Tuesday, November 12, 2024

ಬನ್ನಿ ಭಾರತ ಹಾಕಿ ತಂಡವನ್ನು ಬೆಂಬಲಿಸೋಣ 

Let Your Heart Beat for Hockey

ಬನ್ನಿ ಭಾರತ ಹಾಕಿ ತಂಡವನ್ನು ಬೆಂಬಲಿಸೋಣ 

ಹಾಕಿಗಾಗಿ ನಿಮ್ಮ ಹೃದಯ ಮಿಡಿಯುತ್ತಿದೆಯೇ? ಒಡಿಶಾ ಹಾಕಿ ವಿಶ್ವಕಪ್ ಗೆ ದಿನಗಣನೆ ಆರಂಭಗೊಡಿದೆ. ಭಾರತೀರೆಲ್ಲರೂ ಈಗ ನಮ್ಮ ಹಾಕಿ ತಂಡವನ್ನು ಬೆಂಬಲಿಸಬೇಕಾಗಿದೆ. ಪ್ರತಿಯೊಬ್ಬ ಭಾರತೀಯರು ನಮ್ಮ ತಂಡಕ್ಕೆ ಬೆಂಬಲ ನೀಡಬೇಕೆಂದು ಒಡಿಶಾ ಸರಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಕಳಿಂಗ ಕ್ರೀಡಾಂಗಣದಲ್ಲಿ ನವೆಂಬರ್ ೨೮ ರಿಂದ ಡಿಸೆಂಬರ್ ೧೬ರ ವರೆಗೆ ವಿಶ್ವ ಹಾಕಿ ಹಬ್ಬ ನಡೆಯಲಿದೆ.

ಸ್ಪೋರ್ಟ್ಸ್ ಮೇಲ್ ವರದಿ:ಹಾಕಿ ವಿಶ್ವ ಕಪ್ ನ ಪ್ರಚಾರದ ಅಭಿಯಾನ “ಹಾಕಿಗಾಗಿ ಹೃದಯ ಮಿಡಿಯುತ್ತಿದೆ” ಎಂಬ ಘೋಷ ವಾಖ್ಯದೊಂದಿಗೆ ಆರಂಭಗೊಂಡಿದೆ. ಸಂಗೀತ, ಮನರಂಜನೆ, ಚರ್ಚೆ ಮೂಲಕ ದೇಶಾದ್ಯಂತ ಅಭಿಯಾನ ನಡೆಯಲಿದೆ. “ನನ್ನ ಹೃದಯ ಹಾಕಿಗಾಗಿ ಮಿಡಿಯುತ್ತಿದೆ …ನಿಮ್ಮದು?” ಎಂದು ಹಾಕಿ ಆಟಗಾರರು ದೇಶವನ್ನು ಪ್ರಶ್ನಿಸಿದ್ದಾರೆ.

ಹಾಕಿಗಾಗಿ ನಿಮ್ಮ ಹೃದಯಾಂತರಾಳದ ಪ್ರೀತಿಯನ್ನು ನೀಡಿ ಎಂದು ನಾವು ನಿಮ್ಮನ್ನು ಕೇಳುತ್ತಿದ್ದೇವೆ ಎಂದು ಆಟಗಾರರು ಕೇಳುತ್ತಿದ್ದಾರೆ. ಇದಕ್ಕಾಗಿ ನಿಮ್ಮ ಪ್ರೀತಿಯನ್ನು ಸಂಗ್ರಹಿಸಲು ವಿಶೇಷವಾಗಿ ವಿನ್ಯಾಸ ಮಾಡಿರುವ ಹಾಕಿ ಸ್ಟಿಕ್ ನಿಮ್ಮನ್ನು ಆಕರ್ಶಿಸಲಿದೆ. ಹಾರ್ಟ್ ಬೀಟ್  ಹೆಸರಿನ ಹಾಕಿ ಸ್ಟಿಕ್ ದೇಶಾದ್ಯಂತ ಪ್ರಯಾಣ ಮಾಡಲಿದೆ. ಹಾಕಿಯ ಬಗ್ಗೆ ಅಭಿಮಾನಿಗಳ ಧ್ವನಿ ಸಂಗ್ರಹಿಸಿ ಉದ್ಘಾಟನಾ ಸಮಾರಂಭದಲ್ಲಿ ಜಗತ್ತಿನ ೧೬ ನಾಯಕರುಗಳ ಸಂಮುಖದಲ್ಲಿ ಪ್ರದರ್ಶಿಸಲಾಗುವುದು. ಹಾಕಿಯ ಬಗ್ಗೆ ಭಾರತೀಯರಿಗಿರುವ ಹೃದಯ ಬಡಿತ ಹಾಗು ಪ್ರೀತಿಯನ್ನು ಜಗತ್ತಿನ ಇತರ ಹಾಕಿ ತಂಡಗಳ ನಾಯಕರುಗಳಿಗೆ ಪರಿಚಯಿಸಲಾಗುವುದು.

ಚಂಡೀಗಢ, ಬೆಂಗಳೂರು, ಮುಂಬೈ, ಭೋಪಾಲ್, ರೂರ್ಕೆಲಾ ಸೇರಿದಂತೆ ದೇಶದ ಪ್ರಮುಖ ಆರು ನಗರಗಳಲ್ಲಿ ವಿಶೇಷ ವಿನ್ಯಾಸದ ಹಾಕಿ ಸ್ಟಿಕ್ ಪ್ರದರ್ಶನದಲ್ಲಿರುತ್ತದೆ. ಭುವನೇಶ್ವರದಲ್ಲಿರುವ ಕಳಿಂಗ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಹೃದಯ ಬಡಿತವನ್ನು ದಾಖಲಿಸಲು ಪ್ರತ್ಯೇಕ ಸ್ಟಿಕ್ ಇಡಲಾಗುವುದು, ಹಾರ್ಟ್ ಬೀಟ್ ವಾಹನಗಳು ಚೆನ್ನೈ, ಲಕ್ನೌ, ಜಾಲಂದರ್, ಹೊಸದಿಲ್ಲಿ, ರಾಂಚಿ ನಗರಗಳಲ್ಲಿ ಪ್ರಯಾಣಿಸಲಿದೆ.

Related Articles