sportsmail:
ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ 81ನೇ ಅಖಿಲ ಭಾರತ ಅಂತ್ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆದೇಶ್ 10,000 ಮೀ. ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.
ಇದರೊಂದಿಗೆ ಆತಿಥೇಯ ಮಂಗಳೂರು ವಿಶ್ವವಿದ್ಯಾಲಯ ಚಿನ್ನದೊಂದಿಗೆ ತನ್ನ ಪದಕದ ಖಾತೆ ತೆರೆದಿದೆ.
29:15.46 ಸೆಕೆಂಡುಗಳಲ್ಲಿ ಗುರಿ ತಲುಪಿದ ಆದೇಶ್ ಅಗ್ರ ಸ್ಥಾನದೊಂದಿಗೆ ನೂತನ ದಾಖಲೆ ಬರೆದರು.
29:18.82 ಸೆಕೆಂಡುಗಳಲ್ಲಿ ಗುರಿ ತಲುಪಿದ ಜನನಾಯಕ ಚಂದ್ರಶೇಖರ್ ವಿಶ್ವವಿದ್ಯಾನಿಲಯದ ಆರೀಫ್ ಅಲಿ ಹಿಂದಿನ ಕೂಟ ದಾಖಲೆಯನ್ನು ಮುರಿದು ಬೆಳ್ಳಿ ಗೆದ್ದರು.
29:46.39 ಸೆಕೆಂಡುಗಳಲ್ಲಿ ಗುರಿ ತಲುಪಿದ ಮಹರ್ಷಿ ದಯಾನಂದ ಸಾಗರ್ ವಿವಿಯ ಶುಭಂ ಸಿಂಧೂ ಕಂಚಿನ ಪದಕ ಗೆದ್ದರು.
29:27.45 ಸೆಕೆಂಡುಗಳಲ್ಲಿ ಗುರಿ ತಲುಪಿದ ವಿ.ಬಿ.ಎಸ್.ಪಿ.ಯು. ಜೌನ್ಪುರದ ರಾಮ್ ವಿನೋದ್ ಯಾದವ್ ಹಿಂದಿನ ಕೂಟ ದಾಖಲೆಯನ್ನು ಮುರಿದು ಕಂಚಿನ ಪದಕ ಗೆದ್ದಿದ್ದರು, ಆದರೆ ಟ್ರ್ಯಾಕ್ ನಿಯಮ ಉಲ್ಲಂಘಿಸಿದ ಕಾರಣ ಅವರನ್ನು ಅನರ್ಹರೆಂದು ಘೋಷಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಇನ್ನೋರ್ವ ಸ್ಪರ್ಧಿ ಭುಪೇಂದ್ರ ಸಿಂಗ್ 11ನೇ ಸ್ಥಾನ ಗಳಿಸಿದರು.