Friday, June 14, 2024

ಭಾರತ ಬಿ ತಂಡಕ್ಕೆ ಚತುಷ್ಕೋನ ಸರಣಿ

ಸ್ಪೋರ್ಟ್ಸ್ ಮೇಲ್ ವರದಿ

ಆಸ್ಟ್ರೇಲಿಯಾ ಎ ವಿರುದ್ಧ  ೯ ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿ ಭಾರತ ಬಿ ತಂಡ ಚತುಷ್ಕೋನ ಸರಣಿ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎ ತಂಡ ೪೭.೫ ಓವರ್‌ಗಳಲ್ಲಿ ೨೨೫ ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಡಾರ್ಸೀ ಶಾರ್ಟ್ ೭೨, ಉಸ್ಮಾನ್ ಖವಾಜ ೨೩, ಆಸ್ಟನ್ ಅಗರ್ ೨೦ ಆಸೀಸ್‌ನ ಸಾ‘ಾರಣ ಮೊತ್ತದಲ್ಲಿ ನೆರವಾದರು. ಭಾರತ ಬಿ ತಂಡದ ಪರ  ಸಿದ್ಧಾರ್ಥ ಕೈಲ್ ೨೪ಕ್ಕೆ ೨, ನವ್‌ದೀಪ್ ಸೈನಿ ೩೩ಕ್ಕೆ ೨ ಹಾಗೂ ಶ್ರೇಯಸ್ ಗೋಪಾಲ್ ೫೦ಕ್ಕೆ ೩ ವಿಕೆಟ್ ಗಳಿಸಿದರು.
ಅಲ್ಪ ಮೊತ್ತವನ್ನು ಬೆಂಬತ್ತಿದ ‘ಾರತ ತಂಡದ ಪರ ಮಯಾಂಕ್ ಅಗರ್ವಾಲ್ (೬೯) ಹಾಗೂ ಶುಭ್ಮನ್   ಗಿಲ್ (೬೯ *) ಹಾಗೂ ಮನೀಶ್ ಪಾಂಡೆ (೭೩ *)  ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ೩೬.೩ ಓವರ್‌ಗಳಲ್ಲಿ ಕೇವಲ ೧ ವಿಕೆಟ್ ನಷ್ಟಕ್ಕೆ ೨೩೦ ರನ್ ಗಳಿಸಿ ಚಾಂಪಿಯನ್‌ಪಟ್ಟ ಗೆದ್ದುಕೊಂಡಿತು.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಎ ತಂಡ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ  ೧೨೪ ರನ್ ಅಂತರದಲ್ಲಿ ಜಯ ಗಳಿಸಿತು.

Related Articles