Saturday, December 9, 2023

ಮಾರುತಿ ಕ್ರಿಕೆಟ್‌ ಕ್ಲಬ್‌ ಆಶ್ರಯದಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್‌ ಟೂರ್ನಿ

Sportsmail ವರದಿ: ಕಳೆದ ಮೂರುವರೆ ದಶಕಗಳಿಂದ ಕರ್ನಾಟಕ ಕರಾವಳಿಯಲ್ಲಿ ಸಮಾಜ ಸೇವೆ ಮತ್ತು ಕ್ರೀಡಾ ಚಟುವಟಿಕೆಗಳ ಮೂಲಕ ಜನರ ಪ್ರೀತಿಗೆ ಪಾತ್ರವಾಗಿ ರಾಜ್ಯೋತ್ಸವ ಪ್ರಶಸ್ತಿ ಗೆದ್ದಿರುವ ಮಂಗಳೂರಿನ ಉಳ್ಳಾಲದ ಮೊಗವೀರ ಪಟ್ನದ ಮಾರುತಿ ಯುವಕ ಮಂಡಲ (ರಿ.) ಹಾಗೂ ಮಾರುತಿ ಕ್ರಿಕೆಟರ್ಸ್‌ (ರಿ) ಸಂಸ್ಥೆಗಳು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಮೊಗವೀರ ಬಾಂಧವರಿಗಾಗಿ ಎರಡು ದಿನಗಳ ಮೊಗವೀರ ಪ್ರೀಮಿಯರ್‌ ಲೀಗ್‌ ಹಾಗೂ ಮೂರು ದಿನಗಳ ರಾಷ್ಟ್ರ ಮಟ್ಟದ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸದೆ.

ಫೆಬ್ರವರಿ 15 ರಿಂದ 19ರ ವರೆಗೆ ಈ ಕ್ರಿಕೆಟ್‌ ಚಾಂಪಿಯನ್‌ಷಿಪ್‌ ನಡೆಯಲಿದ್ದು, ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ. ಫೆಬ್ರವರಿ 15 ಮತ್ತು 16 ರಂದು ಕುಂದಾಪುರದಿಂದ ಮಂಗಳೂರು ನಡುವಿನ ಮೊಗವೀರ ಬಾಂಧವರಿಗಾಗಿ ಎರಡು ದಿನಗಳ “ಮೊಗವೀರ ಪ್ರೀಮಿಯರ್‌ ಲೀಗ್‌” ನಡೆಯಲಿದೆ. ಫ್ರಾಂಚೈಸಿಗಳು ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಿದ್ದಾರೆ. ಚಾಂಪಿಯನ್‌ ತಂಡವು 2 ಲಕ್ಷ ರೂ ಬಹುಮಾನ ಗೆಲ್ಲಲಿದ್ದು, ರನ್ನರ್‌ಅಪ್‌ ತಂಡ 1 ಲಕ್ಷ ರೂ. ಬಹುಮಾನ ಗೆಲ್ಲಲಿದೆ. ಪ್ರವೇಶ ಶುಲ್ಕ ರೂ ,20,000.

ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿ: ಫೆಬ್ರವರಿ 17 ರಿಂದ 19ರವರೆಗೆ ನೆಹರೂ ಮೈದಾನದಲ್ಲಿ ರಾಷ್ಟ್ರ ಮಟ್ಟದ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿ ನಡೆಯಲಿದ್ದು, ಒಟ್ಟು ಆಹ್ವಾನಿತ 16 ತಂಡಗಳು ಪಾಲ್ಗೊಳ್ಳಲಿವೆ. ಗೋವಾ, ಚೆನ್ನೈ, ಕೇರಳ ಸೇರಿದಂತೆ ದೇಶದ ವಿವಿಞದ ರಾಜ್ಯಗಳಿಂದ ಮಾತ್ರವಲ್ಲದೆ ಕರ್ನಾಟಕದ ಬಲಿಷ್ಠ ತಂಡಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿವೆ ಎಂದು ಟೂರ್ನಿಯ ಸಂಚಾಲಕರಾದ ಸುಧೀರ್‌ ವಿ. ಅಮೀನ್‌ www.sportsmail.net ಗೆ ತಿಳಿಸಿದ್ದಾರೆ.

