Thursday, October 10, 2024

ಸೌಹಾರ್ಧ ಬೆಸೆದ ಕೋಡಿ ಕ್ರಿಕೆಟ್‌ ಫೆಸ್ಟ್‌

ಕುಂದಾಪುರ: ಕ್ರೀಡೆಯ ಮೂಲಕ ಸಮಾಜದಲ್ಲಿ ಸೌಹಾರ್ಧತೆ ಬೆಸೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕುಂದಾಪುರ ಕೋಡಿಯಲ್ಲಿ ಕೋಡಿಯ ನಿವಾಸಿಗಳಿಗಾಗಿಯೇ ಲಕ್ಕಿಸ್ಟಾರ್‌ ಕ್ಲಬ್‌ ಕೋಡಿ ಹಾಗೂ ವೆಲ್‌ಫೇರ್‌ ಅಸೋಸಿಯೇಷನ್‌ ಕೋಡಿ ಒಂದಾಗಿ ಕೋಡಿ ಕ್ರಿಕೆಟ್‌ ಫೆಸ್ಟ್‌ನ್ನು ಅಯೋಜಿಸಿತ್ತು. Kodi Cricket Fest: Cricket for harmony in Kundapura Kodi.

ಟೌನ್‌ ಎಕೆಎಂಎಸ್‌ ತಂಡ ಫೈನಲ್‌ ಪಂದ್ಯದಲ್ಲಿ ಕಿಂಗ್‌ಡಮ್‌ ಥಂಡರ್ಸ್‌ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ವಿಜೇತ ಟೌನ್‌ ಎಕೆಎಂಎಸ್‌ ತಂಡ 1.5 ಲಕ್ಷ ರೂ, ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ಸ್‌ ಅಪ್‌ ಕಿಂಗ್‌ಡಮ್‌ ಥಂಡರ್ಸ್‌ 1 ಲಕ್ಷ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಗೆದ್ದುಕೊಂಡಿತು. ಶಿಸ್ತಿನ ಆಟ ಪ್ರದರ್ಶಿಸಿದ ಹುಬೈಸ್‌ ಹಂಟರ್ಸ್‌ ತಂಡ ಫೇರ್‌ ಪ್ಲೇ ಪ್ರಶಸ್ತಿಗೆ ಅರ್ಹವಾಯಿತು. ಶರತ್‌ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿ ನೂತನ ಪಲ್ಸರ್‌ ಬೈಕನ್ನು ಬಹುಮಾನವಾಗಿ ಸ್ವೀಕರಿಸಿದರು. ಅಜಾದ್‌ ಉತ್ತಮ ವಿಕೆಟ್‌ ಕೀಪರ್‌,  ಮುನಾವರ್‌ ಉತ್ತಮ ಫೀಲ್ಡರ್‌, ಅಲ್ತಫ್‌ ಉತ್ತಮ ಬೌಲರ್‌ ಹಾಗೂ ಜವ್ಹಾರ್‌ ಉತ್ತಮ ಬ್ಯಾಟ್ಸ್‌ಮನ್‌ ಗೌರವಕ್ಕೆ ಪಾತ್ರರಾದರು.

ಕೋಡಿಯ ಎಲ್ಲ ಸಮುದಾಯದವರು ಒಂದಾಗಿ ಈ ಟೂರ್ನಿಯಲ್ಲಿ ಪಾಲ್ಗೊಂಡು ಹೊಸ ವರ್ಷವನ್ನು ಸ್ವಾಗತಿಸಿದರು. ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಗಣ್ಯರಾದ ಅಶ್ರಫ್‌ ಬ್ಯಾರಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ ಈ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಪಾಲ್ಗೊಂಡಿದ್ದವು. ಕೋಡಿಯ ಬ್ಯಾರೀಸ್‌ ಅಂಗಣದಲ್ಲಿ ನಡೆದ ಟೂರ್ನಿಯಲ್ಲಿ ಹುಬೈಶ್‌ ಹಂಟರ್ಸ್‌, ಟೀಮ್‌ ಎಸ್‌ಡಬ್ಲ್ಯು ಕುಂದಾಪುರ, ಬಾಪು & ಸನ್ಸ್‌, ಜಯಾರ್‌ ನೈಟ್‌ರೈಡರ್ಸ್‌, ಅಹದ್‌ ಆಫ್ನಾ ವಾರಿಯರ್ಸ್‌, ಟೌನ್‌ ಎಕೆಎಂಎಸ್‌, ಕಿಂಗ್‌ಡಮ್‌ ಥಂಡರ್ಸ್‌, ಮೈಟಿ ಕಾರ್ಸ್‌, ಕೋಡಿ ಈಗಲ್ಸ್‌ ಹಾಗೂ ಗೋಲ್ಡನ್‌ ಬಾಯ್ಸ್‌ ತಂಡಗಳು ಪಾಲ್ಗೊಂಡಿದ್ದವು.

Related Articles