Saturday, July 27, 2024

ರಾಷ್ಟ್ರೀಯ ಈಜು: ಕರ್ನಾಟಕ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ

ಕೇರಳದ ತಿರುವನಂತಪುರದಲ್ಲಿ ನಡೆದ 72 ನೇ ಗ್ಲೆನ್‌ಮಾರ್ಕ್ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ  ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಪುರುಷರ ವಿಭಾಗದಲ್ಲಿ  5 ಚಿನ್ನ ಹಾಗೂ 5 ಕೂಟ ದಾಖಲೆಗಳನ್ನು ಬರೆದಿರುವ ಕೇರಳದ ಸಜ್ಜನ್ ಪ್ರಕಾಶ್ ಉತ್ತಮ ಈಜುಗಾರ ಗೌರವಕ್ಕೆ ಪಾತ್ರರಾದರು. ಮಹಿಳಾ ವಿಭಾಗದಲ್ಲಿ ಕರ್ನಾಟಕದ ಸಲೋನಿ ದಲಾಲ್ 2 ಕೂಟ ದಾಖಲೆ ಸೇರಿದಂತೆ ೩ ಚಿನ್ನ ಗೆದ್ದು ಶ್ರೇಷ್ಠ ಈಜುಗಾರ್ತಿ ಗೌರವ ಗಳಿಸಿದರು.
86 ಅಂಕ ಗಳಿಸಿದ ಕರ್ನಾಟಕ ಪುರುಷರ ತಂಡ ಟೀಮ್ ಚಾಂಪಿಯನ್‌ಷಿಪ್ ಗೆದ್ದುಕೊಂಡಿತು. ರೈಲ್ವೆ ಸ್ಪೋರ್ಟ್ಸ್ ಉತ್ತೇಜನ ಮಂಡಳಿ 83 ಅಂಕ ಗಳಿಸಿ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿತು.
ಮಹಿಳಾ ವಿಭಾಗದಲ್ಲಿ 119 ಅಂಕ ಗಳಿಸಿದ  ಕರ್ನಾಟಕ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಎಸ್‌ಎಫ್ಐ 89 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿತು.
ಡೈವಿಂಗ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ  ಎಸ್‌ಎಸ್‌ಸಿಬಿ 36 ಅಂಕಗಳನ್ನು ಗಳಿಸಿ  ಅಗ್ರ ಸ್ಥಾನ ತನ್ನದಾಗಿಸಿಕೊಂಡಿತು.  ರೈಲ್ವೆ ಕ್ರೀಡಾ ಉತ್ತೇಜನ ಮಂಡಳಿ ಈ ವಿಭಾಗದಲ್ಲಿ 20 ಅಂಕ ಗಳಿಸಿ ಎರಡನೇ ಸ್ಥಾನ ತನ್ನದಾಗಿಸಿಕೊಂಡಿತು. ವನಿತೆಯರ ವಿಭಾಗದಲ್ಲಿ  ರೈಲ್ವೆ ಸ್ಪೋರ್ಟ್ಸ್ ಉತ್ತೇಜನ ಮಂಡಳಿ 31 ಅಂಕ ಗಳಿಸಿ ಅಗ್ರ ಸ್ಥಾನ ಗಳಿಸಿತು.  ಎಸ್‌ಎಫ್ಐ 11 ಅಂಕ ಗಳಿಸಿ ರನ್ನರ್ ಅಪ್ ಎನಿಸಿತು.
ವಾಟರ್‌ಪೋಲೋ ವಿಭಾಗದಲ್ಲಿ ರೈಲ್ವೆ ಸ್ಪೋರ್ಟ್ಸ್ ಉತ್ತೇಜನಾ ಮಂಡಳಿ  ಪ್ರಥಮ ಸ್ಥಾನ ಗಳಿಸಿದರೆ, ಮಹಿಳಾ ವಿಭಾಗದಲ್ಲಿ ಕೇರಳ ದ್ವಿತೀಯ ಸ್ಥಾನ ಗೆದ್ದುಕೊಂಡಿತು. ಮೂರನೇ ಸ್ಥಾನ ಬಂಗಾಳ ಹಾಗೂ ನಾಲ್ಕನೇ ಸ್ಥಾನ ಕರ್ನಾಟಕದ ಪಾಲಾಯಿತು.
227 ಅಂಕಗಳನ್ನು ಗಳಿಸಿದ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
ಒಟ್ಟು 20 ಹೊಸ ದಾಖಲೆಗಳು ಮೂಡಿ ಬಂದವು. ಪುರುಷರ ವಿಭಾಗದಲ್ಲಿ 13 ಹಾಗೂ ವನಿತೆಯರ ವಿಭಾಗದಲ್ಲಿ  7, ಹಾಗೂ ಡೈವಿಂಗ್ ವಿಭಾಗದಲ್ಲಿ 2 ದಾಖಲೆಗಳನ್ನು ನಿರ್ಮಾಣಗೊಂಡವು.

Related Articles