ವಿಜೇತ ತಂಡವು 4,00,004   ರೂ. ಬಹುಮಾನ ಮತ್ತು ಆಕರ್ಷಕ ಟ್ರೋಫಿ ಗೆಲ್ಲಲಿದ್ದು, ರನ್ನರ್‌ ಅಪ್‌ ತಂಡವು ಟ್ರೋಫಿಯ ಜೊತೆಯಲ್ಲಿ 2,00,002 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಳ್ಳಲಿದೆ. ಸೆಮಿಫೈನಲ್‌ನಲ್ಲಿ ಸೋತ ತಂಡಗಳು ತಲಾ 50,೦೦೦ ರೂ. ನಗದು ಬಹುಮಾನ ಗೆಲ್ಲಲಿವೆ. ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗುವ ಆಟಗಾರ ಕಾಂಚನ್‌ ಹ್ಯೂಂಡೈ ಕೊಡಮಾಡುವ ಆಕರ್ಷಕ ಬೈಕ್‌ ತಮ್ಮದಾಗಿಸಿಕೊಳ್ಳಲಿದ್ದಾರೆ. ಅಲ್ಲದೆ ಉತ್ತಮ ಬ್ಯಾಟ್ಸ್‌ಮನ್‌ ಮತ್ತು ಉತ್ತಮ ಬೌಲರ್‌ ಹಾಗೂ ಉತ್ತಮ ಫೀಲ್ಡರ್‌ ಪ್ರಶಸ್ತಿಗಳಿಗೆ ಆಕರ್ಷಕ ಬಹುಮಾನವಿರುತ್ತದೆ.

ಮಾರುತಿಯ ಕೀರುತಿಯಲ್ಲಿ ಮಾನವೀಯ ಹೆಜ್ಜೆಗಳು:

ಕಡಲ ಕಸುಬನ್ನೇ ಬದುಕಾಗಿಸಿಕೊಂಡಿರುವ ಉಳ್ಳಾಲ ಮೊಗವೀರ ಪಟ್ನದ ಮಾರುತಿ ಯುವಕ ಮಂಡಲ ಮತ್ತು ಮಾರುತಿ ಕ್ರಿಕೆಟ್‌ ಸಂಸ್ಥೆಯು ಕಳೆದ 35 ವರ್ಷಗಳಿಂದ ಕ್ರಿಕೆಟ್‌ ಮಾತ್ರವಲ್ಲದೆ ಸಮಾಜದ ಒಳಿತಿಗಾಗಿ ವಿವಿಧ ರೀತಿಯ ಸೇವೆಯನ್ನು ಮಾಡುತ್ತ ಬಂದಿದೆ. ಬೆಳಿಗ್ಗೆ ಹೊಟ್ಟೆಪಾಡಿಗಾಗಿ ಸಮುದ್ರ ಸೇರಿದರೆ ಮನೆ ಸೇರುವುದ ಸಂಜೆ. ಮೀನುಗಾರಿಕೆಗೆ ಬಿಡುವಿದ್ದಾಗ ಕ್ರೀಡೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಈ ಸಂಸ್ಥೆಯ ಸಾಧನೆಯನ್ನು ಮೆಚ್ಚಿ ದಕ್ಷಿಣ ಕನ್ನಡ ಜಿಲ್ಲಾಡಳಿತ 1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಸ್ಥಳೀಯ ಮೀನುಗಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಾರುತಿ ಯುವಕ ಮಂಡಲದ ಸದಸ್ಯರು ಒಂದಾಗಿ ಉಳ್ಳಾಲ ಮೊವೀರ ಹಿರಿಯ ಪ್ರಾಥಮಿಕ ಶಾಲೆಗೆ 1 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಕೊಟ್ಟಿರುವುದು ಸ್ತತ್ಯರ್ಹ. ಇಲ್ಲಿಯೇ ಓದಿದ ಯುವಕರು ಈ ಘನ ಕಾರ್ಯವನ್ನು ಮಾಡಿದ್ದಾರೆ. ಯುವಕ ಮಂಡಲವೊಂದು ಶಿಕ್ಷಣದ ಕಾಳಜಿ ಹೊತ್ತು ಇಷ್ಟು ದೊಡ್ಡ ಮೊತ್ತದಲ್ಲಿ ಕಟ್ಟಡವನ್ನು ನಿರ್ಮಿಸಿ ಕೊಟ್ಟಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು ಎಂದರೆ ಅತಿಶಯೋಕ್ತಿಯಾಗಲಾರದು.

2012ರಲ್ಲಿ ಸಂಸ್ಥೆಯ ರಜತಮಹೋತ್ಸವ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೀಚ್‌ ಉತ್ಸವ ಆಚರಿಸಿ ಇತರರಿಗೆ ಮಾದರಿಯಾದುದು ಸಂಸ್ಥೆಯ ಯಶಸ್ಸಿನ ಹಾದಿಯಲ್ಲಿ ಮೈಲಿಗಲ್ಲು.

