Friday, October 4, 2024

ಕರ್ನಾಟಕದ ಪ್ರಮುಖ ಈಜುಪಟುಗಳು ಬೇರೆ ರಾಜ್ಯಗಳಿಗೆ ವಲಸೆ?

ಒಬ್ಬ ಈಜುಗಾರ ಅಂತಾರಾಷ್ಟ್ರೀಯ ಈಜಿನಲ್ಲಿ ಅತಿ ಹೆಚ್ಚು ಪದಕ ಗೆದ್ದ ಕಾರಣಕ್ಕೆ ಆತನಿಗೆ ಸಾಕಷ್ಟು ನಗದು ಬಹುಮಾನ ಸಿಕ್ಕಿತು. ಅದೇ ಕಾರಣಕ್ಕೆ ಕರ್ನಾಟಕ ರಾಜ್ಯ ಸರಕಾರ ಒಬ್ಬ ಕ್ರೀಡಾಪಟು ಕ್ರೀಡಾಕೂಟವೊಂದರಲ್ಲಿ ಎಷ್ಟೇ ಚಿನ್ನದ ಪದಕ ಗೆದ್ದರೂ ಒಂದು ಚಿನ್ನದ ಪದಕವನ್ನು ಮಾತ್ರ ಪರಿಗಣಿಸಲಾಗುವುದು ಎಂಬ ಕಾನೂನನ್ನು ಜಾರಿಗೆ ತಂದಿರುವುದು ಇತರ ರಾಜ್ಯಗಳು ನಗುವಂತೆ ಮಾಡಿದೆ. ಮಾತ್ರವಲ್ಲ ಕರ್ನಾಟಕದ ಚಿನ್ನದ ಮೀನುಗಳು ಬೇರೆ ರಾಜ್ಯಕ್ಕೆ ವಲಸೆ ಹೋಗುವ ಸಾಧ್ಯತೆ ಹೆಚ್ಚಿದೆ. Karnataka swimmers thinking to represent from other states.

ಪ್ರತಿಯೊಂದು ಒಲಿಂಪಿಕ್ಸ್‌ ಕ್ರೀಡೆಯ ನಿಯಮಗಳು ಇಡೀ ಜಗತ್ತೀಗೇ ಸಮಾವಾಗಿರುತ್ತದೆ. ನಗದು ಬಹುಮಾನ ನೀಡುವಲ್ಲಿ ವ್ಯತ್ಯಾಸವಿದ್ದರೂ ಪದಕಗಳನ್ನು ಪರಿಗಣಿಸುವ ರೀತಿ ಎಲ್ಲೆಡೆ ಒಂದೇ. ಮೈಕಲ್‌ ಫೆಲ್ಪ್ಸ್‌ 2008 ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಮೈಕಲ್‌ ಫೆಲ್ಪ್ಸ್‌ 8 ಚಿನ್ನದ ಪದಕ ಗೆದ್ದು ದಾಖಲೆ ಬರೆದರು. ಅದರಲ್ಲಿ ಹಲವು ವಿಶ್ವದಾಖಲೆಗಳೂ ಸೇರಿವೆ. ಆದರೆ ನಗದು ಬಹುಮಾನ ಕೊಡುವಾಗ “ಇಲ್ಲ ಇದೆಲ್ಲ ಸೇರಿದರೆ ಒಂದೇ,,,, ಎಲ್ಲರಿಗೂ ಭಗವಂತನು ತಂದೆ” ಅಂದರೆ ಅದನ್ನು ಕ್ರೀಡಾ ಸ್ಪೂರ್ತಿ ಎಂದು ಕರೆಯಲಾಗುತ್ತದೆಯೇ?. ಹಲವು ಪದಕಗಳನ್ನು ಗೆದ್ದು ಪ್ರಯೋಜನ ಇಲ್ಲವೆಂದ ಮೇಲೆ ಕೇವಲ ಒಂದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು, ಇಲ್ಲವಾದಲ್ಲಿ ರಾಜ್ಯವನ್ನೇ ಬಿಟ್ಟು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗುತ್ತದೆ.

“ಕಳೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು 88 ಪದಕಗಳನ್ನು ಗೆದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು. ಇದರಲ್ಲಿ ಈಜುಪಟುಗಳು ಗೆದ್ದಿರುವ ಪದಕಗಳೇ ಹೆಚ್ಚು. ಒಂದು ನಗದು ಬಹುಮಾನಕ್ಕೆ ಒಂದು ಪದಕವನ್ನೇ ಪರಿಗಣಿಸುವುದಾದರೆ ಇತರ ವಿಭಾಗಳಲ್ಲಿ ಸ್ಪರ್ಧಿಸಿ ಏನು ಪ್ರಯೋಜನ. ನಾವು ಬೇರೆ ರಾಜ್ಯವನ್ನು ಪ್ರತಿನಿಧಿಸುವ ಯೋಚನೆ ಮಾಡಬೇಕಾಗುತ್ತದೆ”, ಎಂದು ಈಜುಪಟುವೊಬ್ಬರು ತಿಳಿಸಿದ್ದಾರೆ.

ಒಬ್ಬ ಕ್ರೀಡಾಪಟು ಒಂದು ರಾಷ್ಟ್ರೀಯ ಪದಕವನ್ನು ಗೆಲ್ಲಬೇಕಾದರೆ ಅಲ್ಲಿ ಹಲವು ವಿಧದ ತ್ಯಾಗ ಇರುತ್ತದೆ. ಸರಕಾರ ನಗದು ಬಹುಮಾನ್ನು ನೀಡುವಾಗ ಕ್ರೀಡಾಪಟು ಒಂದು ಕ್ರೀಡಾಕೂಟದಲ್ಲಿ ಗೆಲ್ಲುವ ಎಲ್ಲ ಪದಕಗಳನ್ನೂ ಪರಿಗಣಿಸಬೇಕಾದ ಅಗತ್ಯ ಇದೆ. ಗೋವಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿದೆ. ಇಲ್ಲಿ ಗೆದ್ದಿರುವ ಕ್ರೀಡಾಪಟುಗಳಿಗೆ ನಗದು ಬಹುಮಾನ ಕೊಡುವಾಗ ಈಜುಗಾರರು ಗೆಲ್ಲುವ ಎಲ್ಲ ಪದಕಗಳನ್ನೂ ನಗದು ಬಹುಮಾನಕ್ಕೆ ಪರಿಗಣಿಸುವ ಅಗತ್ಯವಿದೆ. ರಾಜ್ಯ ಸರಕಾರದ ಕ್ರೀಡಾ ಇಲಾಖೆ ಈ ವಿಷಯದಲ್ಲಿ ಮುತುವರ್ಜಿ ವಹಿಸದೆ ರಾಷ್ಟ್ರ ಮಟ್ಟದಲ್ಲಿ ಗೆದ್ದ ಕೇವಲ ಒಂದೇ ಪದಕವನ್ನು ನಗದು ಬಹುಮಾನಕ್ಕೆ ಪರಿಗಣಿಸುವುದು ಮುಂದುವರಿಸಿದರೆ ರಾಜ್ಯದ ಈಜುಗಾರರು ತಮಗಿರುವ ಬೇಡಿಕೆಗೆ ಸ್ಪಂದಿಸಿ ಬೇರೆ ರಾಜ್ಯಗಳನ್ನು ಪ್ರತಿನಿಧಿಸುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು, ಕ್ರೀಡಾ ಸಚಿರುವರು, ಯುವಜನ ಸೇವಾ ಕ್ರೀಡಾ ಇಲಾಖೆಯ ಆಯಕ್ತರು ಹಾಗೂ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಸೂಕ್ತ.

Related Articles