ಅದಿತಿ, ಸಮ್ಯಕಾ ಟಿಟಿ ಚಾಂಪಿಯನ್ಸ್

0
275
ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಧಾರವಾಡದ ಕಾಸ್ಮೋಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಜೋಶಿ ಅಕಾಡೆಮಿಯ ಅದಿತಿ ಜೋಶಿ, ತೃಪ್ತಿ ಪುರೋಹಿತ್ ಹಾಗೂ ಸಮಯಕ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ತೃಪ್ತಿ ಪುರೋಹಿತ್  ೮-೧೧, ೯-೧೧, ೧೧-೭, ೧೧-೩, ೧೧-೩ ಅಂತರದಲ್ಲಿ ಸಹನಾ ಎಚ್. ಮೂರ್ತಿ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು.
ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ  ಸಮಯಕ್ ಕಶ್ಯಪ್ ೧೧-೫, ೧೧-೪, ೧೨-೧೦ ಅಂತರದಲ್ಲಿ ರೋಹಿತ್ ಶಂಕರ್‌ಗೆ ಸೋಲುಣಿಸಿ ಪ್ರಶಸ್ತಿ ಗೆದ್ದರು.  ಬಾಲಕಿಯರ ಜೂನಿಯರ್ ವಿಭಾಗದಲ್ಲಿ ಅದಿತಿ ಪಿ. ಜೋಶಿ ೧೨-೧೦, ೧೧-೪, ೬-೧೧, ೩-೧೧, ೯-೧೧, ೧೧-೫ ಅಂತರದಲ್ಲಿ ಜಯ ಗಳಿಸಿ ಅಗ್ರ ಸ್ಥಾನ ಗಳಿಸಿದರು.