ಯುವಕ ಮಂಡಲ ಎಂದರೆ ಬರೇ ಆಡಿಕೊಂಡಿರುವ ಯುವಕರಿಂದ ಕೂಡಿರುತ್ತದೆ ಎಂಬ ಭಾವನೆ ಅನೇಕರಲ್ಲಿದೆ, ಆದರೆ ಮಾರುತಿ ಯುವಕ ಮಂಡಲ ಆಟದ ಜೊತೆಯಲ್ಲಿ ಸಮಾಜದಲ್ಲಿರುವ ಆಸಕ್ತರಿಗೆ ನೆರವಿನ ಹಸ್ತವನ್ನು ಸದಾ ಚಾಚುತ್ತ ಬಂದಿದೆ. ದೈಹಿಕವಾಗಿ ಆಶಕ್ತರಾದವರಿಗೆ ಕ್ಯಾನ್ಸರ್‌ ಸೇರಿದಂತೆ ಮಾರಕ ರೋಗಗಳಿಂದ ಬಳಲುತ್ತಿರುವವರಿಗೆ ಈ ಯುವಕ ಮಂಡಲ ಜಾತಿ ಮತ ಭೇದವಿಲ್ಲದೆ ಆರ್ಥಿಕ ನೆರವನ್ನು ನೀಡಿರುವುದು ಗಮನಾರ್ಹ.

ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ, ಯೋಧನರಿಗೆ ಮಾರುತಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತ ಬಂದಿದೆ.

ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪ್ರೋತ್ಸಾಹ, ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಂಸ್ಥೆ ಪ್ರತಿ ವರ್ಷ ನೀಡುತ್ತ ಬಂದಿದೆ. ಅಲ್ಲದೆ ಪ್ರತಿವರ್ಷ ಜಿಲ್ಲಾ ಮಟ್ಟದ ಮಾರುತಿ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸುತ್ತಿದೆ. ಇದರ ಜೊತೆಯಲ್ಲಿ ಸಾಮಾಜಿಕ ಸೇವಾ ಕಾರ್ಯಗಳನ್ನು ಸಂಸ್ಥೆಯು ಲಕ್ಷಾಂತರ ರೂ. ವ್ಯಯ ಮಾಡುತ್ತ ಮುಂದುವರೆಸಿಕೊಂಡು ಬಂದಿದೆ.

ರಾಜ್ಯಕ್ಕೆ ಪ್ರತಿಭಾವಂತ ಆಟಗಾರ ನಿಹಾಲ್‌ ಉಳ್ಳಾಲ್‌

ಕರ್ನಾಟಕದ ರಾಜ್ಯ ಕ್ರಿಕೆಟ್‌ನ ಉದಯೋನ್ಮುಖ ಮತ್ತು ಜನಪ್ರಿಯ ಆಟಗಾರ ನಿಹಾಲ್‌ ಉಳ್ಳಾಲ್‌ ರಾಜ್ಯ ಮಟ್ಟದ ಪಂದ್ಯಗಳನ್ನು ಆಡುವುದಕ್ಕೆ ಮೊದಲು ಮಾರುತಿ ಕ್ರಿಕೆಟ್‌ ಕ್ಲಬ್‌ನಲ್ಲಿ ಪಳಗಿದ ಆಟಗಾರ. ಫೆಬ್ರವರಿ 19 ರಂದು ನಡೆಯುವ ಫೈನಲ್‌ ಪಂದ್ಯದಲ್ಲಿ ನಿಹಾಲ್‌ ಉಳ್ಳಾಲ್‌ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.

ಕ್ರಿಕೆಟ್‌ ಟೂರ್ನಿಯ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸುಧೀರ್‌ ವಿ. ಅಮೀನ್‌: 9731733141 ವರದರಾಜ್‌: 7899752454, ಮಹೇಶ್‌: 9632628562

ಇಂಥ ಸಂಸ್ಥೆಗೆ ನೆರವಿನ ಅಗತ್ಯವಿದೆ:

ಈ ಸಂಸ್ಥೆ ಕೇವಲ ಕ್ರೀಡಾ ಚಟುವಟಿಕೆಗಳಲ್ಲಿ ಮಾತ್ರವಲ್ಲ, ಸಾಮಾಜಿಕ ಕಾಳಜಿಯಲ್ಲಿಯೂ ತನ್ನನ್ನು ಹೆಚ್ಚಾಗಿ ತೊಡಗಿಸಿಕೊಂಡಿದೆ. ಇಂಥ ಸಂಸ್ಥೆಗೆ ನೆರವು ನೀಡುವುದು ಇಂದಿನ ಅಗತ್ಯವಾಗಿದೆ. ಎಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೋ ಆ ಊರು ಅಭಿವೃದ್ಧಿಯ ಕಡೆಗೆ ಸಾಗುತ್ತದೆ. ಈ ಯುವ ಸಂಘಟನೆಗೆ ನೆರವಾಗುವವರಿಗೆ ಆದಾಯ ತೆರಿಗೆಯಲ್ಲಿನ (80G Tax Exemption)  ವಿನಾಯಿತಿ ಇರುತ್ತದೆ.

ನೆರವು ನೀಡುವವರು ಗಮನಿಸಿ

Name: Maruthi Yuvaka Mandala

Bank: Karnataka Bank

AC No: 5132500100317601

IFSC Code: KARB0000513

MICR Code: 575052019

Related Articles