Saturday, July 27, 2024

ನಿನಾದ್‌ಗೆ ಪ್ರಶಸ್ತಿ ಡಬಲ್

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನ ಸಿಸ್ಟರ್ ನಿವೇದಿತಾ ಹೈಸ್ಕೂಲ್‌ನ ವಿದ್ಯಾರ್ಥಿ ನಿನಾದ್ ರವಿ ಕುಮಾರ್ 16 ವರ್ಷದೊಳಗಿನ ಬಾಲಕರ ಟಿಎಸ್‌೭ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಗೋವಿಂದ್ ಸೆಹ್ವಾಗ್ ವಿರುದ್ಧ ಜಯ ಗಳಿಸಿ ಡಬಲ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

 

ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ನಿನಾದ್ 7-6(7-1), 7-5 ಅಂತರದಲ್ಲಿ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡರು. ರಾಜಾಜಿನಗರದ ಟೆನಿಸ್ ಟೆಂಪಲ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಡಬಲ್ಸ್ ಪಂದ್ಯದಲ್ಲೂ ನಿನಾದ್ ಪ್ರಭುತ್ವ ಸಾಧಿಸಿದರು. ಗೋವಿಂದ್ ಸೆಹ್ವಾಗ್ ಅವರೊಂದಿಗೆ ಡಬಲ್ಸ್‌ನಲ್ಲಿ ಆಡಿದ ನಿನಾದ್, ಎದುರಾಳಿ ಜೋಡಿ ಯಶಸ್ ಕಿರಣ್ ಹಾಗೂ ಅಶ್ವಿನ್ ವಿರುದ್ಧ 6-4,6-2 ಅಂತರದಲ್ಲಿ ಗೆದ್ದು ಡಬಲ್ ಪ್ರಶಸ್ತಿ ಗೆದ್ದುಕೊಂಡರು. ಬಾಲಕಿಯರ ಸಿಂಗಲ್ಸ್‌ನಲ್ಲಿ ಆಕಾಂಕ್ಷ 6-2,6-3 ಅಂತರದಲ್ಲಿ ಉತ್ಸಾ ಕಾರ್ಲಾ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದರು. ಬಾಲಕಿಯರ ಡಬಲ್ಸ್‌ನಲ್ಲಿ ಚಾರ್ಮಿ ಗೋಪಿನಾತ್ ಹಾಗೂ ಸುರಭಿ ಶ್ರೀನಿವಾಸ್ ಜೋಡಿ 4-6,6=1, 10-2
ಅಂತರದಲ್ಲಿ ಆತ್ಮಿಕಾ ಹಾಗೂ ಆಕಾಂಕ್ಷಾ ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಮಕ್ಕಳಿಗಾಗಿ ಉದ್ಯೋಗ ತೊರೆದ ರವಿ

ರವಿ ಕುಮಾರ್ ಕ್ರೀಡಾ ಪ್ರೇಮಿ. ನಿಕ್ಷೇಪ್ ಹಾಗೂ ನಿನಾದ್ ಇಬ್ಬರು ಮಕ್ಕಳು. ನಿಕ್ಷೇಪ್ ಈಗಾಗಲೇ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕಿರಿಯರ ವಿಭಾಗದಲ್ಲಿ ದೇಶದಲ್ಲೇ ನಂ.೧ ಸ್ಥಾನಕ್ಕೇರಿದ್ದರು. ಈಗ ವೃತ್ತಿಪರ ಟೆನಿಸ್‌ನಲ್ಲಿ ಆಡುತ್ತಿದ್ದಾರೆ. ರವಿ ಕುಮಾರ್ ಇಬ್ಬರೂ ಮಕ್ಕಳನ್ನು ಟೆನಿಸ್ ಆಟಗಾರರನ್ನಾಗಿ ಮಾಡಬೇಕೆಂದು ಎಂಜಿನಿಯರಿಂಗ್ ಉದ್ಯೋಗವನ್ನು ತೊರೆದು ನಿಕ್ಷೇಪ್ ಜತೆ ದೇಶದ ಯಾವುದೇ ಭಾಗದಲ್ಲಿ ಪಂದ್ಯ ನಡೆದರೂ ಅಲ್ಲಿಗೆ ಹೋಗುತ್ತಿದ್ದರು. ತಂದೆಯ ನಿರೀಕ್ಷೆಯಂತೆ ನಿಕ್ಷೇಪ್ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಧನೆ ಮಾಡಿದ್ದಾರೆ. ಈಗ ಅಣ್ಣನ ಹಾದಿಯಲ್ಲೇ ಮುಂದೆ ಸಾಗಿರುವ ನಿನಾದ್ ಕೂಡ ಉತ್ತಮ ಪ್ರದರ್ಶನ ತೋರಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾನೆ. ತಂದೆಯ ತ್ಯಾಗಕ್ಕೆ ಮಕ್ಕಳಿಬ್ಬರೂ ಚಾಂಪಿಯನ್ ಆಗುತ್ತಿರುವುದು ಖುಷಿಯ ವಿಚಾರ.


ಸುರಾನಾ ಕಾಲೇಜ್ ನೆರವು
ಬೆಂಗಳೂರಿನ ಸುರಾನಾ ಕಾಲೇಜು ಕ್ರೀಡಾ ಪ್ರತಿಭೆಗಳಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಹ ನೀಡುತ್ತಿದೆ. ನಿಕ್ಷೇಪ್ ಗೆ ಟೆನಿಸ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಈ ಕಾಲೇಜು ಎಲ್ಲ ರೀತಿಯ ನೆರವನ್ನು ನೀಡಿದೆ.

Related Articles