Monday, December 4, 2023

ರಾಷ್ಟ್ರೀಯ ಕ್ರೀಡಾ ದಿನಕ್ಕೆ ಶ್ರೀ ಕಂಠೀರವ ಕ್ರೀಡಾಂಗಣ ಸಜ್ಜು

ಬೆಂಗಳೂರು: ಹಾಕಿ ಮಾಂತ್ರಿಕ ಮೇಜರ್‌ ಧ್ಯಾನ್‌ಚಂದ್‌ ಅವರ ಹುಟ್ಟು ಹಬ್ಬದ ದಿನವಾದ ಆಗಸ್ಟ್‌ 29 ರಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ National Sports Day ಆಚರಿಸಲಾಗುತ್ತಿದೆ.

ಈ ಶುಭ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕೂಡ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯೂ ಇದರೊಂದಿಗೆ ಕೈ ಜೋಡಿಸಿದ್ದು ವಿವಿಧ ಸಾಹಸ ಕ್ರೀಡೆಗಳನ್ನು ಆಯೋಜಿಸಿದೆ. ಇದು ಮುಕ್ತ ಅವಕಾಶದಿಂದ ಕೂಡಿರುವ ಕ್ರೀಡಾ ಕೂಟವಾಗಿದೆ.

ಹಾಕಿ, ಫುಟ್ಬಾಲ್‌, ಹಗ್ಗಜಗ್ಗಾಟ, ಅಥ್ಲೆಟಿಕ್ಸ್‌, ಬಾಸ್ಕೆಟ್‌ಬಾಲ್‌, ಕಬಡ್ಡಿ, ವಾಲಿಬಾಲ್‌, ಆರ್ಚರಿ, ಫೆನ್ಸಿಂಗ್‌, ಬ್ಯಾಡ್ಮಿಂಟನ್‌, ಮಲ್ಲಕಂಬ, ಫೆನ್ಸಿಂಗ್‌ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳು ಈ ಸಂದರ್ಭದಲ್ಲಿ ನಡೆಯಲಿದೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲೂ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ.

ರಾಜ್ಯದ ನೂತನ ಕ್ರೀಡಾ ಸಚಿವ ಬಿ. ನಾಗೇಂದ್ರ, ಕ್ರೀಡಾ ಆಯುಕ್ತ ಶಶಿಕುಮಾರ್‌, ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜ್‌, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್ ಸೇರಿದಂತೆ ಪ್ರಮುಖರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Related Articles