಾತ್ರವಲ್ಲ ಕ್ರಿಕೆಟ್‌ ಜಗತ್ತನ್ನೇ ಮೌನಕ್ಕೆ ತಳ್ಳಿತ್ತು. ಒಬ್ಬ ಕ್ರಿಕೆಟ್‌ ಸಾಮ್ರಾಟನ ವಿದಾಯ ಜಗತ್ತನ್ನೇ ನಿಬ್ಬೆರಗುಗೊಳಿಸಿತು.

ನಾಳೆ ಅಂದರೆ ನವೆಂಬರ್‌ 15 ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಸ್ಥಾನಕ್ಕಾಗಿ ಸೆಣಸಲಿವೆ. 2011ರಲ್ಲಿ ವಿಶ್ವ ಚಾಂಪಿಯನ್‌ ಪಟ್ಟ ಗೆದ್ದಿದ್ದ ವಾಂಖೆಡೆ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಇತಿಹಾಸ ಬರೆಯಲು ಭಾರತ ಸಜ್ಜಾಗಿದೆ. ಈ ಮೂಲಕ ಕ್ರಿಕೆಟ್‌ ಜಗತ್ತು ನವೆಂಬರ್‌ 15ನ್ನು ತನ್ನ ನೆನಪಿನಂಗಣದಲ್ಲಿ ಕಾಪಿಟ್ಟುಕೊಳ್ಳಲಿದೆ.

Related Articles