Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಫಿಫಾ ವಿಶ್ವಕಪ್‌: ಮೆಕ್ಸಿಕನ್‌ ವೇವ್ಸ್‌ ಜಯದ ಆರಂಭ

ಮೆಕ್ಸಿಕೋ: ಮೊದಲ ಪಂದ್ಯದಲ್ಲೇ ಮೂರು ರೆಡ್‌ ಕಾರ್ಡ್‌. ಫಿಫಾ ಹೊಸ ನಿಯಮಗಳಿಂದ ಆಟಗಾರರಿಗೆ ಎಚ್ಚರಿಕೆ. 23ನೇ ಫಿಫಾ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸಹ ಆತಿಥ್ಯ ಹೊಂದಿರುವ ಮೆಕ್ಸಿಕೋ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. FIFA WC 2026: Mexico Ignite World Cup Dream As Quinones And Jimenez Down South Africa In Fiery Opener

ದಕ್ಷಿಣ ಆಫ್ರಿಕಾ ತಂಡದಲ್ಲಿ ಇಬ್ಬರು ಹಾಗೂ ಮೆಕ್ಸಿಕೋ ತಂಡದಲ್ಲಿ ಒಬ್ಬರು ರೆಡ್‌ ಕಾರ್ಡ್‌ಗೆ ಗುರಿಯಾಗುವ ಮೂಲಕ ಈ ಬಾರಿಯ ಹೊಸ ನಿಯಮಗಳು ಆಟಗಾರರಿಗೆ ಎಚ್ಚರಿಕೆಯ ಕರೆ ನೀಡಿದೆ,

ಮೆಕ್ಸಿಕೋ ನಗರದ ಅಜ್ಟೆಕಾ ಅಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೆಕ್ಸಿಕೋ ಪರ ಜುಲಿಯನ್‌ ಕ್ವಿನೋನಸ್‌ ಹಾಗೂ ರೌಲ್‌ ಜಿಮೆನೆಜ್‌ ಗೋಲು ಗಳಿಸುವುದರೊಂದಿಗೆ ಎಂಟನೇ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಮೊದಲ ಪಂದ್ಯದಲ್ಲಿ ಆಡುತ್ತಿರುವ ಮೆಕ್ಸಿಕೋ ಮೊದಲ ಬಾರಿಗೆ ಜಯ ಗಳಿಸಿತು.


administrator