Friday, September 22, 2023

ಕಾಲಲ್ಲಿ 12 ಬೆರಳು, ಮನೆಗೆ ಆಕೆಯೇ ನೆರಳು

ಸ್ಪೋರ್ಟ್ಸ್ ಮೇಲ್ ವರದಿ 

ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ ಹೆಪ್ಟಾಥ್ಲಾನ್‌ನಲ್ಲಿ ಚಿನ್ನ ಗೆದ್ದಿರುವ ಭಾರತದ ಸ್ವಪ್ನಾ ಬರ್ಮನ್ ನಿತ್ಯವೂ ನೋವು ನುಂಗಿಕೊಂಡು ಪದಕ ಗೆದ್ದವರು. ಮನೆಯ ಆರ್ಥಿಕ ಪರಿಸ್ಥಿತಿ ಮನಸ್ಸಿನ ನೋವಾದರೆ,ಎರಡು  ಕಾಲುಗಳಲ್ಲಿ  ೧೨ ಬೆರಳುಗಳಿರುವುದು ಮತ್ತೊಂದು. ಕಾಲಿಗೆ ಸರಿಯಾದ ಶೂ ಸಿಗದೆ, ೫ ಬೆರಳಿಗೆ ಸಿದ್ಧಪಡಿಸಿರುವ ಶೂ ಧರಿಸಿಯೇ ಸ್ಪರ್ಧಿಸಬೇಕಾಗಿರುವುದು ಅನಿವಾರ್ಯ.

ಇದರಿಂದಾಗಿ ಬರ್ಮನ್ ಯಾವಾಗಲೂ ನೋವು ತಿಂದುಕೊಂಡೇ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಭಾರತದ   ಕ್ರೀಡಾ ಇತಿಹಾಸದಲ್ಲೇ ಏಷ್ಯನ್ ಗೇಮ್ಸ್‌ನ ಹೆಪ್ಟಾಥ್ಲಾನ್‌ನಲ್ಲಿ ಮೊದಲ ಚಿನ್ನ ತಂದಿತ್ತ ಸ್ವಪ್ನಾ ಬರ್ಮನ್ ೬೦೨೬ ಅಂಕ ಗಳಿಸಿ ಐತಿಹಾಸಿಕ ಸಾಧ‘ನೆ ಮಾಡಿದರು. ಹುಟ್ಟಿನಿಂದಲೇ ಸ್ವಪ್ನಾ ಅವರ ಪ್ರತಿಯೊಂದು ಕಾಲಿನಲ್ಲೂ ೬ ಬೆರಳುಗಳು. ಹಲ್ಲು ನೋವಿನ ಕಾರಣ ಸ್ವಪ್ನಾ ದವಡೆಗೆ ನೋವು ನಿವಾರಕ ಪಟ್ಟಿಯನ್ನು ಧ‘ರಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಬಡ ಕುಟುಂಬ 
ಪಶ್ಚಿಮ ಬಂಗಾಳದ ಜಲ್‌ಪೈಗುರಿಯವರಾದ ಸ್ವಪ್ನಾ, ಅವರದ್ದು ಬಡ ಕುಟುಂಬ. ತಂದೆ ಪಂಚನನ್ ಬರ್ಮನ್ ಸ್ವಪ್ನಾ ಚಿಕ್ಕವರಾಗಿರುವಾಗಲೇ ಹಾಸಿಗೆ ಹಿಡಿದಿದ್ದರು. ಲಕ್ವ ಬಡಿದ ಕಾರಣ ಅವರ ಬದುಕು ಹಾಸಿಗೆಯಲ್ಲೇ ಸಾಗುತ್ತಿದೆ. ಇದರಿಂದಾಗಿ ಮನೆಯ ಜವಾಬ್ದಾರಿ ಸ್ವಪ್ನಾ ಅವರ ಮೇಲಿದೆ, ಯಾವುದೇ ಸ್ಪರ್ಧೆ  ಇರಲಿ ಅದರಲ್ಲಿ ಪಾಲ್ಗೊಳ್ಳುವುದೆಂದರೆ ಸ್ವಪ್ನಾಗೆ  ಹಿಂಸೆ. ಏಕೆಂದರೆ ೧೨ ಬೆರಳು. ಸೂಕ್ತವಾದ ಶೂ ಇಲ್ಲದಿರುವುದು. ತಂದೆ ಸೈಕಲ್ ರಿಕ್ಷಾ ಎಳೆದು ಮನೆಯನ್ನು ನೋಡಿಕೊಳ್ಳುತ್ತಿದ್ದರು . ಆದರೆ ಈಗ ಮಗಳೇ ತಂದೆಯ ಬದುಕನ್ನು ಕಾಣಬೇಕಾದ ಪರಿಸ್ಥಿತಿ. ಆರಂಭ‘ದಲ್ಲಿ ಹೈಜಂಪರ್ ಆಗಿದ್ದ ಸ್ವಪ್ನಾ ಇದರಲ್ಲಿ ಹೆಚ್ಚಿನ ಸಾಧನೆ ಮಾಡಲು ಅಸಾಧ್ಯ  ಎಂದರಿತು ಹೆಪ್ಟಾಥ್ಲಾನ್‌ಗೆ ಬದಲಾದರು. ತನ್ನ ಕಾಲಿಗೆ ಸೂಕ್ತವಾಗುವ ಶೂ ಸಿದ್ಧಗೊಳಿಸಿಕೊಡಿ ಎಂದು ಸ್ವಪ್ನಾ ಕ್ರೀಡಾ ಇಲಾಖೆಯನ್ನು ಮನವಿ ಮಾಡಿಕೊಂಡಿದ್ದಾರೆ.

Arpinder Singh

೧೧ನೇ ದಿನದಲ್ಲಿ ಅರ್ಪಿಂದರ್ ಸಿಂಗ್ ಟ್ರಿಪಲ್ ಜಂಪ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ  ಮಾಡಿದರು. ೧೯೭೦ರ ನಂತರ ಭಾರತ ಏಷ್ಯನ್ ಗೇಮ್ಸ್‌ನ ಟ್ರಿಪಲ್ ಜಂಪ್‌ನಲ್ಲಿ ಚಿನ್ನ ಗೆದ್ದಿದೆ. ದೂತಿ ಚಾಂದ್ ಓಟದಲ್ಲಿ ಎರಡನೇ ಬೆಳ್ಳಿ ಗೆದ್ದರು. ಟೇಬಲ್ ಟೆನಿಸ್‌ನಲ್ಲೂಭಾರತದ ಶರತ್ ಕಮಲ್ ಹಾಗೂ ಮೊನಿಕಾ ಬಾತ್ರಾ ಕಂಚಿನ ಪದಕ ಗೆದ್ದರು. ಚೀನಾ ವಿರುದ್ಧ ೧-೦ ಗೋಲಿನಿಂದ ಗೆದ್ದಿರುವ ಭಾರತ ಮಹಿಳಾ ಹಾಕಿ ತಂಡ ಪದಕವನ್ನು ಖಚಿತಪಡಿಸಿದೆ, ಜಪಾನ್ ವಿರುದ್ಧ ಫೈನಲ್ ಗೆದ್ದರೆ  ಮತ್ತೊಂದು ಚಿನ್ನದ ಪದಕ.

Related Articles